ಉಡುಪಿ: ಮತದಾನದ ದಿನದಂದು ಮತದಾನದ ಕೇಂದ್ರದಲ್ಲಿ ನಡೆಯುವ ಪ್ರತಿಯೊಂದು ಪ್ರಕ್ರಿಯೆಗಳನ್ನು ಜವಾಬ್ದಾರಿಯುತ ಸೂಕ್ಷ್ಮವಾಗಿ ವೀಕ್ಷಿಸಿ ಸುವ್ಯವಸ್ಥಿತವಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ವೀಕ್ಷಕರಾದ ಹಿತೇಶ್ ಕೆ ಕೋಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೋಮವಾರ ನಗರದ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ಸಭಾಂಗಣದಲ್ಲಿ ಮತದಾನ ಕೇಂದ್ರಕ್ಕೆ ನಿಯೋಜಿಸಿರುವ ಮೈಕ್ರೋ ಅಬ್ಸರ್ವರ್‌ಗಳ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯು ನ್ಯಾಯ ಸಮ್ಮತವಾಗಿ ನಡೆಸಬೇಕೆಂಬ ಧ್ಯೇಯದೊಂದಿಗೆ ನಡೆಸುತ್ತಿದೆ, ಮತದಾನದ ದಿನದಂದು ಮತ ಕೇಂದ್ರಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯ ಪ್ರಕ್ರಿಯೆಗಳನ್ನು ಸೂಕ್ಷö್ಮವಾಗಿ ವೀಕ್ಷಿಸಿ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆಗಳು ನಡೆಯುವಂತೆ ನೋಡಿಕೊಳ್ಳಲು ಮೈಕ್ರೋ ಅಬ್ಸರ್ವರ್‌ಗಳಾಗಿ ನಿಮ್ಮನ್ನು ನೇಮಕ ಮಾಡಲಾಗಿದ್ದು, ಚುನಾವಣಾ ಆಯೋಗವು ನೀಡಿರುವ ನಿರ್ದೇಶನ ಹಾಗೂ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ ಜವಾಬ್ದಾರಿಯುತವಾಗಿ ತಾವು ನಿರ್ವಹಿಸಬೇಕೆಂದರು.
ಪ್ರತಿಯೊಬ್ಬರು ಮಾಡುವ ಮತದಾನವನ್ನು ಗೌಪ್ಯವಾಗಿರುವಂತೆ ನೋಡಿಕೊಳ್ಳಬೇಕು, ಮತದಾನ ಕೇಂದ್ರಕ್ಕೆ ಅಧಿಕಾರಿಗಳು ಬಂದ ಸಮಯ, ಮತದಾನ ಪ್ರಾರಂಭಕ್ಕೂ ಮುನ್ನ ಮಾರ್ಕ್ ಪೋಲ್ ಮಾಡಿರುವ ಬಗ್ಗೆ ಮತದಾನ ಪ್ರಾರಂಭಿಸಿರುವ ಸಮಯ , ಮುಕ್ತವಾದ ಸಮಯಗಳ ಬಗ್ಗೆ ವರದಿ ನೀಡಬೇಕೆಂದರು.
ವಿಶೇಷವಾಗಿ ಮತದಾರರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವ ಬಗ್ಗೆ ಗಮನಿಸಬೇಕು ಎಂದ ಅವರು 85 ವರ್ಷ ಮೇಲ್ಪಟ್ಟ ಮತದಾರರಿಗೂ ಹಾಗೂ ಅಂಗವಿಕಲ ಮತದಾರರಿಗೂ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಇಲ್ಲಿಯು ಸಹ ಮತದಾನದ ಗೌಪ್ಯತೆಯಿಂದ ನಡೆಸಬೇಕು, ಈ ಪ್ರಕ್ರಿಯೆಯು ಮಾರ್ಗಸೂಚಿ ಅನ್ವಯ ನಡೆಯುಬೇಕು ಎಂದರು. ಮತದಾನ ಕೇಂದ್ರದಲ್ಲಿ ಯಾವುದೇ ರೀತಿಯ ಗೊಂದಲ ಸೇರಿದಂತೆ ಸಮಸ್ಯೆ ಉಂಟಾದ ಕೂಡಲೇ ಶೀಘ್ರವಾಗಿ ನನ್ನ ಗಮನಕ್ಕೆ ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿ ತಕ್ಷಣ ಮಾಹಿಸಿ ನೀಡಬೇಕು ಎಂದರು.
ರಾಜ್ಯ ಮಟ್ಟದ ಚುನಾವಣೆ ತರಬೇತುದಾರ ಅಶೋಕ್ ಕಾಮತ್ ಮಾತನಾಡಿ, ಚುನಾವಣೆ ಅಧಿಕಾರಿಗಳು ಕರ್ತವ್ಯಗಳ ಕುರಿತು ಸಂಪೂರ್ಣ ಅರಿವನ್ನು ಈ ಮೊದಲೇ ಹೊಂದಿರಬೇಕು, ಚುನಾವಣೆ ದಿನದಂದು ಯಾವುದೇ ಅವಘಡಗಳು ಸಂಭವಿಸದAತೆ ನಿಗ ವಹಿಸಬೇಕು ಹಾಗೂ ಮತ್ತಿತರ ಮಾಹಿತಿಗಳನ್ನು ವಿವರಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತದಾನ ಕೇಂದ್ರಕ್ಕೆ ನಿಯೋಜಿಸಿರುವ ಮೈಕ್ರೋ ಅಬ್ಸರ್ವರ್‌ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ