ಮಂಗಳೂರಲ್ಲಿ ಶುರುವಾಯ್ತು 'ಹಿಮಪಾತ'

Upayuktha
0

ಸ್ವಿಜರ್ಲ್ಯಾಂಡ್ ಅನುಭವ ಈಗ ಕಡಲತಡಿಯ ಮಂಗಳೂರಿನಲ್ಲಿ

ಮಂಗಳೂರಿನ ಪಿಝ್ಜಾ ಬೈ ನೆಕ್ಸಸ್ ಮಾಲಿನಲ್ಲಿ "ಸ್ನೋ ಫ್ಯಾಂಟಸಿ" ಆರಂಭ





ಮಂಗಳೂರು: ಭಾರತದ ಅತ್ಯಂತ ಪ್ರತಿಷ್ಠಿತ, ಹಿಮ ವಾತಾವರಣದ ಮತ್ತು ಮಂಜಿನ ವಿಶೇಷ ಅನುಭವ ನೀಡುವ  ಸ್ನೋ ಫ್ಯಾಂಟಸಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಿಝ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ  ಆರಂಭಗೊಂಡಿದೆ.


ಕೊಯಂಬತ್ತೂರು ಮತ್ತು ಕಲ್ಲಿಕೋಟೆ ನಂತರ ಮಂಗಳೂರಿನ ಈ ಪಾರ್ಕ್ ಇವರ ಮೂರನೆಯ ಹೆಗ್ಗುರುತಾಗಿದೆ. ಅದಲ್ಲದೆ ಮಂಗಳೂರಿಗೆ ಇದು ಪ್ರಪ್ರಥಮ..


ಈ ಹಿಮ ಮಳಿಗೆಯೊಳಗೆ ಮಂಜು ಬೀಳುವ ಅನುಭವ , ಡಿಜೆ, ಕಾಫಿ ಶಾಪ್, ಹಿಮ ಪ್ರಾಣಿಗಳ ಚಿತ್ರಗಳನ್ನು ಆಸ್ವಾದಿಸುವ, ಹಾಗೆಯೇ ಹಿಮ ಶಿಖರಗಳ, ಹಿಮ ಕಣಿವೆಯೊಳಗೆ ಓಡಾಡುವ ಅನುಭವ ಅದ್ಭುತ.. ಮ್ಯಾಜಿಕಲ್ ಹಿಮಗಳು, ಹಿಮದ ಗುಡ್ಡೆ ಕಟ್ಟುವ ಆಟಗಳು... ಇನ್ನು ಅನೇಕ ರೀತಿಯ ವಿಶೇಷಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ.


"ಮಂಗಳೂರಿನ ಬಿಸಿಲಿನ ವಾತಾವರಣದಲ್ಲಿ ಒದ್ದಾಡುವ ಈ ಸಂದರ್ಭದಲ್ಲಿ ಮನೆ-ಮಂದಿ-ಮಕ್ಕಳನ್ನೆಲ್ಲ  ಒಂದು ಅನುಭವವನ್ನು ಆಸ್ವಾದಿಸುವುದು ಒಳ್ಳೆಯದು ಎನ್ನುತ್ತಾರೆ" ಸ್ನೋ ಫ್ಯಾಂಟಸಿಯ ಡೈರೆಕ್ಟರ್ ಆದಿತ್ಯ.


ಅಂತರರಾಷ್ಟ್ರೀಯ ಗುಣಮಟ್ಟದ ಈ ಸ್ನೋ ಫ್ಯಾಂಟಸಿ  ಪ್ರವೇಶ ಪಡೆದವರಿಗೆ ಜಾಕೆಟ್, ಸಾಕ್ಸ್, ಬೂಟ್,  ಮುಂತಾದವುಗಳನ್ನು ನೀಡಲಾಗುವುದು.  ಅವರ ಆರೋಗ್ಯದ ಕುರಿತು ಮತ್ತು ಅಪಾಯವನ್ನು ತಡೆಗಟ್ಟುವ  ಎಲ್ಲಾ ಕಾರ್ಯಕ್ಷಮತೆಯನ್ನು,  ಸೇಫ್ಟಿ ಫೀಚರ್‍‌ಗಳನ್ನು ಅಳವಡಿಸಲಾಗಿದೆ. 


ನೆಕ್ಸಸ್ ಸೆಲೆಕ್ಟ್ ಮಾಲ್ಸ್ ಸಿ.ಓ.ಓ. ಜಯೇನ್  ನಾಯಕ್ ಮಾತನಾಡಿ "ಈ ಅನುಭವ ನಿಜವಾಗಿಯೂ ವಿಶೇಷ. ಸ್ನೋ ಫ್ಯಾಂಟಸಿ-  ಫೆಂಟಾಸ್ಟಿಕ್ ಆಗಿದ್ದು ನಮ್ಮ  ಮಾಲ್ ನ್ನು ಆಯ್ಕೆ ಮಾಡಿರುವುದು ಸಂತೋಷ " ಎಂದು ಶುಭನುಡಿದರು.


ಸ್ನೋ ಫ್ಯಾಂಟಸಿಯ  ವಿಶೇಷತೆಗಳ ಬಗ್ಗೆ  ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ವೇಣುಶರ್ಮ ಮಾತನಾಡಿ, "ಮಂಗಳೂರಿನ ಜನತೆ ತಮ್ಮ ಕಿಟ್ಟಿ ಪಾರ್ಟಿಗಳನ್ನು, ಬರ್ತಡೇ ಹಾಗೂ ಗೆಳೆಯರ ಆಟ- ಕೂಟಗಳನ್ನು ಗ್ರೂಪ್ ಬುಕಿಂಗ್ ಮೂಲಕ ನಡೆಸಿದರೆ ಅವರ ಸಂತೋಷ ದುಪ್ಪಟ್ಟಾಗುವುದು ಖಂಡಿತಾ"ಎಂದರು.


 ಕಂಪನಿಯ ಇನ್ನೊಬ್ಬ ನಿರ್ದೇಶಕ ವಿಪಿನ್ ಝಕಾರಿಯ ಮಾತನಾಡುತ್ತಾ "ಈ ಪಾರ್ಕ್ ಮಕ್ಕಳಿಗೆ, ಯುವಕರಿಗೆ ಮತ್ತು ಎಲ್ಲಾ ವರ್ಗದ ಜನರಿಗೆ ಸಂತೋಷ ನೀಡುವ ಉದ್ದೇಶದಿಂದಾಗಿ ಆರಂಭವಾಗಿದೆ. ಈ ಪಾರ್ಕ್ ನಲ್ಲಿ ಯುವ ಜನತೆಗಾಗಿ ಹಲವು ಸಾಹಸ ಕ್ರೀಡೆಗಳನ್ನು ಅಳವಡಿಸಲಾಗಿದೆ" ಎಂದರು. 


"ಅಂತರಾಷ್ಟ್ರೀಯ ಗುಣಮಟ್ಟದ ಸೌಂಡ್ ಸಿಸ್ಟಮ್, ಲೇಸರ್ ಶೋ, ಮ್ಯಾಜಿಕಲ್ ಸ್ನೋ ಫಾಲ್, ರೋಪ್ ವಾಕ್....  ಸ್ನೋ ಫ್ಯಾಂಟಸಿಯ ವಿಶೇಷಗಳು" ಎನ್ನುತ್ತಾರೆ ನಿಯೋಸ್ನೋ ಎಮ್ಯೂಸ್ಮೆಂಟ್ ಆಂಡ್ ಪಾರ್ಕ್ ಇಂಡಿಯಾ (ಪ್ರೈ) ಲಿಮಿಟೆಡ್   ಕಂಪನಿಯ  ಚೇರ್ಮನ್ ಹಾಗೂ ಮುಖ್ಯಸ್ಥ ಕ್ಯಾಪ್ಟನ್ . ಟಿ. ಎಸ್  ಅಶೋಕನ್ .


ಕಳೆದ 28 ವರ್ಷಗಳ ಅನುಭವ ಹಂಚಿಕೊಳ್ಳುತ್ತಾ  "ಕೇರಳದಲ್ಲಿ ಪ್ರಪ್ರಥಮ ಎಮ್ಯೂಸ್ಮೆಂಟ್ ಪಾರ್ಕನ್ನು ಮಲಪ್ಪುರಂ ಜಿಲ್ಲೆಯಲ್ಲಿ ನೀಡಿದ ನಾವು ಮಂಗಳೂರಿಗೂ ಈ ಪ್ರಪ್ರಥಮ ಸ್ನೋ ಫ್ಯಾಂಟಸಿಯನ್ನು ನೀಡುತ್ತಿದ್ದೇವೆ" ಅಂದರು. .


"ನಾಳೆ ಏಪ್ರಿಲ್ ನಾಲ್ಕರಿಂದ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿದಿನ ಈ ಸ್ನೋ ಫ್ಯಾಂಟಸಿ ಕಾರ್ಯನಿರ್ವಹಿಸಲಿದೆ "ಎಂದು ಕಂಪನಿಯ ಆಡಳಿತ ಅಧಿಕಾರಿ ಶ್ರೀ ಬಿಪಿನ್ ಝಕಾರಿಯ ತಿಳಿಸಿದರು. 


ಈ ಸಂದರ್ಭದಲ್ಲಿ ಮಂಗಳೂರು ಮಾಲ್ ಮುಖ್ಯಸ್ಥ ಅರವಿಂದ್ ಶ್ರೀವಾಸ್ತವ್ ಹಾಗೂ ನೆಕ್ಷಸ್ ಸೆಲೆಕ್ಟ್ ಮಾಲ್ಸ್, ರೀಜನಲ್ ಮುಖ್ಯಸ್ಥ ತನ್ವೀರ್ ಶೇಕ್ ಉಪಸ್ಥಿತರಿದ್ದರು. 


ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕ್ಯಾಪ್ಟನ್ ಟಿ.ಎಸ್ ಅಶೋಕನ್, ನಿರ್ದೇಶಕರಾದ ಟಿ.ಎಸ್ ವಿಜಯನ್, ವಿಪಿನ್ ಸ್ಕರಿಯಾ, ಸಿಬಿನ್ ಸ್ಕರಿಯಾ, ಆದಿತ್ಯ ಅಶೋಕನ್, ನೆಕ್ಸಸ್‌ ಮಾಲ್‌ನ ಸಿಒಒ ಜಯೇನ್ ನಾಯಕ್, ನೆಕ್ಸಸ್‌ ಸೆಲೆಕ್ಟ್ ಮಾಲ್‌ಗಳ ದಕ್ಷಿಣ ಪ್ರಾದೇಶಿಕ ನಿರ್ದೇಶಕ ತನ್ವೀರ್ ಶೇಖ್, ಫಿಜಾ ಬೈ ನೆಕ್ಸಸ್ ಮಾಲ್‌ನ ಸೆಂಟರ್ ಡೈರೆಕ್ಟರ್ ಅರವಿಂದ ಶ್ರೀವಾಸ್ತವ್ ಹಾಗೂ ಕನ್ಸಲ್ಟೆಂಟ್ ವೇಣು ಶರ್ಮಾ ಉಪಸ್ಥಿತರಿದ್ದರು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: -  ವೇಣು ಶರ್ಮ-  962095990. / ಆದಿತ್ಯ -7012694215



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top