ಭೋಪಾಲ್‌ನ ಐಸೆಕ್ಟ್ ಲಿಮಿಟೆಡ್‌ನೊಂದಿಗೆ ಮಂಗಳೂರಿನ ಕೆನರಾ ಕಾಲೇಜು ಒಡಂಬಡಿಕೆ

Upayuktha
0


ಮಂಗಳೂರು: ಕೆನರಾ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲಗಳು, ಮೃದು ಕೌಶಲ, ಉದ್ಯಮಶೀಲತಾ ಕೌಶಲ ಇಂಟರ್ನ್ಶಿಪ್ ಮುಂತಾದ ತರಬೇತಿಗಳನ್ನು ನೀಡುವ ನಿಟ್ಟಿನಲ್ಲಿ ಐಸೆಕ್ಟ್ ಲಿ. ಭೋಪಾಲ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ರಾಜ್ಯ ವಲಯದಲ್ಲಿ 'ಕೌಶಲ್ಯಾಭಿವೃದ್ಧಿ, ಆರ್ಥಿಕ ಸೇರ್ಪಡೆ ಮತ್ತು ಸಾಮಾಜಿಕ ಉದ್ಯಮಶೀಲತೆಯ ಮೂಲಕ ಕರ್ನಾಟಕವನ್ನು ಸಬಲಗೊಳಿಸುವುದು' ಎಂಬ ವಿಷಯದಲ್ಲಿ ಬೆಂಗಳೂರಿನಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ 'ಐಸೆಕ್ಟ್ ಆರ್ಡರ್-ಆಫ್-ಮೆರಿಟ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.


ಸ್ಕೋಪ್ ಗ್ಲೋಬಲ್ ಸ್ಕಿಲ್ಸ್ ವಿಶ್ವವಿದ್ಯಾಲಯ ಇದರ ಸಹ ಕುಲಾಧಿಪತಿಗಳಾದ ಅಭಿಷೇಕ್ ಪಂಡಿತ್, ಕುಲಪತಿ ಪ್ರೊ. ಡಾ. ಅಜಯ್ ಭೂಷಣ್, ವ್ಯವಹಾರ ಮುಖ್ಯಸ್ಥರಾದ ರಜತ್ ಚತುರ್ವೇದಿ ಮುಂತಾದವರು  ಉಪಸ್ಥಿತರಿದ್ದರು. 2023-24 ನೆ ಸಾಲಿನಲ್ಲಿ ಕರ್ನಾಟಕದಲ್ಲಿ ವೃತ್ತಿಪರ ಮತ್ತು ಕೌಶಲ್ಯ ಶಿಕ್ಷಣವನ್ನು ಉತ್ತೇಜಿಸುವ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಕೆನರಾ ಕಾಲೇಜಿನ ಟಿಐಪಿ ಸಂಯೋಜಕರಾದ ಹಾರ್ದಿಕ್ ಪ. ಚೌಹಾನ್ ಸಂಸ್ಥೆಯ ಪರವಾಗಿ ಇದನ್ನು ಸ್ವೀಕರಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top