ದೇರಳಕಟ್ಟೆ: ಬೋಳಿಯಾರ್ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಚೂರಿಯಿಂದ ಇರಿದ ಪ್ರಕರಣ ತೀವ್ರ ಕಳವನ್ನುಂಟು ಮಾಡಿದೆ. ಮೋದಿ ಅವರ ಪ್ರಮಾಣ ವಚನ ಬಳಿಕ ವಿಜಯೋತ್ಸವ ಆಚರಿಸಿ ವಾಪಾಸ್ ಬರುತ್ತಿದ್ದಾಗ ಭಾರತ್ ಮಾತಾ ಕಿ ಜೈ ಅಂದ ಮಾತ್ರಕ್ಕೆ ಚೂರಿಯಿಂದ ಇರಿದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದ್ದು, ಸರಕಾರ ಪ್ರಾಯೋಜಿತ ಜಿಹಾದ್ ಎಂದು ಹೇಳಬೇಕಾಗುತ್ತದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಯಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ಸೌಹಾರ್ದತೆ ಎಂಬುದು ರಕ್ತದಲ್ಲಿ ಬರಬೇಕು. ಕಾಂಗ್ರೆಸ್‍ನ ರಾಜಕೀಯ ಓಲೈಕೆಯ ಜಿಹಾದಿ ಶಕ್ತಿಗಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಹಿಂಸಾತ್ಮಕ ವಾತಾವರಣ ಸೃಷ್ಟಿಸುತ್ತಾರೆ. ಪಾಕಿಸ್ತಾನ ಜಿಂದಾಬಾದ್ ಹೇಳುತ್ತಾರೆ. ಇಷ್ಟಾದರೂ ಹಿಂಸಾ ನಿರತರ ಮೇಲೆ ಕೇಸ್ ಮಾಡುವುದಿಲ್ಲ. ಆದರೆ ಸುಳ್ಳು ಕೇಸ್ ದಾಖಲಿಸಿ ಬಿಜೆಪಿ ಶಾಸಕರು, ಕಾರ್ಯಕರ್ತರನ್ನು ಬಂಧಿಸುತ್ತಾರೆ ಎಂದು ಶಾಸಕರು ಹೇಳಿದರು.
ಜಿಹಾದಿ ಶಕ್ತಿಗಳನ್ನು ಮಟ್ಟ ಹಾಕಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ವಿಫಲವಾಗಿದ್ದು, ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರ ಒತ್ತಡದಿಂದ ಬಿಜೆಪಿಗರ ಮೇಲೆ ಕೇಸು ದಾಖಲಿಸುತ್ತಿದೆ. ತನಿಖೆಗೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ರಾಜ್ಯದಲ್ಲಿ ಮುಂದೆ ಕಾನೂನು ಸುವ್ಯವಸ್ಥೆ ಮತ್ತಷ್ಟು ಹಾಳಾದರೆ ಸರಕಾರ, ಪೊಲೀಸ್ ಇಲಾಖೆ ಹೊಣೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರಣದೀಪ್ ಕಾಂಚನ್, ಸೀತೇಶ್ ಕೊಂಡೆ, ಅಶ್ರಿತ್ ನೊಂಡ, ನಿಶಾನ್ ಪೂಜಾರಿ, ಮುರಳಿ ಕೊಣಾಜೆ, ಯಶಪಾಲ್ ಸಾಲ್ಯಾನ್, ಜಿತೇಶ್ ದೇವಾಡಿಗ, ಪ್ರಸಾದ್ ಕುಂಪಲ, ನಿತಿನ್ ಅರಸ್, ಲವೀಶ್ ಕುಮಾರ್, ನಿತಿನ್ ಭಂಡಾರಿ, ಮತ್ತಿತರರು ಶಾಸಕರ ಜತೆಗಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ