ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯ ವತಿಯಿಂದ ಶಾಲೆಗಳಲ್ಲಿ ‘ಸಂಸ್ಕಾರ ನೋಟ್ ಬುಕ್' ವಿತರಣೆ

Upayuktha
0


ಬೆಂಗಳೂರು: ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯ ವತಿಯಿಂದ “ಸಮಾಜ ಸಹಾಯ" ಅಭಿಯಾನದ ಅಡಿಯಲ್ಲಿ ಬೆಂಗಳೂರಿನ ಬನಶಂಕರಿಯಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾಶಾಲಾ (ಪ್ರೌಢಶಾಲೆ)ಯಲ್ಲಿ ‘ಸಂಸ್ಕಾರ ವಹಿ’ ಅಂದರೆ ನೋಟ್‌ಬುಕ್ ಗಳನ್ನು ವಿತರಿಸಲಾಯಿತು. 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡರು.


ಈ ಸಂದರ್ಭದಲ್ಲಿ ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯ ಕಾರ್ಯಕರ್ತರಾದ ಧನಲಕ್ಷ್ಮೀ ವಿ.ಕೆ ಮಾತನಾಡಿ, ಸಂಸ್ಕಾರ ವಹಿಗಳ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ಮಕ್ಕಳಿಗೆ ಪ್ರಭೋದನೆ ನೀಡಿದರು. ‘ಇತ್ತೀಚಿನ ದಿನಗಳಲ್ಲಿ ಮಾರ್ಕೆಟ್‌ನಲ್ಲಿ ಸಿಗುವ ನೋಟ್ ಬುಕ್‌ಗಳ ಮುಖಪುಟದಲ್ಲಿ ಸಿನೆಮಾ ತಾರೆಯರ ಹಾಗೂ ಅರೆಬರೆ ಬಟ್ಟೆ ಧರಿಸಿದ ನಾನಾ ರೀತಿಯ ಚಿತ್ರ ಇರುವ ನೋಟ್‌ಬುಕ್ ಗಳನ್ನು ವಿದ್ಯಾರ್ಥಿಗಳು ಖರೀದಿಸಬೇಕಾಗುತ್ತದೆ. ಇಂತಹ ಸಂಸ್ಕಾರ ಹೀನ ಚಿತ್ರಗಳನ್ನು ನೋಡುತ್ತ ಅವರಲ್ಲಿ ನೈತಿಕತೆಯ ಬದಲು ಕೆಟ್ಟ ಸ್ವಭಾವಗಳ ಸಂಸ್ಕಾರವಾಗುವ ಸಂಭವವಿರುತ್ತದೆ. ಬಾಲ್ಯದಲ್ಲಿಯೇ ಸುಸಂಸ್ಕಾರಗಳ ಅಭ್ಯಾಸವಾದರೆ ಅವರ ಮುಂದಿನ ಜೀವನ ಆದರ್ಶ ಮತ್ತು ಉಜ್ವಲವಾಗುತ್ತದೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳು, ಅದಕ್ಕಾಗಿ ಪ್ರತಿಯೊಬ್ಬರ ಭವಿಷ್ಯ ಆದರ್ಶವಾಗಲು ಈ ಸಂಸ್ಕಾರ ವಹಿಗಳನ್ನು ವಿತರಿಸಲಾಗುತ್ತಿದೆ’ ಎಂದರು.


ಅವರು ನೋಟ್ ಬುಕ್‌ಗಳ ವಿಶೇಷತೆಯನ್ನು ವಿವರಿಸುತ್ತಾ, ‘ಸಂಸ್ಕಾರ ವಹಿಯ ಮುಖಪುಟ ಹಾಗೂ ಹಿಂಬದಿಯ ಪುಟದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರ ಪುರುಷರ, ಒಳ್ಳೆಯ ರಾಜ್ಯಾಡಳಿತ ನಡೆಸಿ ಪ್ರಜೆಗಳ ಹಿತಕ್ಕಾಗಿಯೇ ದುಡಿದ ರಾಜ-ಮಹಾರಾಜರ ಆದರ್ಶಗಳು, ಒಳಗಿನ ಪುಟದಲ್ಲಿ ಸುಸಂಸ್ಕಾರ, ನೈತಿಕತೆಯ ಬಗ್ಗೆ ವಿಷಯ ಒಳಗೊಂಡಿರುತ್ತದೆ. ಅದನ್ನು ಓದಿ ತಿಳಿದುಕೊಂಡು ಜೀವನದಲ್ಲಿ ಆಳವಡಿಸಿಕೊಂಡರೆ ಮಕ್ಕಳು ‘ಆದರ್ಶ ವಿದ್ಯಾರ್ಥಿ’ಯಾಗಿ ರೂಪುಗೊಳ್ಳುವುದರಲ್ಲಿ ಸಂದೇಹವಿಲ್ಲ, ಇದರಿಂದ ಮುಂದೆ ಅವರು ‘ಆದರ್ಶ ರಾಷ್ಟ್ರ’ ಕಟ್ಟಲು ಸಾಧ್ಯವಾಗುವುದು’ ಎಂದರು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತರಾದ ಸೌ. ಕೋಮಲ ಕಾಶಿ,  ಪುಣ್ಯವತಿ , ಸೌ. ಜಯಂತಿ, ಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಜಿ. ನಾಗರಾಜ್ ನಾಯ್ಕ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top