ಚುನಾವಣೆ ಪ್ರಜಾಫ್ರಭುತ್ವದ ಹಬ್ಬವಿದ್ದಂತೆ:ಡಾ ಚೂಂತಾರು

Upayuktha
0

ಕಡಬ ಗೃಹರಕ್ಷಕ ದಳದ ಘಟಕಕ್ಕೆ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಭೇಟಿ

ಕಡಬ ಗೃಹರಕ್ಷಕರಿಂದ ಮತದಾನ ಜಾಗೃತಿ.


ಮಂಗಳೂರು: ಜಗತ್ತಿನಲ್ಲೇ ಅತೀದೊಡ್ಡ ಪ್ರಜಾಪ್ರಭುತ್ವವಾದಿ ರಾಪ್ಟ್ರವಾದ ಭಾರತ ದೇಶ ಮಗದೊಂದು ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿದೆ. ಈ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜಾಪ್ರಭುತ್ವದ ಮೂಲ ಧ್ಯೇಯವೇ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವಂತಹಾ ವ್ಯವಸ್ಥೆ ಆಗಿರುತ್ತದೆ. ಇಲ್ಲಿ ಪ್ರತಿಯೊಬ್ಬ ಪ್ರಜೆಯ ಮತವೂ ಅತ್ಯಮೂಲ್ಯ ವಾಗಿರುತ್ತದೆ. ಮತದಾನ ಎನ್ನುವುದು ನಮ್ಮ ಹಕ್ಕು ಮಾತ್ರವಲ್ಲದೇ ನಮ್ಮ ಶಕ್ತಿ ಕೂಡಾ ಆಗಿರುತ್ತದೆ. ಪ್ರತೀ 05 ವರ್ಷಕ್ಕೊಮ್ಮೆ ನಡೆಯುವ ಈ ಚುನಾವಣೆ ಎಂಬ ಪ್ರಜಾಪ್ರಭುತ್ವದ  ಹಬ್ಬದಲ್ಲಿ ಪ್ರತಿಯೊಬ್ಬ ಪ್ರಜೆಯೂ ಪ್ರಜ್ನಾಪೂರ್ವಕವಾಗಿ, ಪಾಲ್ಗೊಳ್ಳಲೇಬೇಕಾದ ಅನಿವಾರ್ಯ ಕಾಲಘಟ್ಟಗಳಲ್ಲಿ ನಾವಿಲ್ಲಿ ನಿಂತಿದ್ದೇವೆ. ನನ್ನದೊಂದು ಮತದಿಂದ ಜಗತ್ತು ಅಡಿ ಮೇಲಾಗದು ಎಂಬ ತಾತ್ಸರದ ಧೋರಣೆ ಬಹಳ ಅಪಾಯಕಾರಿ. ಇಂತಹ ಉಡಾಪೆಯ ವರ್ತನೆ  ಮತ್ತು ನನ್ನದೊಂದು ಮತದಿಂದ ಏನಾಗಬಹುದು ಎಂಬ ನಿರ್ಲಕ್ಷದಿಂದಾಗಿ ನಾವು ಬಹಳ ಕಷ್ಟ ನಷ್ಟ ಅನುಭವಿಸುವುದು ಚರಿತ್ರೆಗಳಿಂದ ಹಲವು ಬಾರಿ ಸಾಬಿತ್ತಾಗಿದೆ. 


ಪ್ರತಿಯೊಂದು ಮತವೂ ಅತ್ಯಮೂಲ್ಯ ಮತ್ತು ಮತದಾನ ಎನ್ನುವುದು ಬಹಳ ಪವಿತ್ರವಾದ ಕರ್ತವ್ಯ ಎಂದು ಪ್ರತಿಯೊಬ್ಬ ಮತದಾರನೂ ತಿಳಿದುಕೊಂಡಲ್ಲಿ ಮಾತ್ರ ರಾಷ್ಟ್ರದ ಅಭಿವೃದ್ದಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬಹುದು. . ನೋಟಿಗಾಗಿ ವೋಟು ಎಂಬ ಮನೋಧರ್ಮವನ್ನು ಪ್ರತೀಯೊಬ್ಬ ಪ್ರಜ್ಞಾವಂತ ನಾಗರೀಕರೂ ಸಾರ್ವರ್ತಿಕವಾಗಿ ತಿರಸ್ಕರಿಸಬೇಕು. ವ್ಯಕ್ತಿಯ ನಡತೆ, ಚಾರಿತ್ರ್ಯ, ಸಾಮಾಜಿಕ ಬದ್ದತೆ, ಸಾಮಾಜಿಕ ಕಳಕಳಿ, ದೇಶಭಕ್ತಿ  ಇವೆಲ್ಲವನ್ನೂ ಅಳೆದು ತೂಗಿ ಮತದಾನ ಮಾಡಬೇಕಾದ ಕಾಲಘಟ್ಟಗಳಲ್ಲಿ ನಾವಿಂದು ನಿಂತಿದ್ದೇವೆ. ನಮ್ಮ ದೇಶದ ಭದ್ರತೆಗೆ ಮತ್ತು ಸುರಕ್ಷತೆಗೆ ಪೂರಕವಾದ ವಾತಾವರಣ ಕಲ್ಪಿಸುವ ವ್ಯಕ್ತಿಗೆ ಮತ್ತು ತತ್ವಕ್ಕೆ ಜನರು ಪ್ರಜ್ಞಾ ಪುರಕವಾಗಿ ಮತದಾನ ಮಾಡಿದರೆ ಮಾತ್ರ ದೇಶ ಪ್ರಗತಿ ಸಾದ್ಯವಾಗಬಹುದು. ನಾವು ಮತದಾನ ಮಾಡುವುದರಿಂದ ನಾಳೆ ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅಧಿಕಾರಯುತವಾಗಿ ಪ್ರಶ್ನಿಸುವ ನೈತಿಕ ಹಕ್ಕನ್ನೂ ನಾವು ಪಡೆಯುತ್ತೇವೆ. ಈ ಕಾರಣಕ್ಕಾದರೂ, ಪ್ರತಿಯೊಬ್ಬರೂ ಮತದಾನ ಮಾಡಲೇಬೇಕು. ಒಂದು ಬಲಿಷ್ಠ, ಸದೃಡ, ಸುದೃಡ, ಆರೋಗ್ಯವಂತ ಸಮೃದ್ದ ಭಾರತ ದೇಶದ  ನಿರ್ಮಾಣಕ್ಕಾಗಿ ನಾವೆಲ್ಲರೂ, ನಮ್ಮ ಹಕ್ಕನ್ನು ಅಧಿಕಾರಯುತವಾಗಿ ಚಲಾಯಿಸೋಣ ಎಂದು ಡಾ|| ಮುರಲೀ ಮೋಹನ್ ಚೂಂತಾರು ಸಮಾದೇಷ್ಟರು. ಗೃಹರಕ್ಷಕ ದಳ ದಕ್ಷಿಣ ಕನ್ನಡ ಮಂಗಳೂರು ಇವರು ಅಭಿಪ್ರಾಯಪಟ್ಟರು.


ಆದಿತ್ಯವಾರದಂದು ಕಡಬ ಗೃಹರಕ್ಷಕ ದಳದ ಘಟಕಕ್ಕೆ ಭೇಟಿ ನೀಡಿ, ಚುಣಾವನಾ ಸಿದ್ದತೆ ಸಭೆ ನಡೆಸಿದರು. ಈ ಸಮಯದಲ್ಲಿ ಮಾನ್ಯ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಿಗೆ ಕಡಬ ಘಟಕಾಧಿಕಾರಿ ತೀರ್ಥೇಶ್ ಅಮೈ  ಗೌರವ ವಂದನೆ ಸಲ್ಲಿಸಿದರು. ಗೃಹರಕ್ಷಕರು ಮತದಾನ ಜಾಗೃತಿ ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಸುನೀಲ್ ಕುಮಾರ್, ಹಿರಿಯ ಗೃಹರಕ್ಷಕರಾದ ಸುಂದರ, ಉದಯಶಂಕರ್, ದಯಾನಂದ್, ಮೀನಾಕ್ಷಿ, ರೂಪ, ಕುಸುಮಾ ಭಟ್ಟ್ ಮತ್ತು ಮೊದಲಾದ 20 ಜನ ಗೃಹರಕ್ಷಕ ಗೃಹರಕ್ಷಕಿಯರು ಹಾಜರಿಯಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top