ಬದಿಯಡ್ಕ: ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳನ್ನೂ ಜೀವನದಲ್ಲಿ ಅಳವಡಿಸಿಕೊಂಡಾಗ ಅವರು ವಿಕಾಸವನ್ನು ಹೊಂದುತ್ತಾರೆ. ಎಲ್ಲರೊಂದಿಗೆ ಬೆರೆಯುವ ಅವಕಾಶವನ್ನು ಅವರಿಗೆ ನೀಡುವುದು ಪ್ರತಿಯೋರ್ವ ಹೆತ್ತವರ ಕರ್ತವ್ಯವಾಗಿದೆ. ನಾನು ನನ್ನ ಸಂಸಾರ ಎಂಬ ಚಿಂತನೆಯನ್ನು ದೂರವಿಟ್ಟು ಎಲ್ಲರೊಂದಿಗೆ ಬೆರೆಯಲು ಅವರನ್ನು ಬಿಡಬೇಕು. ಶ್ರೀಮಠದ ಹಲವಾರು ಯೋಜನೆಗಳೊಂದಿಗೆ ಎಲ್ಲರೂ ಕೈಜೋಡಿಸಬೇಕು. ಶಿಬಿರಗಳ ಮೂಲಕ ಮಕ್ಕಳಲ್ಲಿ ಹುದುಗಿರುವ ಜ್ಞಾನವು ಅನಾವರಣಗೊಳ್ಳುವುದು ಮುಳ್ಳೇರಿಯ ಹವ್ಯಕ ಮಂಡಲದ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು ಹೇಳಿದರು.
ಅವರು ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿ ವಾಹಿನಿಯ ನೇತೃತ್ವದಲ್ಲಿ ನೀರ್ಚಾಲು ಶ್ರೀಸದನದಲ್ಲಿ ವಿದ್ಯಾರ್ಥಿಗಳಿಗಾಗಿ ಜರಗಿದ ಜೀವನಬೋಧ ಶಿಬಿರ 2024ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ರೇರಣಾ ತಂಡದ ನೇತೃತ್ವದಲ್ಲಿ ವಿವಿಧ ಚಟುವಟಿಕೆಗಳು ನಡೆಯಿತು. ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಡಾ| ವೈ.ವಿ.ಕೃಷ್ಣಮೂರ್ತಿ, ವಿದ್ಯಾರ್ಥಿ ವಾಹಿನಿ ಪ್ರಧಾನ ಶ್ಯಾಮಪ್ರಸಾದ ಕುಳಮರ್ವ, ನವನೀತಪ್ರಿಯ ಕೈಪಂಗಳ, ಮಹಾಮಂಡಲ ಯುವಪ್ರಧಾನ ಕೇಶವಪ್ರಕಾಶ ಮುಣ್ಚಿಕ್ಕಾನ, ಮಾತೃತ್ವಂನ ಈಶ್ವರಿ ಬೇರ್ಕಡವು, ಶ್ರೀಮಠದ ಗುರಿಕ್ಕಾರರು, ವಿವಿಧ ವಲಯಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕೇಶವ ಪ್ರಕಾಶ ಎಡಕ್ಕಾನ ವಂದಿಸಿದರು.
ಮೂರು ದಿನಗಳ ಕಾಲ ತಮ್ಮ ಮನೆ `ಶ್ರೀಸದನ'ದಲ್ಲಿ ಶಿಬಿರಕ್ಕೆ ಅವಕಾಶವನ್ನು ನೀಡಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್, ಅಧ್ಯಾಪಿಕೆ ಶೈಲಜಾ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಧನ್ಯಶ್ರೀ ಸರಳಿ ರಚನೆಯ ಶಿಬಿರಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ಹಾಡಿಗೆ ಸರಿಯಾಗಿ ಶ್ರೀಲಕ್ಷ್ಮೀ ಕುಳೂರು ಚಿತ್ರಬಿಡಿಸಿ ಗಮನಸೆಳೆದರು. ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಗೋವಿಂದ ಭಟ್ ಬಳ್ಳಮೂಲೆ ನೇತೃತ್ವದಲ್ಲಿ ಶಿಬಿರಾಗ್ನಿ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ