ಶಿರಸಿ: ಇಂದಿನಿಂದ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭವಾಗಲಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ರಾಜ್ಯದ ಅತಿ ದೊಡ್ಡ ಜಾತ್ರೆ ಎನಿಸಿರುವ ಶಿರಸಿ ಮಾರಿ ಕಾಂಬಾ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.
ಮಾ.19ರಿಂದ ಮಾ. 27ರಿಂದ 9 ದಿನಗಳ ಕಾಲ ಉತ್ಸವ ನಡೆಯಲಿದೆ. ಭಕ್ತರು ತಮ್ಮ ಆರಾಧ್ಯ ದೇವಿ ಶಿರಸಿಯಮ್ಮ, ಮಾರಿಯಮ್ಮನ ದರ್ಶನಕ್ಕೆ ಸಿದ್ದರಾಗಿದ್ದು ದರ್ಶನ ಆರಂಭವಾಗಿದೆ.
ಶ್ರೀದೇವಿಯ ಭಕ್ತರಿಗೆ ಸೇವೆ ಸಲ್ಲಿಸಲು, ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲು ದೇವಸ್ಥಾನದ ಆಡಳಿತ ಮಂಡಳಿ, ಬಾಬುದಾರರ ಕುಟುಂಬಗಳು ಹಾಗೂ ತಾಲೂಕು ಆಡಳಿತ, ಸರ್ಕಾರದ ವಿವಿಧ ಇಲಾಖೆಗಳು ಶ್ರಮಿಸುತ್ತಿವೆ.
ಅಮ್ಮನವರ ಜಾತ್ರಾ ಕಲ್ಯಾಣ ಮಹೋತ್ಸವ ದಿ. 19 - 03 - 2024 ಸ. ರಾತ್ರಿ 11: 39 ರಿಂದ 11: 45 ರ ವರೆಗೆ,
ಅಮ್ಮನವರ ರಥಾರೋಹಣ ದಿ. 20 - 03 - 2024 ಸ. ಬೆಳಿಗ್ಗೆ 7: 29 ರಿಂದ 7: 39 ರ ಒಳಗೆ,
ಅಮ್ಮನವರ ರಥೋತ್ಸವ ಶೋಭಯಾತ್ರೆ ದಿ. 20 - 03 - 2024 ಸ. ಬೆಳಿಗ್ಗೆ 8: 59 ರಿಂದ,
ಜಾತ್ರಾ ಗದ್ದುಗೆಯ ಮೇಲೆ ಅಮ್ಮನವರ ಸ್ಥಾಪನೆ ಸ. ಮಧ್ಯಾಹ್ನ 12: 57 ರ ನಂತರ 1: 10 ರ ಒಳಗೆ,
ಅಮ್ಮನವರಿಗೆ ಉಡಿ, ಅರ್ಚನೆ, ಹರಕೆಗಳ ಸೇವೆ ದಿ. 21 - 03 - 2024 ಸ. ಬೆಳಿಗ್ಗೆ 5 ರಿಂದ ಪ್ರಾರಂಭ
ಅಮ್ಮನವರಿಗೆ ಉಡಿ, ಅರ್ಚನೆ, ಹರಕೆಗಳ ಸೇವೆಯ ಕೊನೆಯ ದಿ. 27 - 03 - 2024 ಸ. ಬೆಳಿಗ್ಗೆ 10:15 ಸೇವೆ ಮುಕ್ತಾಯ,
ಜಾತ್ರಾ ಮುಕ್ತಾಯ ಅಮ್ಮನವರು ಜಾತ್ರ ಗದ್ದುಗೆಯಿಂದ ಏಳುವುದು ದಿ. 27 - 03 - 2024 ಸ. ಬೆಳಿಗ್ಗೆ 10: 41 ಕ್ಕೆ,
ಅಮ್ಮನವರ ಪುನರ್ ಪ್ರತಿಷ್ಠೆ, ಯುಗಾದಿ ಪ್ರತಿಷ್ಠೆ ದಿ. 09 - 04 - 2024 ಸ. ಬೆಳಿಗ್ಗೆ 7: 51 ರಿಂದ 08: 03 ರ ಒಳಗೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ