ವಿದ್ಯಾರ್ಥಿ ಜೀವನದಲ್ಲಿ ಸಮಯ, ಸಮಯ ಪ್ರಜ್ಞೆಯ ಮಹತ್ವ

Upayuktha
0

 

ಮಯದ ಸಮರ್ಪಕ ನಿರ್ವಹಣೆಯು ಮನುಷ್ಯರ ಯಶಸ್ಸಿನ ಒಂದು ಅತೀ ಮಹತ್ವದ ಮೆಟ್ಟಿಲು ಎನ್ನಲಾಗುತ್ತದೆ. ಯಶಸ್ವಿ ವ್ಯಕ್ತಿಗಳು ತಾವು ಅಂದುಕೊಂಡ ಗುರಿಯನ್ನು ತಲುಪಲು ಸಮಯವನ್ನು ತಮ್ಮ ಅಗತ್ಯದ ಕೆಲಸಕ್ಕೆ ತಕ್ಕಂತೆ ಹೊಂದಿಸಿಕೊಂಡು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಸಮಯದ ನಿರ್ವಹಣೆಯು ಮನುಷ್ಯರ ಬದುಕಿನ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸುತ್ತದೆ. ಇನ್ನು 'ಸಮಯವೇ ಹಣ' ಎಂಬ ಮಾತು ನಮ್ಮ ಜೀವನದಲ್ಲಿ ಸಮಯ ಎಷ್ಟು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಒತ್ತಿಹೇಳುತ್ತದೆ. ನಮ್ಮ ಜೀವನದಲ್ಲಿ ಸಮಯಪಾಲನೆಯ ಮಹತ್ವ ಅತ್ಯಮೂಲ್ಯವಾದದ್ದು ಮತ್ತು ಪ್ರತಿಯೊಬ್ಬ ವ್ಯಕ್ತಿಯು ಹೊಂದಿರಬೇಕಾದ ಅದ್ಭುತ ಲಕ್ಷಣವಾಗಿದೆ. ಓರ್ವ ವ್ಯಕ್ತಿಯು ಯಾವಾಗಲೂ ಸಮಯಕ್ಕೆ ಸರಿಯಾಗಿರುತ್ತಾನೆ ಎಂದು ತಿಳಿದುಕೊಳ್ಳುವದು ವಿಶ್ವಾಸಾರ್ಹತೆಯನ್ನು ಸೃಷ್ಟಿಸುತ್ತದೆ.


ವಿದ್ಯಾರ್ಥಿ ಜೀವನವು ಮನುಷ್ಯರ ಬದುಕಿನಲ್ಲಿ ಬಹುಮುಖ್ಯ ಘಟ್ಟವಾಗಿರುತ್ತದೆ. ಹೀಗಿರುವಾಗ ಸಮಯದ ಸರಿಯಾದ ಬಳಕೆ ಮತ್ತು ಸಮಯಪ್ರಜ್ಞೆ ಎರಡೂ ಅತ್ಯವಶ್ಯಕವಾದ ಅಂಶಗಳಾಗುತ್ತವೆ. ಸಮಯಪಾಲನೆಯ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಾಗಲೇ ಸಮಯ ಪ್ರಜ್ಞೆಯನ್ನು ನಮ್ಮ ಜೀವನದಲ್ಲಿ ಸಂಯೋಜಿಸಲು ಸರಳವಾಗುತ್ತದೆ.


ಸಮಯಪ್ರಜ್ಞೆಯು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತರನ್ನಾಗಿಸುವಲ್ಲಿ ಸಹಕರಿಸುತ್ತದೆ. ಸಮಯಪಾಲನೆಯು ವಿದ್ಯಾರ್ಥಿಗಳಿಗೆ ಶಿಸ್ತನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಕಾರ್ಯಗಳು, ಆಯ್ಕೆಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಸಮಯದೊಂದಿಗೆ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಲಿಯುತ್ತಾರೆ. ತಮ್ಮ ಜವಾಬ್ದಾರಿಗಳಿಗೆ ಮೊದಲ ಆದ್ಯತೆ ನೀಡಿ, ಕೊಟ್ಟ ಗಡುವನ್ನು ಪೂರೈಸುತ್ತಾರೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಮಾತ್ರವಲ್ಲದೆ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ವಿಷಯಗಳನ್ನು ಸಾಧಿಸುವಲ್ಲಿಯೂ ಬಹಳ ಮುಖ್ಯವಾದ ಗುಣವಾಗಿದೆ.


- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top