ಶ್ರೀ ರಾಘವೇಂದ್ರ ರಾಯರ ಪಟ್ಟಾಭಿಷೇಕ ಮಹೋತ್ಸವ

Upayuktha
0

ಇಂದು ಕಲಿಯುಗದ ಕಾಮಧೇನು. ಕಲ್ಪವೃಕ್ಷ ಎನಿಸಿಕೊಂಡ ಶ್ರೀ ರಾಘವೇಂದ್ರರಾಯರ  403 ನೇ ಪಟ್ಟಾಭಿಷೇಕ ಮಹೋತ್ಸವ. ಫಾಲ್ಗುಣ ಶುದ್ಧ ದ್ವಿತೀಯದಂದು ಶ್ರೀ ಗುರುರಾಯರು 1614 ರಲ್ಲಿ ವೇದಾಂತ ಸಾಮ್ರಾಜ್ಯದ ಸಿಂಹಾಸನವೇರಿದರು. ಅಲ್ಲಿಂದ ಅವರ ಅಧ್ಯಯನದ ಪರಿಧಿ ಇನ್ನೂ ಹೆಚ್ಚುತ್ತ ಹೋಯಿತು.


ಅವರು ಶ್ರೀ ತಿಮ್ಮಣ್ಣಭಟ್ಟ ಮತ್ತು ಗೋಪಿಕಾಂಬಾರ ತೃತೀಯ ಪುತ್ರರಾಗಿ ತಮಿಳುನಾಡಿನ ಭುವನಗಿರಿ ಎಂಬಲ್ಲಿ 1595ರಲ್ಲಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ವೆಂಕಟನಾಥ.


ಅವರ ಮೊದಲ ವಿದ್ಯಾಭ್ಯಾಸ ಮಧುರೈನ ಅವರ ಭಾವ ಶ್ರೀಲಕ್ಷ್ಮೀನರಸಿಂಹಾಚಾರ್ಯರಲ್ಲಿ ಆಯಿತು. ಆಗಿನ ಆಚಾರದಂತೆ ಸರಸ್ವತಿ ಬಾಯಿಯವರನ್ನು ಮದುವೆಯಾದರು. ಅವರಿಗೆ ಲಕ್ಷ್ಮೀನಾರಾಣಯನೆಂಬ ಮಗು ಜನಿಸಿದನು.


ನಂತರ ಕುಂಭಕೋಣಂಗೆ ಬಂದರು. ಕುಂಭಕೋಣಂನ ಮಠದಲ್ಲಿ ಶ್ರೀ ಸುಧೀಂದ್ರರ ಶಿಷ್ಯರಾದರು. ವೆಂಕಟನಾಥರು ಚುರುಕು ಬುದ್ಧಿಯ ಕುಶಾಗ್ರಮತಿಯಾಗಿದ್ದರು. ಕಲಿಕೆಯಲ್ಲಿ ಯಾವಾಗಲೂ ಮುಂದಿರುತ್ತಿದ್ದನ್ನು ಗಮನಿಸಿದರು ಅವರ ಗುರುಗಳು, ಶ್ರೀ ಸುಧೀಂದ್ರರು. ಮುಂದಿನ

ಗುರುವಾಗಲು ಸನ್ಯಾಸ ಸ್ವೀಕರಿಸಿ ಜಗದ ಉದ್ಧಾರ ಮಾಡಲು ಇವರೇ ಸೂಕ್ತ ಶಿಷ್ಯ ಎಂದುಕೊಂಡರು.


ಅವರ ಬುದ್ಧಿಮತ್ತೆಯ ಅರಿವಿದ್ಧ ಶ್ರೀ ಸುಧಿಂದ್ರತೀರ್ಥರು ಸನ್ಯಾಸ ಸ್ವೀಕರಿಸು ಎಂದೂ ಲೋಕಕಲ್ಯಾಣ ಮಾಡು ಎಂದು ಹೇಳಿದರು. ಮೊದಲು ಅವರು ಒಪ್ಪಲಿಲ್ಲ. ಅವರು ಮದುವೆಯಾಗಿ ಬಹಳ ದಿನಗಳು ಕಳೆದಿರಲಿಲ್ಲ. ಮಗನ ಮುಂಜಿವೆ ಮಾಡಬೇಕು, ಇನ್ನೂ ಸಂಸಾರದ ಕರ್ತವ್ಯಗಳು ಬಹಳ ಇವೆ ಎಂದುಕೊಂಡಿದ್ದರು.


ಅವರಿಗೆ ಸ್ವಪ್ನದಲ್ಲಿ ಸಾಕ್ಷಾತ್ ದೇವಿ ಸರಸ್ವತಿ ಕಾಣಿಸಿಕೊಂಡು ಸನ್ಯಾಸ ಸ್ವೀಕರಿಸೆಂದು ಹೇಳಿದಳು. ತಾಯಿ ಸರಸ್ವತಿಯ ಮಾತನ್ನು ಮೀರುವ ಹಾಗಿರಲಿಲ್ಲ. ಅದರಂತೆ ಅವರು 1614 ರಲ್ಲಿ ಸನ್ಯಾಸ ಸ್ವೀಕರಿಸಿದರು.


ಅವರ ಪತ್ನಿ ದುಃಖಿತಳಾಗಿ ಆತ್ಮಹತ್ಯೆ ಮಾಡಿಕೊಂಡಳು. ಅವರ ಮುಂದೆ ಪ್ರೇತವಾಗಿ ನಿಂತಾಗ, ತಮ್ಮ ತಪ:ಶಕ್ತಿಯಿಂದ ಅವಳಿಗೆ ಸದ್ಗತಿ ನೀಡಿದರು. 


ಅವರು ಅನೇಕ ವೇದಾಂತ ಮೀಮಾಂಸೆ, ವೇದಾಭ್ಯಾಸ ಮಾಡಿದರು. ಪಂಡಿತರ ಜೊತೆ ವಾದದಲ್ಲಿ ಗೆದ್ದು ಮಹಾಭಾಷ್ಯಾಚಾರ್ಯರೆನಿಸಿಕೊಂಡರು. ಅನೇಕ ಶಾಸ್ತ್ರಗ್ರಂಥಗಳನ್ನು ತೀಡಿ ಅದರ ಗಂಧ ಹರಡುವಂತೆ ಮಾಡಿ "ಪರಿಮಳಾಚಾರ್ಯ"ರೆನಿಸಿಕೊಂಡರು. ಅನೇಕ ಪವಾಡಗಳನ್ನು ಮಾಡಿ ಭಕ್ತರ ಕಾಮಧೇನುವಾದರು. 


ಅವರು 1614ರಿಂದ 1671 ರವರೆಗೂ ಮಠದ ಸೇವೆ ಮಾಡಿದರು. 1671 ರಲ್ಲಿ ತಾವು  700 ವರ್ಷ ಇನ್ನು ತೇಜೋರೂಪದಲ್ಲಿರುವದಾಗಿ ಭಕ್ತರ ಬೇಡಿಕೆಗಳನ್ನು ಪೂರೈಸುವುದಾಗಿ ಹೇಳಿ ಈಗಿನ ಆಂಧ್ರದ ಕರ್ನೂಲ ಜಿಲ್ಲೆಯ ಮಂತ್ರಾಲಯದಲ್ಲಿ ಸಶರೀರ ವೃಂದಾವನ ಪ್ರವೇಶಿಸಿದರು.


ಇಂದು ಮಂತ್ರಾಲಯದಲ್ಲಿ "ಶ್ರೀಗುರುವೈಭವೋತ್ಸವ" ನಡೆಯುತ್ತದೆ. ಅವರ ವೃಂದಾನಕ್ಕೆ ವಿಶೇಷ ಪೂಜೆ ಮತ್ತು ಅವರ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪಾದುಕೆಗಳನ್ನು ರಥೋತ್ಸವದಲ್ಲಿ ಮೆರೆಸಲಾಗುತ್ತದೆ. 


ಶ್ರೀ ಗುರುರಾಯರ ಭಕ್ತರು ಜಗದ ತುಂಬೆಲ್ಲ ವ್ಯಾಪಿಸಿದ್ದಾರೆ, ಅವರು ದೇಶ ವಿದೇಶಗಳಲ್ಲೂ ತಮ್ಮ ಕಾರುಣ್ಯ ಕಟಾಕ್ಷ ತೋರಿ, ಬಂದು ಭಕ್ತರಿಗೆ ಬೇಡಿದ್ದನ್ನು ಕೊಟ್ಟು ಅನುಗ್ರಹಿಸಿದ್ದಾರೆ. ಇಂಥ ಮಹಾನ್ ಯತಿಗಳನ್ನು ಸ್ಮರಿಸುವ ದಿನ ಇಂದು.


-ರೇಖಾ ಮುತಾಲಿಕ್, ಬಾಗಲಕೋಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top