ಸುಳ್ಯ: ನಿವೃತ್ತ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿರುವ ಮಣಿಯಾನ ಪುರುಷೋತ್ತಮ ಅವರನ್ನು ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆಯಿಂದ ಮೇ 2ರಂದು ಸನ್ಮಾನಿಸಿ ಗೌರವಿಸಲಾಯಿತು.
ಗುತ್ತಿಗಾರಿನಲ್ಲಿ ನಡೆಯುತ್ತಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿರುವ ಧನಪತಿಯವರು ಗೌರವಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರಾ ಮೂಕಮಲೆ ಅಧ್ಯಕ್ಷತೆ ವಹಿಸಿದರು.
ಕಿರಣ ಸಂಸ್ಥೆ ಅಧ್ಯಕ್ಷ ಯೋಗೀಶ ಹೊಸೋಳಿಕೆ ಸಂಘಟಿಸಿದರು. ಪಂಚಾಯತ್ ಮಾಜಿ ಸದಸ್ಯೆ ಮಿತ್ರಾಕುಮಾರಿ ಚಿಕ್ಮುಳಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಗುರುಪ್ರಸಾದ್, ಗ್ರಂಥಪಾಲಕಿ ಅಭಿಲಾಷ ಮೊಟ್ನೊರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ