ಬೆಳ್ತಂಗಡಿ: ಪಿಯುಸಿಯಲ್ಲಿ ವಿಶೇಷ ಚೇತನರ ವಿಶಿಷ್ಟ ಸಾಧನೆ

Upayuktha
0



ಬೆಳ್ತಂಗಡಿ: ನಡ ಸರಕಾರೀ ಪದವಿ ಪೂರ್ವ ಕಾಲೇಜಿನ ಮೂವರು ವಿಶೇಷ ಚೇತನ ವಿದ್ಯಾರ್ಥಿನಿಯರು ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.


ಆಶಾ ಕೆ. ಎಸ್.: 

ಈಕೆ 70%  ಅಂಗವೈಕಲ್ಯವನ್ನು ಹೊಂದಿದ್ದರೂ ಓದಿನಲ್ಲಿ ಅತೀವ ಆಸಕ್ತಿ ಹೊಂದಿರುವ ವಿದ್ಯಾರ್ಥಿನಿಯಾಗಿದ್ದು 500ರಲ್ಲಿ 414 ಅಂಕಗಳನ್ನು [82.8%] ಗಳಿಸಿ ಕಲಾ ವಿಭಾಗದಲ್ಲಿ ಕಾಲೇಜಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ.


ಅಶ್ವಿನಿ ಪ್ರಿಯಾ ಮೋನಿಸ್:

ಈಕೆಗೆ ಬರಹಗಾರಳಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ಸಹಕರಿಸಿದ್ದು, 400 ಅಂಕಗಳನ್ನು ಪಡೆದಿರುತ್ತಾರೆ.


ಫಾತಿಮತ್ ಸ್ವಾಬಿರಾ:

ಈಕೆ ಕಿವುಡ ವಿದ್ಯಾರ್ಥಿನಿಯಾಗಿದ್ದು 370 ಅಂಕಗಳನ್ನು ಗಳಿಸಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರು ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top