ಮಂಗಳೂರು: ಯುಎಇ ಬ್ರಾಹ್ಮಣ ಸಮಾಜ ದುಬೈ ಇದರ ವಿಂಶತಿ ವೈಭವ ಕಾರ್ಯಕ್ರಮ ಏ.13ರಂದು ಬೆಳಗ್ಗೆ 9ರಿಂದ ದುಬೈಯ ಜುಮೇರಾ ಬೆಕಲೋರಿಯಟ್ ಸ್ಕೂಲ್‌ನಲ್ಲಿ ನಡೆಯಲಿದೆ. ಕವಿ ಡುಂಡಿರಾಜ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ. ದುಬೈಯ ಸಮಾಜದ ಕಲಾವಿದರು ಖ್ಯಾತ ಯಕ್ಷಗಾನ ಕಲಾವಿದರಿಂದ ದಕ್ಷಾಧ್ವರ ಯಕ್ಷಗಾನ ಪ್ರದರ್ಶನ ಜರಗಲಿದೆ. ಹಿಮ್ಮೇಳದಲ್ಲಿ ಚಿನ್ಮಯ ಭಟ್ ಕಲ್ಲಡ್ಕ -ಭಾಗವತರು, ಪುತ್ತಿಗೆ ವೆಂಕಟೇಶ ಶಾಸ್ತ್ರಿ-ಮದ್ದಳೆ. ಭವಾನಿಶಂಕರ ಶರ್ಮ-ಚೆಂಡೆ, ಮುಮ್ಮೇಳದಲ್ಲಿ ದೀಪಕ್ ರಾವ್ ಪೇಜಾವರ, ವಿದ್ಯಾ ಕೋಳ್ಯೂರು, ಕೃಷ್ಣಪ್ರಸಾದ್ ರಾವ್, ಕೃಷ್ಣರಾಜ್ ರಾವ್ ಅಬುದಾಬಿ, ವಿಶ್ವೇಶ್ವರ ಅಡಿಗ, ಅನನ್ಯ ವೇದವ್ಯಾಸ, ಶರಣ್ಯ ವೇದವ್ಯಾಸ, ವಿಧಾತ್ರಿ ಕೃಷ್ಣ ಪ್ರಸಾದ್, ಸ್ವಸ್ತಿಕ ಆಚಾರ್ಯ, ಸೈಷಾ ಶರತ್, ಸುಮೇಧ, ವೈದೇಹಿ, ಸಹನ ಅಮರದೀಪ್ ಭಾಗವಹಿಸಲಿದ್ದಾರೆ.
ನೃತ್ಯ ವಿದುಷಿ ರೋಹಿಣಿ ಅನಂತ್ ಇವರಿಂದ ಸತ್ರಿಯಾ ನೃತ್ಯ ಪ್ರದರ್ಶನ, ಯಕ್ಷನೃತ್ಯ, ಏಕಪಾತ್ರಾಭಿನಯ, ಸುಗಮ ಸಂಗೀತ, ಗಮಕ ಗಾಯನ, ಕಂಸಾಳೆ, ಭರತನಾಟ್ಯ, ಕೂಚುಪುಡಿ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಇಪ್ಪತ್ತು ವರ್ಷದ ಸವಿ ನೆನಪಿಗಾಗಿ ವಿಪ್ರ ಸ್ಪಂದನ ಸ್ಮರಣ ಸಂಚಿಕೆ ಹೊರ ತರಲಾಗುವುದು. ಯುಎಇಯಲ್ಲಿ ನೆಲೆಸಿರುವ ಸಮಗ್ರ ಬ್ರಾಹ್ಮಣರ ಕೈಪಿಡಿ ವಿಪ್ರ ಸಂಚಯವಾಗಿ ಹೊರತರುವ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಯುಎಇ ಬ್ರಾಹ್ಮಣ ಸಮಾಜದ ಸಂಘಟಕ ಸುಧಾಕರ ಪೇಜಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ