ಉಡುಪಿ: ವಿಶ್ವಮಟ್ಟದಲ್ಲಿ ಕರಾವಳಿಯ ಕಲೆ,ಸಾಹಿತ್ಯ ಸಾಂಸ್ಕೃತಿಕ ಸಂಪ್ರದಾಯ ಉಳಿಯುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯದ ಕ್ರಮವಹಿಸುವಂತೆ ಆಗ್ರಹದ ಜತೆ ಮೂರು ನಿರ್ಣಯವನ್ನು ಭಾನುವಾರ ರಾಜಾಂಗಣ ಸಭಾಂಗಣದಲ್ಲಿ ಜರುಗಿದ ಕರಾವಳಿ ಕರ್ನಾಟಕ ಐದನೇ ಸಮ್ಮೇಳನದಲ್ಲಿ ಅಂಗೀಕಾರ ಮಾಡಲಾಯಿತು.
ಕಚುಸಾಪ ಕೇಂದ್ರ ಸಮಿತಿಗೆ ಸರ್ಕಾರ ಅಗತ್ಯದ ನೆರುವು ನೀಡುವುದು, ಗಡಿಪ್ರದೇಶ ಸೇರಿದಂತೆ ನಾಡಿನ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಅಗತ್ಯದ ಸೌಲಭ್ಯ ನೀಡಿ ಅವುಗಳನ್ನು ಸದೃಢ ಪಡಿಸುವ ಮೂಲಕ ಕನ್ನಡ ಶಾಲೆಗಳ ಬಲ ಹೆಚ್ಚಿಸುವಂತೆ ಆಗ್ರಹದ ನಿರ್ಣಯವನ್ನು ರಾಜು ಎನ್ ಆಚಾರ್ಯ ಮಂಡಿಸಿದರು.
ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವೈಜಾರಿಕ ಹಾಗೂ ಧಾರ್ಮಿಕ ಚಿಂತನೆಗಳತ್ತ ಪರಿಷತ್ತು ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದರು.
ಹಿರಿಯರಾದ ಉಪೇಂದ್ರ ಸೋಮಯಾಜಿ, ಜಿ.ಯು. ನಾಯಕ, ಶೇಖರಗೌಡ ಪಾಟೀಲ, ಗಂಗಯ್ಯ ಕುಲಕರ್ಣಿ, ಜಯಾನಂದ ಪೆರಾಜೆ ಮುಂತಾದವರಿದ್ದರು. ಮಹಾಬಲ ಕೆ. ಮರವಂತೆ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ