ನೀವು ಆಧಾರ್ ಕಾರ್ಡ್ ಮಾಡಿಸಿಕೊಂಡು 10 ವರ್ಷ ಆಗಿದೆಯೇ?, ನವೀಕರಣ ಮಾಡಿ ಹತ್ತು ವರ್ಷಗಳಾಗಿವೆಯೇ? ಹಾಗಾದರೆ ಅದನ್ನು ನವೀಕರಿಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಿಕೊಳ್ಳಲು 14.06.2024 ಕಡೇ ದಿನವಾಗಿರುತ್ತದೆ.
10 ವರ್ಷದ ಹಿಂದೆ ಆಧಾರ್ ಕಾರ್ಡ್ ಪಡೆದು, ಅಂದಿನಿಂದ ಇದುವರೆಗೆ ತಮ್ಮ ವಿವರಗಳನ್ನು ನವೀಕರಿಸದಿರುವವರು ಗುರುತಿನ ಮತ್ತು ವಿಳಾಸದ ದಾಖಲೆಗಳನ್ನು ನವೀಕರಿಸಿಕೊಳ್ಳಬಹುದು. ಉಚಿತ ನವೀಕರಣ ಸೌಲಭ್ಯವನ್ನು ನವೀಕರಣಗೊಂಡು 10 ವರ್ಷಗಳು ಆಗದೇ ಇರುವವರೂ ಪಡೆದುಕೊಳ್ಳಬಹುದು. (ನವೀಕರಣಗೊಂಡು 6 ವರ್ಷ ಆದವರೂ, ಉಚಿತವಾಗಿ ಪ್ರೂಫ್ ಆಫ್ ಅಡ್ರೆಸ್ ಮತ್ತು ಪ್ರೂಫ್ ಆಫ್ ಐಡೆಂಟಿಟಿಗಳನ್ನು ಅಪ್‌ಲೋಡ್ ಮಾಡಿ ನವೀಕರಣ ಮಾಡಿಕೊಳ್ಳಬಹುದು.
ಆಧಾರ್ ಅಪ್‌ಡೇಟ್ ಅನ್ನು ಆನ್‌ಲೈನ್‌ನಲ್ಲಿ ಮತ್ತು ಆಧಾರ್ ಕೇಂದ್ರಗಳಲ್ಲಿ ಮಾಡಬಹುದು. ಆದರೆ, ಆನ್‌ಲೈನ್‌ನಲ್ಲಿ ಮಾತ್ರ ಉಚಿತವಾಗಿರುತ್ತದೆ. ಮತ್ತು ಈ ಉಚಿತ ಸೌಲಭ್ಯ 14.06.2024ರ ವರೆಗೆ ಮಾತ್ರ ಇರುತ್ತದೆ.
ಈ ನವೀಕರಣ ಕಡ್ಡಾಯವೆ ಎಂಬುದು ಸ್ಪಷ್ಟ ಇಲ್ಲ. ಆದರೆ, ನವೀಕರಣ ಆಗದಿರುವ ಕಾರಣಕ್ಕೆ ಮುಂದೆ ತೊಂದರೆ ಆಗದಿರಲಿ ಎಂದು ನವೀಕರಣ ಮಾಡಿಕೊಳ್ಳುವುದು ಒಳ್ಳೆಯದು. 14.06.2024 ರ ನಂತರ ನಿಗದಿತ ಶುಲ್ಕದೊಂದಿಗೆ ನವೀಕರಣ ಸೌಲಭ್ಯ ಇರುತ್ತದಂತೆ.
ಆಧಾರ್ ಪೋರ್ಟಲ್‌ನಲ್ಲಿ ಹೋಗಿ, ಆಧಾರ್‌ನಲ್ಲಿ ರಿಜಿಸ್ಟರ್ಡ್ ಆಗಿರುವ ನಂಬರ್‌ಗೆ ಬರುವ OTP ನಮೂದಿಸಿ, ಪ್ರೂಫ್ ಆಫ್ ಅಡ್ರೆಸ್ ಮತ್ತು ಪ್ರೂಫ್ ಆಫ್ ಐಡೆಂಟಿಟಿ ಗಳನ್ನು ಅಪ್‌ಲೋಡ್ ಮಾಡಿ ನವೀಕರಣ ಮಾಡಿಕೊಳ್ಳಬಹುದು.
**
ಎಲ್ಲ ವ್ಯವಹಾರಗಳಿಗೂ- ಬ್ಯಾಂಕ್ ವ್ಯವಹಾರ, ತೋಟಗಾರಿಕೆ/ಕೃಷಿ ಇಲಾಖೆಗಳಲ್ಲಿನ ಉಚಿತ/ಸಬ್ಸಿಡಿ, ಬೆಳೆ ಸರ್ವೆ, ಬೆಳೆ ಇನ್ಷ್ಯೂರೆನ್ಸ್, ಬೆಳೆ ಇನ್ಷ್ಯೂರೆನ್ಸ್ ಪರಿಹಾರ, ಜಮೀನು ಖರೀದಿ/ಮಾರಾಟ, ಕೃಷಿ ಸಮ್ಮಾನ್, ರೇಷನ್ ಕಾರ್ಡ್ ಮಾಡಿಸಲು, ಮದುವೆ ನೊಂದಣಿ, ವಾಹನ ಖರೀದಿ, ಶಿಕ್ಷಣ, ಉದ್ಯೋಗ, ಆರೋಗ್ಯ, ಪ್ರಯಾಣಗಳು (ಉಚಿತ ಬಸ್ ಪ್ರಯಾಣ)..... ಹೀಗೆ ಎಲ್ಲ ವ್ಯವಹಾರಗಳಿಗೂ ಆಧಾರ್ ಪ್ರಮುಖ ದಾಖಲೆಯಾಗಿದೆ. ಎರಡು ಮೂಟೆ ಯೂರಿಯಾ ತರಲು ಹೋದರೂ ಈಗ ಆಧಾರ್ ನಂಬರ್ ಕೇಳ್ತಾರೆ. ಆದುದರಿಂದ UIDAI ಸೂಚಿಸಿರುವಂತೆ ಆಧಾರ್ ನವೀಕರಿಸಿಕೊಳ್ಳುವುದು ಕ್ಷೇಮ, ನೆಮ್ಮದಿ.
ಹಾಗೆ, ಆನ್‌ಲೈನ್‌ನಲ್ಲೇ ₹ 50 ಕಟ್ಟಿ ಹೊಸ ಸ್ಮಾರ್ಟ್ (ಪಾನ್ ಕಾರ್ಡ್ ಸೈಜಿನ) ಆಧಾರ್ ಕಾರ್ಡ್‌ಗೆ ಅಪ್ಲೈ ಮಾಡಬಹುದು. 10-12 ದಿನಗಳಲ್ಲಿ ಪೋಸ್ಟ್‌ನಲ್ಲಿ ಮನೆಗೇ ಹೊಸ PVC ಆಧಾರ್ ಕಾರ್ಡ್ ಬರುತ್ತೆ. ಇಟ್ಟುಕೊಳ್ಳುದೂ ಸುಲಭ. ಕ್ಯಾರಿ ಮಾಡುವುದಕ್ಕೂ ಅನುಕೂಲ. ಈಗಿನ ಉದ್ದ ಇರುವ ಆಧಾರ್ ಕಾರ್ಡ್‌ಗೆ ವಿದಾಯ ಹೇಳಬಹುದು.
ಜಸ್ಟ್ ಮಾಹಿತಿಗಾಗಿ ಇಷ್ಟು ವಿಷಯ.
- ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ