ಮೂಡುಬಿದಿರೆ: ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ‘ಸ್ಮಾರ್ಟ್ ಶಾಕ್‍ವೇವ್ ವೆಲಾಸಿಟಿ ಮೆಷರ್‍ಮೆಂಟ್ ಸಿಸ್ಟಮ್’ (ಸ್ಮಾರ್ಟ್ ಆಘಾತ ತರಂಗಗಳ ವೇಗ ಮಾಪನ ವ್ಯವಸ್ಥೆ) ಪೇಟೆಂಟ್ ಪಡೆದುಕೊಂಡಿದೆ.
ಈ ಆವಿಷ್ಕಾರವು ಕೇವಲ ಆಘಾತ ತರಂಗಗಳ ವೇಗ ಮಾಪನ ಮಾತ್ರವಲ್ಲ, ವಿವಿಧ ಅನುಷ್ಠಾನಗಳು ಹಾಗೂ ಅಗ್ನಿ ಸಂಬಂಧಿತ ಹಾಗೂ ಬೆಳಕಿನ ತಂತ್ರಜ್ಞಾನದಲ್ಲಿ ವಿಶೇಷವಾಗಿ ಕ್ರಾಂತಿಕಾರಿ ಕೊಡುಗೆ ನೀಡಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಲಕ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸಂಶೋಧನಾ ಡೀನ್ ಡಾ. ರಿಚರ್ಡ್ ಪಿಂಟೊ ಅವರ ನಾಯಕತ್ವದಲ್ಲಿ ಈ ಸಾಧನೆ ನೆರವೇರಿದೆ. ಕಾಲೇಜಿನ ಪ್ರಾಧ್ಯಾಪಕರು ಹಾಗೂ ಆವಿಷ್ಕಾರ ಮಾಡಿದ ವಿದ್ಯಾರ್ಥಿಗಳ ಬದ್ಧತೆಯ ಪರಿಶ್ರಮದಿಂದ ಪೇಟೆಂಟ್ ಅರ್ಜಿ ಸಂಖ್ಯೆ 201941024087 ಸಾಧ್ಯವಾಗಿದೆ.
ಡಾ.ರಿಚರ್ಡ್ ಪಿಂಟೊ ನೇತೃತ್ವದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡಿಸ್, ಪ್ರಾಧ್ಯಾಪಕರಾದ ಡಾ. ರಾಮಪ್ರಸಾದ್ ಅರಂತಾಡಿ ತಿಮ್ಮಪ್ಪ, ಡಾ. ಜಯರಾಮ ಅರಸಲಿಕೆ ಮತ್ತು ಡಾ. ಅರ್ಜುನ್ ಸುನಿಲ್ ರಾವ್ ಅವರ ತಜ್ಞ ಮಾರ್ಗದರ್ಶನವು ಸಹಕಾರಿಯಾಗಿದೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅನೂಪ್ ರಾಧಾ ಬಾಲನ್, ಜ್ಯೋತಿಷ್ ಕುಮಾರ್ ಕುಂಞಪುರಯಿಲ್ ಮತ್ತು ಅರ್ಜುನ್ ಅಶೋಕ ಅಂಬತ್ತುಪರಾಂಬಿಲ್ ಅವರು ಡಾ. ರಿಚರ್ಡ್ ಪಿಂಟೊ ಮಾರ್ಗದರ್ಶನದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರ ಸಂಪೂರ್ಣ ಪ್ರೋತ್ಸಾಹದ ಪರಿಣಾಮ ಈ ಕಾರ್ಯವು ಫಲಪ್ರದವಾಗಿದೆ. ಸಂಶೋಧನೆಗೆ ಅವರು ನೀಡಿದ ಬೆಂಬಲವು ಯಶಸ್ಸಿಗೆ ಕಾರಣವಾಗಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅವರ ದೂರದೃಷ್ಟಿ ಹಾಗೂ ಸಂಶೋಧಕ ಹಾಗೂ ಆವಿಷ್ಕಾರದ ಕ್ಷೇತ್ರ ಕುರಿತ ದೃಷ್ಟಿಕೋನವು ಬಹುಮುಖ್ಯ ಕಾರಣವಾಗಿದೆ.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಆವಿಷ್ಕಾರ ಮತ್ತು ಅಕಾಡೆಮಿಕ್ ಶ್ರೇಷ್ಠತೆಗೆ ಬದ್ಧವಾಗಿರುವುದಕ್ಕೆ ಈ ಪೇಟೆಂಟ್ ಮತ್ತೊಮ್ಮೆ ಸಾಕ್ಷಿಯಾಗಿದೆ. ಡಾ.ರಿಚರ್ಡ್ ಪಿಂಟೊ ಮಾರ್ಗದರ್ಶನದಲ್ಲಿ ಅಗ್ನಿ ಸಂಬಂಧಿತ ಹಾಗೂ ಬೆಳಕಿನ ತಂತ್ರಜ್ಞಾನ ಕೈಗಾರಿಕೆಗಳಲ್ಲಿ ತಾಂತ್ರಿಕ ಪ್ರಗತಿಯನ್ನು ಮುಂದಡಿಯನ್ನು ಇಡಲಾಗಿದೆ. ಈ ಸಾಧನೆಯ ಹಿಂದೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಸೇರಿದಂತೆ ಎಲ್ಲರ ಪೂರಕ ಕೊಡುಗೆಗಳು ಫಲ ನೀಡಿವೆ.
ಸಂಶೋಧನಾ ಡೀನ್ ಡಾ.ರಿಚರ್ಡ್ ಪಿಂಟೊ ಮಾರ್ಗದರ್ಶನದಲ್ಲಿ ವರ್ಧಿತ ಜಲಜನಕ ಇಂಧನ ಕೋಶಕ್ಕೆ ಈ ವರ್ಷದ ಜನವರಿಯಲ್ಲಿ ಪೇಟೆಂಟ್ ಲಭಿಸಿತ್ತು. ಇದೀಗ ಎರಡನೇ ಪೇಟೆಂಟ್ ಕೆಲವೇ ತಿಂಗಳ ಅಂತರದಲ್ಲಿ ಲಭಿಸಿರುವುದು ಎಐಇಟಿಯ ಸಂಶೋಧನಾ ಕ್ಷೇತ್ರದಲ್ಲಿನ ಸ್ಥಿರತೆ ಹಾಗೂ ನಿರಂತರತೆಗೆ ಕೈಗನ್ನಡಿಯಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ