ಶ್ರಮಜೀವಿಯಿಂದ ಫಾರ್ಮ್ ಟಿವಿ ಹೆಲ್ತ್- ನಾಳೆಯಿಂದ ಆರಂಭ

Chandrashekhara Kulamarva
0


ಬೆಂಗಳೂರು: ಕರ್ನಾಟಕದ ಜನಪ್ರಿಯ ಕೃಷಿ ಒಟಿಟಿ ’ಫಾರ್ಮ್ ಟಿವಿ’ ನಾಳೆಯಿಂದ (ಏ.1) ಆರೋಗ್ಯ ಮಾಧ್ಯಮ ಸೇವೆ ಆರಂಭಿಸುತ್ತಿದೆ. 'ಫಾರ್ಮ್ ಟಿವಿ ಹೆಲ್ತ್’ ಹೆಸರಿನಲ್ಲಿ ಈಗಿರುವ ಫಾರ್ಮ್ ಟಿವಿ ಒಟಿಟಿಯಲ್ಲಿಯೇ ದಿನಕ್ಕೊಂದು ಮುದ್ರಿತ ಆರೋಗ್ಯ ಕಾರ್ಯಕ್ರಮ ಮತ್ತು ಒಂದು ನೇರ ಪ್ರಸಾರ ಮೂಡಿಬರಲಿದೆ. ಮೊದಲದಿನ ಆಸ್ಟರ್ ಅರ್.ವಿ. ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ವೈದ್ಯ ಡಾ. ದಿವಾಕರ ಭಟ್ ರವರ ಸಂದರ್ಶನ ಆಧರಿತ 'ಆಯುಷ್ಮಾನ್ ಭವ’ ಮುದ್ರಿತ ಕಾರ್ಯಕ್ರಮ ಮತ್ತು ಸಂಜೆ 4:30 ರಿಂದ 5:30 ರ ವರೆಗೆ ಅದೇ ವೈದ್ಯರ ನೇರ ಪ್ರಸಾರ ಕಾರ್ಯಕ್ರಮ 'ಸೌಖ್ಯ ಸೇತು’ ಪ್ರಸಾರವಾಗಲಿದೆ.


ಅಂದಹಾಗೆ ಕೃಷಿ ಕಾರ್ಯಕ್ರಮಗಳು ಈಗಿರುವಂತೆಯೇ ಮುಂದುವರೆಯಲಿದೆ. ಶ್ರಮಜೀವಿ ಟೆಲಿವಿಶನ್ ಕಂಪನಿಯ ಈ ಫಾರ್ಮ್ ಟಿವಿ ಕಳೆದ ಮೂರು ವರ್ಷಗಳಿಂದ ಕರ್ನಾಟಕದ ರೈತರ ಸೇವೆಯಲ್ಲಿ ತೊಡಗಿದ್ದು ಸುಮಾರು ಒಂದು ಲಕ್ಷ ರೈತರು FarmTV ಒಟಿಟಿ ಆಪ್, ಯೂಟ್ಯೂಬ್ ಮತ್ತು ಫೇಸ್ ಬುಕ್ ಮೂಲಕ ಕೃಷಿ ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಿದ್ದಾರೆ. ಜೊತೆಗೆ ಕಳೆದ ಒಂದು ವರ್ಷದಿಂದ ’ಶ್ರಮಜೀವಿ ಕೃಷಿ’ ಮಾಸಪತ್ರಿಕೆ ಕೂಡ ರಾಜ್ಯದ ರೈತರ ಮನೆ– ಮನ ತಲುಪುತ್ತಿದೆ. ವಿಶೇಷವೆಂದರೆ ಈ ಎಲ್ಲ ಸೇವೆಗಳು ರೈತರಿಗೆ ಉಚಿತ. ಅಂದಹಾಗೆ ಫಾರ್ಮ್ ಟಿವಿ ಹೆಲ್ತ್ ಸೇವೆ ಕೇವಲ ರೈತರಿಗೆ ಸೀಮಿತವಲ್ಲ. ಎಲ್ಲ ಜನಸಾಮಾನ್ಯರು ಇದರ ಪ್ರಯೋಜನ ಪಡೆಯಬಹುದು.


ಇಂದಿನಿಂದ ಪ್ರಸಾರ ಆರಂಭಿಸಿರುವ ಫಾರ್ಮ್ ಟಿವಿ ಹೆಲ್ತ್ ವಾಹಿನಿ ಸಂಪಾದಕಿ ಡಾ. ರೇಖಾ ಮತ್ತು ಪ್ರಧಾನ ಸಂಪಾದಕ ಡಾ. ವೆಂಕಟ್ರಮಣ ಹೆಗಡೆಯವರ ನೇತೃತ್ವದಲ್ಲಿ ನಡೆಯಲಿದೆ. ಜನಪ್ರಿಯ ಆಸ್ಪತ್ರೆ ಸರಣಿಗಳಾದ ನಾರಾಯಣ ಹೆಲ್ತ್, ಅಪೋಲೊ ಆಯುರ್ವೈದ:, ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ, ಸ್ಪರ್ಶ್, ಆಸ್ಟರ್, ಮಣಿಪಾಲ್, ಅಪೋಲೊ, ಕೆ.ಎಲ್.ಇ. ಮುಂತಾದ ಬ್ರಾಂಡ್ ಗಳ ಜೊತೆ ಶ್ರಮಜೀವಿ ಟೆಲಿವಿಶನ್ ಒಪ್ಪಂದ ಮಾಡಿಕೊಂಡಿದೆ. ಫಾರ್ಮ್ ಟಿವಿ ಹೆಲ್ತ್ ಶಿಫಾರಸ್ಸಿನೊಂದಿಗೆ ಹೋಗುವವರಿಗೆ ಈ ಎಲ್ಲ ದೊಡ್ಡ ಆಸ್ಪತ್ರೆಗಳಲ್ಲಿ ಆದ್ಯತೆಯ ಉಪಚಾರ, ಚಿಕಿತ್ಸಾ ಮಾರ್ಗದರ್ಶನ ಮತ್ತು ಬಿಲ್ ಮೇಲೆ ಒಂದಿಷ್ಟು ಡಿಸ್ಕೌಂಟ್ ಸಿಗಲಿದೆ. ಅಗತ್ಯ ಮತ್ತು ಅರ್ಹತೆ ಇದ್ದವರಿಗೆ ತುರ್ತು ಆರೋಗ್ಯ ಸಾಲದ ವ್ಯವಸ್ಥೆ ಕೂಡ ಇರುತ್ತದೆ. ಅಂದಹಾಗೆ ಫಾರ್ಮ್ ಟಿವಿಗೆ ಯಾವುದೇ ಶುಲ್ಕ ಕೊಡಬೇಕಿಲ್ಲ ಮತ್ತು ಫಾರ್ಮ್ ಟಿವಿ ಆಸ್ಪತ್ರೆಗಳಿಂದ ಬಿಲ್ ಮೇಲೆ ಯಾವುದೇ ಕಮಿಶನ್ ಪಡೆಯುವುದಿಲ್ಲ. ಆಸ್ಪತ್ರೆಗಳು ಕೊಡುವ ಜಾಹಿರಾತು ಮಾತ್ರ ಇದರ ಆದಾಯ.


ಆರೋಗ್ಯ ಸೇವೆಯ ಮಾರ್ಗದರ್ಶನ ಬೇಕಾದವರು ದಿನದ ಅವಧಿಯಲ್ಲಿ 7676897631, 9740369163 ಸಂಖ್ಯೆಗೆ ಕರೆ ಮಾಡಬಹುದು. ದೈನಂದಿನ ನೇರ ಪ್ರಸಾರದಲ್ಲಿ ತಜ್ಞ ವೈದ್ಯರೊಂದಿಗೆ ಇದೇ ಸಂಖ್ಯೆ ಬಳಸಿ ಸಮಾಲೋಚನೆ ನಡೆಸಬಹುದು. ಫಾರ್ಮ್ ಟಿವಿ ಹೆಲ್ತ್ ಸೇವೆ ಇಡೀ ಕರ್ನಾಟಕದ ಜನರಿಗೆ ಲಭ್ಯ.


ವರದಿ: ಡಾ. ವೆಂಕಟ್ರಮಣ ಹೆಗಡೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top