ಬೆಂಗಳೂರು: ನಗರದ ಶ್ರೀ ದೇವಗಿರಿ ಲಕ್ಷ್ಮೀಕಾಂತ ಸಂಘದ ವತಿಯಿಂದ ಜಯನಗರ 8ನೇ ಬ್ಲಾಕ್‍ನ ಬೆಳಗೋಡು ಕಲಾ ಮಂಟಪದಲ್ಲಿ ತಿರುಮಲ ತಿರುಪತಿ ದೇವಸ್ಥಾನದ ದಾಸಸಾಹಿತ್ಯ ಪ್ರಾಜೆಕ್ಟ್ ಹಾಗೂ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ ವಿಶಿಷ್ಟವಾಗಿ 36ನೇ ವರ್ಷದ ಪುರಂದರದಾಸರ ಸಂಸ್ಮರಣೋತ್ಸವದಲ್ಲಿ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಕೆ.ಅಪ್ಪಣ್ಣಾಚಾರ್ಯರ ನೇತೃತ್ವದಲ್ಲಿ ಸುಪ್ರಭಾತಸೇವೆ , ಸಾಮೂಹಿಕ ಭಜನೆ ನಂತರ ಅನುಗ್ರಹ ಸಂಗೀತ ಮಹಾವಿದ್ಯಾಲಯದ ವಿದ್ವಾನ್ ಜೆ.ಎಸ್.ಶ್ರೀಕಂಠಭಟ್ ಮತ್ತು ಶಿಷ್ಯವೃಂದದಿಂದ ಪಿಳ್ಳಾರಿ ಗೀತೆಗಳು ನಡೆಯಿತು .
ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಕೆ.ಅಪ್ಪಣ್ಣಾಚಾರ್ಯರಿಂದ ಅನುಗ್ರಹ ವಚನ . ನಾಡಿನ ಖ್ಯಾತ ಹರಿದಾಸ ಸಾಹಿತ್ಯ ವಿದ್ವಾಂಸರಾದ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ , ಡಾ ಸುಭಾಷ್ ಕಾಖಂಡಕಿ , ಡಾ.ವಾಸುದೇವ ಅಗ್ನಿಹೋತ್ರಿ, ಕಲ್ಲಾಪುರ ಪವಮಾನಚಾರ್ಯರು ,ಡಾ.ಹ.ರಾ.ನಾಗರಾಜಾಚಾರ್ಯರು,ಡಾ.ಪರಶುರಾಮ ಬೆಟಗೇರಿ, ಪ್ರಸಿದ್ಧ ಗಾಯಕ , ಡಾ.ರಾಯಚೂರು ಶೇಷಗಿರಿದಾಸರು ಮತ್ತು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ಅನಂತರಾವ್ ದಂಡಿನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾರಂಭದಲ್ಲಿ ವಿದ್ವಾನ್ ಮಾದನೂರು ಪವಮಾನಾಚಾರ್ಯರಿಗೆ ಸನ್ಮಾನ ; ಮಧ್ಯಾಹ್ನ ವಿದ್ವಾನ್ ರಾಘವೇಂದ್ರ ಸಿ.ಎನ್.ರಾಯಚೂರು ರವರಿಂದ ದಾಸವಾಣಿ , ಡಾ. ರಾಜಲಕ್ಷ್ಮಿ ಪಾರ್ಥಸಾರಥಿ , ಪುಷ್ಪಾ ಗುಪ್ತ , ಡಾ.ರೇಖಾಕಾಖಂಡಕಿ , ಪದ್ಮಾ ಕಾಖಂಡಕಿ , ಡಾ.ಚಂದ್ರಿಕಾ , ಡಾ,ರಮಾವಿಠಲ್ ಮುಂತಾದ ಮಹಿಳಾ ಹರಿದಾಸಿಣಿಯರಿಗೆ ಮತ್ತು ಸಂಘದ ಹಿರಿಯ ಸದಸ್ಯರಾದ ಸುಮನಾ ಬದಿನಾಥ್ , ವೇದಾವತಿ ಮತ್ತು ಪ್ರಮೀಳಾ ರವರಿಗೆ ಸನ್ಮಾನ , ಸಂಜೆ ದೇವಗಿರಿ ಲಕ್ಷ್ಮೀ ಕಾಂತ ಸಂಘದವರು ನಡೆಸಿದ ಸಾಹಿತ್ಯಕ- ಸಾಂಸ್ಕøತಿಕ ಆಟಗಳ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿನಿಯೋಗ , ಕಲಾಯೋಗಿ ಪುಲಿಕೇಶಿಕಸ್ತೂರಿ ರವರ ಶಾಂತಳಾ ಆರ್ಟ್ಸ್ ರವರಿಂದ ನೃತ್ಯ ರೂಪಕ ಆಯೋಜಿಸಲಾಗಿತ್ತು. ವಿವರಗಳಿಗೆ : 97418 40330
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ