ಬೆಂಗಳೂರು: ಮಾರ್ಚ್ 2ರಂದು ರಂಗಚಂದಿರ ವತಿಯಿಂದ "ಸಂಗ್ಯಾ ಬಾಳ್ಯಾ" ನಾಟಕ

Upayuktha
0





ಬೆಂಗಳೂರು: ರಂಗ ಚಂದಿರ ಟ್ರಸ್ಟ್ ವತಿಯಿಂದ ನವದೆಹಲಿಯ ಸಂಸ್ಕ್ರತಿ ಸಚಿವಾಲಯ ಸಹಕಾರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ವಿರಚಿತ "ಸಂಗ್ಯಾ ಬಾಳ್ಯಾ" ನಾಟಕ ಪ್ರದರ್ಶನವನ್ನು ಮಾ.2ರ ಶನಿವಾರ ಸಂಜೆ 5.30ಗಂಟೆಗೆ ಬೆಂಗಳೂರಿನ ಜೆ.ಸಿ.ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 



ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್.  ನಮ್ರತ ಉದ್ಘಾಟನೆ ನೆರವೇರಿಸಲಿದ್ದು, ರಂಗಭೂಮಿ ಹಿರಿಯ ಕಲಾವಿದ ಆರ್.ನರೇಂದ್ರಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ರಂಗಕರ್ಮಿಗಳಾದ ಡಾ.ಬಿ.ವಿ.ರಾಜರಾಂ, ಸಿ.ಬಸವಲಿಂಗಯ್ಯ, ಬಿ.ರುದ್ರೇಶ್, ಜಾನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು, ರಂಗಚಂದಿರ ಟ್ರಸ್ಟ್ ಅಧ್ಯಕ್ಷೆ ಡಾ.ಟಿ.ಪದ್ಮ, ಗೌರವಾಧ್ಯಕ್ಷ ಆರ್.ಕೆ.ಹೆಗಡೆ ಭಾಗವಹಿಸಲಿದ್ದಾರೆ. ರಂಗನಟ ರಾಜಸಂಪಾಜೆ ನಿರೂಪಣೆ ಮಾಡುವರು. 



ನಾಟಕದ ನಿರ್ದೇಶನ- ಮೂಲಜೋತಪ್ಪ, ಸಹ ನಿರ್ದೇಶನ -ಸಿಎಂಟಿ, ನಿರ್ವಹಣೆ- ಜಿಪಿಒ ಚಂದ್ರು  ಸಂಗ್ಯಾ ಬಾಳ್ಯಾ ಪಾತ್ರಧಾರಿಗಳು: ಸಂಗ್ಯಾ-ಶಶಿಕುಮಾರ್, ಬಾಳ್ಯಾ- ರಾಕೇಶ್, ಗೌಡ-ವೆಂಕಟರಮಣಪ್ಪ, ಈರುಪಾಕ್ಷಿ- ರಾಕೇಶ್ ಗೌಡ, ಬಸವಂತ- ಪುರುಷೋತ್ತಮ, ಮಾರವಾಡಿ- ರಮೇಶ, ಆಳು-ಮಹದೇವಪ್ಪ, ಆಳು-ಕಿರಣ್, ಸೂತ್ರಧಾರ-ರವಿ, ಅಂಚೆಯಣ್ಣ- ವಿನಯ್, ಗೌಡ್ತಿ- ಪ್ರತೀಕ್ಷ, ಪರಮ್ಮ- ಉಮಾ, ಮೇಳದಲ್ಲಿ ಎಸ್.ಟಿ. ಮಲ್ಲು, ಶೀಬಾ ಹಾಗೂ ಆರ್.ಕೆ.ಪ್ರವೀಣ್ ನಿರ್ವಹಿಸಲಿದ್ದಾರೆ ರಂಗಚಂದಿರ ಟ್ರಸ್ಟ್ ಕಾರ್ಯದರ್ಶಿ ಎ.ಎಸ್.ಚಂದ್ರಶೇಖರ್ ( ಜಿಪಿಒ ಚಂದ್ರು) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top