ಬಲ್ಮಠ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯದ ವೆಬ್‌ಸೈಟ್ ಉದ್ಘಾಟನೆ
ಮಂಗಳೂರು: “ವಿದ್ಯಾರ್ಥಿನಿಯರು ಅಂತರ್ಜಾಲಗಳ ಮೂಲಕ ಕಾಲೇಜು ಗ್ರಂಥಾಲಯದಲ್ಲಿ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಶೀಘ್ರವಾಗಿ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಂಥಾಲಯ ವೆಬ್‌ಸೈಟ್ ವರದಾನವೇ ಸರಿ” ಎಂದು ಸಂತ ಆಗ್ನೇಸ್ (ಸ್ವಾಯತ್ತೆ) ಕಾಲೇಜಿನ ಮುಖ್ಯ ಗ್ರಂಥಾಧಿಕಾರಿಯಾಗಿರುವ ಡಾ. ವಿಶಾಲ ಬಿ.ಕೆ. ಅಭಿಪ್ರಾಯಪಟ್ಟರು.
ಇವರು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವೆಬ್‌ಸೈಟ್‌ನ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಿದ್ದರು.
ಇಂದಿನ ಡಿಜಿಟಲ್ ಯುಗದಲ್ಲಿ ಓದುಗರನ್ನು ಗಂಥಾಲಯಕ್ಕೆ ಆಕರ್ಷಿಸುವುದು ದೊಡ್ಡ ಸವಾಲಾಗಿದೆ. ಆದರೆ ಈ ಗ್ರಂಥಾಲಯ ವೆಬ್‌ಸೈಟ್‌ಗಳ ಮುಖಾಂತರ ಓದುಗರನ್ನು ತಲುಪುದರಲ್ಲಿ ಯಶಸ್ವಿಯಾಗಿದೆ ಎಂದರಲ್ಲದೆ ವಿದ್ಯಾರ್ಥಿನಿಯರು ಮೊಬೈಲನ್ನು ಸದ್ಬಳಕೆ ಮಾಡಬೇಕು ಎಂದರು. ಆನ್‌ಲೈನ್‌ನಲ್ಲಿ ಲಭ್ಯವಿರುವ ಅನೇಕ ಓಪನ್ ಸೋರ್ಸ್‌ಗಳ ಬಗ್ಗೆ ಮಾಹಿತಿಯನ್ನು ನೀಡಿದರು.
“ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಗದೀಶ ಬಾಳ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವೆಬ್‌ಸೈಟ್ ಬಳಕೆಯಿಂದ ವಿದ್ಯಾರ್ಥಿಗಳು ಪದವಿ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ಕ್ರಿಯಾತ್ಮಕವಾಗಿ ನಡೆಸಬಹುದು ಎಂದರು.
ಗೌರವ ಅತಿಥಿಗಳಾದ ಪ್ರೊ. ಶಶಿಕಲಾ.ಕೆ, ಇವರು “ಡಿಜಿಟಲ್ ಕ್ರಾಂತಿಯನ್ನೇ ಸೃಷ್ಟಿಸಿರುವ ಕಾಲೇಜಿನ ಗ್ರಂಥಾಲಯ ವೆಬ್ ಸೈಟ್ ವಿದ್ಯಾರ್ಥಿನಿಯರಿಗೆ ಬೌದ್ಧಿಕವಾಗಿ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಹಾಗೂ ಆ ಮೂಲಕ ತಮಗೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ಬೆರಳ ತುದಿಯಲ್ಲೇ ಪಡೆಯುವ ಅವಕಾಶ ಕಲ್ಪಿಸಿದೆ” ಎಂದರು.
ಡಾ. ಶೈಲಾರಾಣಿ ಬಿ, ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾ.ವಿಶಾಲ ಬಿ ಕೆ ಮತ್ತು ಪ್ರೊ.ಶಶಿಕಲಾ ಕೆ ಇವರಿಗೆ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ವಿಭಾಗದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಕು.ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಕು ಮುನೀರಾ ಸ್ವಾಗತ ಭಾಷಣ ಮಾಡಿದರು ಹಾಗೂ ಕು ಅನನ್ಯ ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ