ನಿಟ್ಟೆ: ಎನ್-ಇಗ್ಮಾ 2024 ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ

Upayuktha
0


ನಿಟ್ಟೆ: ಕಾಲೇಜಿನ ಸದಾನಂದ ಸಭಾಂಗಣದಲ್ಲಿ ಏ.2 ರಂದು ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ ರಾಜ್ಯ ಮಟ್ಟದ ಎನ್-ಇಗ್ಮಾ 2024 ರಾಜಮತಾಜ್ ಸಾಂಸ್ಕೃತಿಕ ಸ್ಪರ್ಧೆಯನ್ನು ಆಳ್ವಾಸ್ ವಿದ್ಯಾ ಸಂಸ್ಥೆಯ ವಿವೇಕ್ ಆಳ್ವ ಅವರು ಉದ್ಘಾಟಿಸಿದರು.


ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿವೇಕ್ ಆಳ್ವ ಅವರು ಯಾವ ವಿದ್ಯಾರ್ಥಿಗಳು ಕೂಡ ಕಾಲೇಜು ಆಯೋಜಿಸುವ ಸ್ಪರ್ಧೆಗಳಿಂದ  ಹೊರಗುಳಿಯಬಾರದು, ಪ್ರತಿಯೊಬ್ಬನು ಕೂಡ ವಿದ್ಯಾರ್ಥಿ ಜೀವನದಲ್ಲಿ ನೂರು ಪ್ರತಿಶತ ಪ್ರಯತ್ನ ಪಡಬೇಕು. ಹಾಗೂ ಆಯ್ಕೆ ಮಾಡಿಕೊಂಡ ಕೋರ್ಸನ್ನು ಪ್ರಮಾಣಿಕವಾಗಿ ವ್ಯಾಸಂಗ ಮಾಡಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎನ್.ಜಿ.ಎಸ್.ಎಮ್. ಫಾರ್ಮಸಿಟಿಕ್ಯುಲ್ ಸೈನ್ಸ್ ನ ಪ್ರಾಂಶುಪಾಲರಾದ ಡಾ.ಸಿ.ಎಸ್ ಶಾಸ್ತ್ರಿ  ಅವರು  ಮಾತನಾಡಿ ವಿದ್ಯಾರ್ಥಿಗಳು ಪರದೆಗಳ ದಾಸರಾಗಿದ್ದು ಅದರಿಂದ ಹೊರಬಂದು ನೈಜ ಪ್ರಪಂಚದಲ್ಲಿ ಬದುಕಬೇಕು ಎಂದು ಕರೆ ನೀಡಿದರು. ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ  ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ  ಬಿ.ಕೆ.ಅವರು  ಮಾತನಾಡಿ ಸ್ಪರ್ಧಿಗಳು ಕೇವಲ ಗೆಲುವನ್ನು ಮಾತ್ರ ಸ್ವೀಕರಿಸುವುದಲ್ಲ ಸೋಲನ್ನು ಕೂಡ  ಸ್ವೀಕರಿಸಲು ಸಿದ್ದರಿರಬೇಕು. ಆಗ ಮಾತ್ರ  ಸ್ಪರ್ಧೆಗಳು   ಹೆಚ್ಚು ವೃತ್ತಿಪರ ಮತ್ತು ಮನರಂಜನೆಯಿಂದ ಕೂಡಿರಲು ಸಾಧ್ಯ ಎಂದು ತಿಳಿಸಿದರು.


ಸುಮಾರು 25 ವಿವಿಧ ಕಾಲೇಜಿನಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಗಮಿಸಿದ್ದರು. ಐಕ್ಯೂಎಸಿ ಸಂಯೋಜಕರಾದ ಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್ ಸಂಯೋಜಕಿ ಶ್ರೀಮತಿ ರೇಖಾ ವಂದನಾರ್ಪಣೆ ನೆರೆವೇರಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಮೇಶ್ ಎಂ ಮತ್ತು ವಿದ್ಯಾರ್ಥಿ ಪರಿಷತ್ ಸಂಯೋಜಕಿ ಶ್ರೀಮತಿ ಮಾಲಿನಿ ಜೆ ರಾವ್, ವಿದ್ಯಾರ್ಥಿ ಪರಿಷತ್  ಕಾರ್ಯದರ್ಶಿ ಕುಮಾರಿ ಶ್ರೀಷಾ ಯು ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ನೇಹಾ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top