ಚಿಕಿತ್ಸಕ ದೃಷ್ಟಿಕೋನದಿಂದ ವ್ಯಾವಹಾರಿಕ ಯಶಸ್ಸು: ಗಿರೀಶ್‌ಮಾಡ್ಲ

Upayuktha
0

 ಎಸ್.ಡಿ.ಎಮ್‌ ಕಾಲೇಜಿನಲ್ಲಿ ‘ಗ್ರೋತ್‌ಹೊರೈಜಾನ್’ ಕಾರ್ಯಾಗಾರ



ಉಜಿರೆ: ಚಿಕಿತ್ಸಕ ದೃಷ್ಟಿಕೋನದಿಂದ ವ್ಯಾವಹಾರಿಕ ವಲಯದಲ್ಲಿಎದುರಾಗುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬಹುದು ಎಂದು ಮಂಗಳೂರಿನ ತ್ರಿಶಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಮಾಜಿ ಪ್ರಾಂಶುಪಾಲ ಗಿರೀಶ್‌ಮಾಡ್ಲ ಅಭಿಪ್ರಾಯ ವ್ಯಕ್ತಪಡಿಸಿದರು.


ಉಜಿರೆಯ ಎಸ್‌ಡಿಎಂ ಕಾಲೇಜಿನ ವ್ಯವಹಾರಅಧ್ಯಯನ ವಿಭಾಗ ಆಯೋಜಿಸಿದ್ದ ಎರಡು ದಿನಗಳ ‘ಗ್ರೋತ್‌ ಹೊರೈಜಾನ್’ವಿದ್ಯಾರ್ಥಿ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ವ್ಯವಹಾರ ರಂಗದಲ್ಲಿ ಹಲವಾರು ಸವಾಲುಗಳು ಬರುತ್ತವೆ. ಅವುಗಳನ್ನು ಎದುರಿಸಿ ಗೆಲ್ಲಲು ಸವಾಲುಗಳನ್ನು ನೋಡುವ ಹಾಗೂ ವಿಶ್ಲೇಷಿಸುವ ದೃಷ್ಟಿಕೋನ ವಿಶಿಷ್ಟವಾಗಿರಬೇಕು ಎಂದು ಹೇಳಿದರು.


ಎಲ್ಲರಿಗಿಂತಲೂ ವಿಭಿನ್ನ ಸೃಜನಶೀಲ ಆಲೋಚನೆ ಹಾಗೂ ದೃಷ್ಟಿಕೋನ ಹೊಂದಿರುವುದು ಮುಂಬರುವ ಸ್ಪರ್ಧಾತ್ಮಕ ಯುಗದಲ್ಲಿ ಮಹತ್ವ ಪೂರ್ಣವಾಗಲಿದೆ. ಯಶಸ್ವಿ ಉದ್ಯಮಿಯಾಗಲು ಅರ್ಹರನ್ನಾಗಿಸುತ್ತದೆ. ಸೃಜನಶೀಲತೆ ಹಾಗೂ ಸ್ಪರ್ಧಾಕ್ಮಕತೆಯನ್ನು ಉನ್ನತೀಕರಿಸಲು ಸಮಾಜದಲ್ಲಿ ಅವಕಾಶಗಳ ಕೊರತೆ ಇಲ್ಲ. ಸಮರ್ಥವಾಗಿ ಬಳಸಿಕೊಳ್ಳುವ ಮನಸ್ಥಿತಿ ಇರಬೇಕು ಎಂದು ನುಡಿದರು.


ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ವ್ಯವಹಾರ ಅಧ್ಯಯನ ನಿರತ ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಸಕಾರಾತ್ಮಕ ಚಿಂತನೆಯೊಂದಿಗಿರಬೇಕು.ಈ ರೀತಿಯ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಭವಿಷ್ಯದ ಭಾರತದ ಅಗ್ರ ಉದ್ಯಮಿಗಳಾಗುವ ಅವಕಾಶ ತೆರೆದಿಡುತ್ತವೆ ಎಂದರು.


ಕಾರ್ಯಕ್ರಮದಲ್ಲಿಉಜಿರೆಎಸ್.ಡಿ.ಎಂ.ಕಾಲೇಜಿನ ವ್ಯವಹಾರಅಧ್ಯಯನ ವಿಭಾಗದ ಮುಖ್ಯಸ್ಥೆ ಶಕುಂತಲಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನೇಹಾ ಐ ಕಾರ್ಯಕ್ರಮ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top