ಮೇ 4: ನವ ಭಾರತ ರಾತ್ರಿ ಪ್ರೌಢಶಾಲೆಯ 81ನೇ ವಾರ್ಷಿಕೋತ್ಸವ

Upayuktha
0


ಮಂಗಳೂರು: ನಗರದ ಹೃದಯ ಭಾಗದಲ್ಲಿರುವ, ಹಗಲು ಶಿಕ್ಷಣ ವಂಚಿತರಿಗಾಗಿ ದುಡಿಯುತ್ತಾ, ನಿಶುಲ್ಕ ಶಿಕ್ಷಣವನ್ನು ನೀಡುತ್ತಾ ಬರುತ್ತಿರುವ ನವಭಾರತ ರಾತ್ರಿ ಪೌಢಶಾಲೆಯ 81ನೇ ವಾರ್ಷಿಕೋತ್ಸವ ಸಮಾರಂಭವು ಮೇ 4ರಂದು ಶನಿವಾರ ಸಂಜೆ 5:30 ರಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈಭವ; ಸಭಾಕಾರ್ಯಕ್ರಮ ಹಾಗೂ ನವಭಾರತ ಯಕ್ಷಗಾನ ಅಕಾಡೆಮಿಯಿಂದ ವೀರ ವೀರೇಶ ಎಂಬ ಬಯಲಾಟ ಕಾರ್ಯಕ್ರಮದೊಂದಿಗೆ ನಡೆಯಲಿರುವುದು.


ಸಭಾಕಾರ್ಯಕ್ರಮದಲ್ಲಿ ನವ ಭಾರತ ಎಜ್ಯುಕೇಶನ್ ಸೊಸೈಟಿ (ರಿ) ಯ ಅಧ್ಯಕ್ಷರಾದ ಡಾ| ಪಿ.ವಾಮನ್ ಶೆಣ್ಣೆಯವರು; ಮುಖ್ಯ ಅತಿಥಿಗಳಾಗಿ ಸ್ಯಾನ್ ಮಾರ್ಕೆಟಿಂಗ್ ನ ಶ್ರೀ ಅಜಿತ್ ಕಿಣಿಯವರು ಮತ್ತು ಸಂಸ್ಥೆಯ ಕಾರ್ಯದರ್ಶಿ ಶ್ರೀಮಧುಸೂದನ ಅಯಾರ್; ಕೋಶಾಧಿಕಾರಿ ಗಣೇಶ್ ರಾವ್ ಹಾಗೂ ಪದಾಧಿಕಾರಿಗಳು ವೇದಿಕೆಯನ್ನು ಸಂಪನ್ನಗೊಳಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ವರ್ಕಾಡಿ ರವಿ ಅಲೆವೂರಾಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top