ಟಿಸಿಎಸ್ ಕ್ವಿಜ್: ಎನ್‍ಐಟಿಕೆ ವಿದ್ಯಾರ್ಥಿಗೆ ದ್ವಿತೀಯ ಸ್ಥಾನ

Upayuktha
0


ಮಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಕರ್ನಾಟಕ ಸರ್ಕಾರದಿಂದ ಪ್ರಾಯೋಜಿತ ಸ್ವಾಯತ್ತ ಸಂಸ್ಥೆಯಾದ ಐಟಿ ಶಿಕ್ಷಣ ಮಾನದಂಡಗಳ ಮಂಡಳಿ (ಬೈಟ್ಸ್) ನಡೆಸಿದ 15ನೇ ಆವೃತ್ತಿಯ ಟಿಸಿಎಸ್ ಟೆಕ್‍ಬೈಟ್ಸ್ ಸ್ಪರ್ಧೆಯಲ್ಲಿ ಸುರತ್ಕಲ್ ಎನ್‍ಐಟಿಕೆ ವಿದ್ಯಾರ್ಥಿ ಕೌಶಿಕ್ ಎಸ್ ನಂದನ್ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.


ಪ್ರಥಮ ಬಹುಮಾನವನ್ನು ಬೆಳಗಾವಿ ಕೆಎಲ್‍ಎಸ್ ಎಂಜಿನಿಯರಿಂಗ್ ಕಾಲೇಜಿನ ಧೀರಜ್ ಅಂಗಡಿ ಗಳಿಸಿದ್ದಾರೆ. ಪ್ರಥಮ ಬಹುಮಾನ ಮತ್ತು ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿಗಳು ಕ್ರಮವಾಗಿ ರೂ 85,000 ಮತ್ತು ರೂ 50,000 ಶಿಕ್ಷಣ ವಿದ್ಯಾರ್ಥಿ ವೇತನ ಪಡೆದರು.


ಜೊತೆಗೆ ಅಂತಿಮ ಹಂತದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಶಿಕ್ಷಣ ವಿದ್ಯಾರ್ಥಿ ವೇತನ ನೀಡಲಾಯಿತು. ಟಿಸಿಎಸ್ ಬೆಂಗಳೂರಿನ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ, ಏರೋಸ್ಪೇಸ್ ಇಂಜಿನಿಯರಿಂಗ್ ಐಐಎಸ್‍ಸಿಯ ಪ್ರೊ.ಸುರೇಶ್ ಸುಂದರಂ, ಬೈಟ್ಸ್ ಸಹ ಅಧ್ಯಕ್ಷ ಡಾ.ಸೆಲ್ವನ್ ಡಿ ಮತ್ತು ಎಸ್‍ಜೆಬಿಐಟಿ ಪ್ರಾಂಶುಪಾಲ ಡಾ ಕೆ ವಿ ಮಹೇಂದ್ರ ಪ್ರಶಾಂತ್ ಪ್ರಶಸ್ತಿ ಪ್ರದಾನ ಮಾಡಿದರು. ಈ ವರ್ಷ ಕರ್ನಾಟಕದಾದ್ಯಂತ 115 ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top