ಸುರತ್ಕಲ್: ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯಲ್ಲಿ ಪ್ರಾರಂಭೋತ್ಸವ

Upayuktha
0


ಸುರತ್ಕಲ್‌: ಹೊಸ ಚೈತನ್ಯ, ಹೊಸ ಹುರುಪು, ಹೊಸ ಕಲಿಕೆಯೊಂದಿಗೆ ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮವನ್ನು ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆ ಸುರತ್ಕಲ್ ಇಲ್ಲಿ ಇಂದು (ಮೇ 31) ಬುಧವಾರ ಪೂರ್ವಾಹ್ನ 9:30ಕ್ಕೆ ಸರಿಯಾಗಿ ವಿದ್ಯಾದಾಯಿನೀ ಶಾಲೆಯ ಆಟದ ಮೈದಾನದಿಂದ ಬ್ಯಾಂಡ್ ವಾದ್ಯದೊಂದಿಗೆ ಸುರತ್ಕಲ್ ಸರ್ಕಲ್ ಮಾರ್ಗವಾಗಿ ಗೋವಿಂದದಾಸ ಕಾಲೇಜು ಆವರಣವಾಗಿ ವಿದ್ಯಾದಾಯಿನೀ ವಜ್ರ ಮಹೋತ್ಸವ ಸಭಾಂಗಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಪುಷ್ಪದಳದೊಂದಿಗೆ ಸ್ವಾಗತಿಸಲಾಯಿತು.


ಕಾರ್ಯಕ್ರಮವನ್ನು ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, 2024-25ನೇ ಶೈಕ್ಷಣಿಕ ವರ್ಷವನ್ನು ಪರಿಣಾಮಕಾರಿಯಾದ ಮತ್ತು ರಚನಾತ್ಮಕವಾದ ಚಟುವಟಿಕೆಗಳನ್ನು ಸಂಘಟಿಸುವುದರ ಭರವಸೆಯೊಂದಿಗೆ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಹಿಂದು ವಿದ್ಯಾದಾಯಿನೀ ಸಂಘದ ಹಿರಿಯ ಸದಸ್ಯರಾದ ಯಚ್.ಯು. ಅನಂತಯ್ಯ ಇವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಕಾರ್ಯದರ್ಶಿ ಎಚ್ ಶ್ರೀರಂಗ ನೆರವೇರಿಸಿ ಶಾಲೆಯು ದೇವಾಲಯವಿದ್ದಂತೆ, ಮಕ್ಕಳ ಕಲಿಕೆಯು ನಿರಂತರವಾಗಿ ನಡೆಯಬೇಕು, ಗುರು-ಶಿಷ್ಯರ ಸಂಬಂಧ ಅತ್ಯಮೂಲ್ಯವಾದದು ಮಕ್ಕಳು ಮೌಲ್ಯಯುತ ಶಿಕ್ಷಣವನ್ನು ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಈ ಸಂದರ್ಭದಲ್ಲಿ ಶಿಕ್ಷಣ ಇಲಾಖಾ ವತಿಯಿಂದ ನೀಡಿದ ಉಚಿತ ಪಠ್ಯ ಪುಸ್ತಕಗಳನ್ನು ಮುಖ್ಯ ಅತಿಥಿ ಶಿಕ್ಷಣ ಇಲಾಖೆಯ ಸುರತ್ಕಲ್ ಕ್ಲಸ್ಟರ್ ನ ಸಿ.ಆರ್.ಪಿ  ರಾಮದಾಸ್  ಇವರು ವಿದ್ಯಾರ್ಥಿಗಳಿಗೆ ವಿತರಿಸಿದರು. ಮುಖ್ಯೋಪಾಧ್ಯಾಯ ಬಾಲಚಂದ್ರ ಕೆ ಇವರು ವೇದಿಕೆಯಲ್ಲಿರುವ ಅತಿಥಿಗಳನ್ನು ಸ್ವಾಗತಿಸಿದರು. ಪ್ರಸ್ತಾವನೆಯನ್ನು ಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ ನೆರವೇರಿಸಿದರು.


ವೇದಿಕೆಯಲ್ಲಿ ಹಿಂದು ವಿದ್ಯಾದಾಯಿನೀ ಸಂಘದ ಕೋಶಾಧಿಕಾರಿ ಎಚ್.ಎಲ್. ರಾವ್, ಜೊತೆ ಕಾರ್ಯದರ್ಶಿ ಎಂ ಜಿ. ರಾಮಚಂದ್ರ, ಸಂಘದ ಜೊತೆ ಕೋಶಾಧಿಕಾರಿ  ರಮೇಶ್ ಟಿ.ಎನ್, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘ. (ರಿ) ಇದರ ಕಾರ್ಯದರ್ಶಿ ಶ್ರೀನಿವಾಸ್ ಕುಳಾಯಿ, ಶಿಕ್ಷಕ– ರಕ್ಷಕ ಸಂಘದ ಅಧ್ಯಕ್ಷ ದೇವದಾಸ್, ಶಿಕ್ಷಕ– ರಕ್ಷಕ ಸಂಘದ ಗೌರವಾಧ್ಯಕ್ಷ ಗಂಗಾಧರ ಪೂಜಾರಿಯವರು ಉಪಸ್ಥಿತರಿದ್ದು ಮಕ್ಕಳಿಗೆ ಪ್ರೇರಣಾದಾಯಕ ನುಡಿಗಳನ್ನಾಡಿದರು.


ಈ ಸಂದರ್ಭದಲ್ಲಿ ಶಾಲೆಯಲ್ಲಿ 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಪಾಯಸವನ್ನು ನೀಡಲಾಯಿತು. ದಿವಸ್ಪತಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ರೇವತಿ ಬಿ ವಂದಿಸಿದರು. ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು, ಮಕ್ಕಳ ಪೋಷಕರು, ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top