ವ್ಯಾಸತೀರ್ಥ ವಿದ್ಯಾಪೀಠದಲ್ಲಿಂದು ಯುಗಾದಿ ಮಹಾಭಿಷೇಕ

Upayuktha
0

ಶ್ರೀ ವಿದ್ಯಾಶ್ರೀಶ ತೀರ್ಥರಿಂದ ಸಂಸ್ಥಾನ ಪೂಜೆ



ಮೈಸೂರು: ನಗರದ  ಕೃಷ್ಣಮೂರ್ತಿಪುರಂನ ಸೋಸಲೆ ವ್ಯಾಸರಾಜರ ಮಠದ  ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಯುಗಾದಿ ಮಹೋತ್ಸವದ ಅಂಗವಾಗಿ ಮಂಗಳವಾರ ದೇವರಿಗೆ ಮಹಾಭಿಷೇಕ ಹಮ್ಮಿಕೊಳ್ಳಲಾಗಿದೆ.


ಶ್ರೀಮನ್ ಮಧ್ವಾಚಾರ್ಯ, ಟೀಕಾಚಾರ್ಯ, ವ್ಯಾಸರಾಜಾದಿ ಯತಿಗಳ ಪ್ರತಿಮಾ ಸ್ಥಾನೀಯರಾದ ಹಾಲಿ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರು ಸಂಸ್ಥಾನ ಪ್ರತಿಮೆಗಳಿಗೆ ಬೆಳಗ್ಗೆ 8ರಿಂದ 12ರ ವರೆಗೆ  ಮಹಾಭಿಷೇಕ ನೆರವೇರಿಸಲಿದ್ದಾರೆ. ಮಹಾ ಸಂಸ್ಥಾನದ ಮುಖ್ಯ ಆರಾಧ್ಯ ಪ್ರತಿಮಾ ಶ್ರೀ ಮೂಲ ಗೋಪಾಲಕೃಷ್ಣ ದೇವರು, ಶ್ರೀ ಮೂಲ ಪಟ್ಟಾಭಿರಾಮ ದೇವರು, ಮತ್ತು ಪರಂಪರಾಗತ ಸಾಲಿಗ್ರಾಮಗಳಿಗೆ ಹಾಲು, ಮೊಸರು, ತುಪ್ಪ, ಜೇನು, ಎಳನೀರು ಸಹಿತ ಪಂಚಾಮೃತ ಅಭಿಷೇಕ ಮಾಡಲಾಗುವುದು. ನಂತರ ಕನಕಾಭಿಷೇಕ, ಮಹಾ ಮಂಗಳಾರತಿ, ಯತಿಭಿಕ್ಷೆ ಇತರ ಸೇವಾ ಕಾರ್ಯ ನಡೆಯಲಿದೆ. ಇದೇ ಸಂದರ್ಭ ಪ್ರಸಿದ್ಧ ಪಂಡಿತರಿಂದ ಪ್ರವಚನವೂ ನೆರವೇರಲಿದೆ.


ಸಂಜೆ 6.30ಕ್ಕೆ ವಿದ್ವಾಂಸರಿಂದ ಪಂಚಾಂಗ ಶ್ರವಣವಿರುತ್ತದೆ. ಭಕ್ತರು ಭಾಗವಹಿಸಬೇಕು ಎಂದು ವಿದ್ಯಾಪೀಠದ ಗೌರವ ಕಾರ್ಯದರ್ಶಿ  ಡಿ.ಪಿ. ಮಧುಸೂದನಾಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top