ಮಂಗಳೂರು: ಮೋಹಕ ನಟಿ ಮತ್ತು ಟಾಟಾ ಟೀ ಚಕ್ರ ಗೋಲ್ಡ್ ಪ್ರಚಾರ ರಾಯಭಾರಿ ರಶ್ಮಿಕಾ ಮಂದಣ್ಣ ಜತೆಗೆ 25 ಮಂದಿ ಅದೃಷ್ಟಶಾಲಿ ಅಭಿಮಾನಿಗಳು ಚಹಾ ಸೇವಿಸುತ್ತಾ ಸಂವಾದ ನಡೆಸುವ ಅಪೂರ್ವ ಅವಕಾಶಕ್ಕೆ ಟಾಟಾ ಟೀ ಚಕ್ರ ಗೋಲ್ಡ್ ಆಯೋಜಿಸಿದ್ದ 'ಸುವರ್ಣ ಅವಕಾಶ'ದ ಗ್ರಾಂಡ್ ಫಿನಾಲೆ ಸಾಕ್ಷಿಯಾಯಿತು.
ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ಲಕ್ಷಾಂತರ ಗ್ರಾಹಕರು 90 ದಿನಗಳ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಿಮವಾಗಿ 25 ಮಂದಿ ವಿಜೇತರು ರಶ್ಮಿಕಾ ಜತೆಗಿನ ಸಂವಾದದ ವಿಶೇಷ ಅವಕಾಶ ಪಡೆದರು.
ಅತಿಥಿಗಳ ಜತೆ ರಶ್ಮಿಕಾ ಅವರನ್ನು ಭೇಟಿ ಮಾಡಿದ ವಿಜೇತರು ವೈಯಕ್ತಿಕವಾಗಿ ಸಂವಾದ ನಡೆಸುವ ಜತೆಗೆ ಮೀಟ್ ಅಂಡ್ ಗ್ರೀಟ್ ಸೆಷನ್‍ನ ಸ್ಮರಣೀಯ ಅವಕಾಶ ಪಡೆದರು. 500 ಮಂದಿ ಅದೃಷ್ಟಶಾಲಿ ವಿಜೇತರಿಗೆ ಸೊಗಸಾದ ಚಿನ್ನದ ನಾಣ್ಯಗಳನ್ನು ಟಾಟಾ ಟೀ ಚಕ್ರ ಗೋಲ್ಡ್ ವತಿಯಿಂದ ವಿತರಿಸಲಾಯಿತು ಎಂದು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್‍ನ ಪ್ಯಾಕೇಜ್ಡ್ ಪಾನೀಯಗಳ ಭಾರತ ಮತ್ತು ದಕ್ಷಿಣ ಏಷ್ಯಾ ವಿಭಾಗದ ಅಧ್ಯಕ್ಷ ಪುನೀತ್ ದಾಸ್ ಹೇಳಿದ್ದಾರೆ.
ಗ್ರಾಹಕರು 'ಟಾಟಾ ಟೀ ಚಕ್ರ ಗೋಲ್ಡ್'ನ ಯಾವುದೇ ಆಫರ್ ಪ್ಯಾಕ್ ಖರೀದಿಸಿ ಮಿಸ್ಡ್ ಕಾಲ್ ನೀಡುವ ಮೂಲಕ ಅಥವಾ ಪ್ಯಾಕ್ ಮೇಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ಪ್ಯಾಕ್‍ನಲ್ಲಿ ಕಂಡುಬರುವ ವಿಶಿಷ್ಟ ಕೋಡ್ ಅನ್ನು ಹಂಚಿಕೊಳ್ಳುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ