ಶೈಕ್ಷಣಿಕ ಕಲಿಕೆಗೆ ಎಸ್.ಡಿ.ಎಂ ಅತ್ಯಾಧುನಿಕ ಆಯಾಮ: ಡಿ.ಹರ್ಷೇಂದ್ರಕುಮಾರ್

Upayuktha
0

 ಎಸ್.ಡಿ.ಎಂ ವಾರ್ಷಿಕ ಸ್ನೇಹಕೂಟ



ಉಜಿರೆ: ಪ್ರಸಕ್ತ ವರ್ಷ ಅಧ್ಯಾಪಕರ ಬೋಧನೆ ಮತ್ತು ವಿದ್ಯಾರ್ಥಿಗಳ ಗ್ರಹಿಕೆ, ಸಂವಹನ ಸಾಮರ್ಥ್ಯ ವಿಸ್ತರಿಸುವಂಥ ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಿ ತರಗತಿಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವುದಕ್ಕೆ ಹೆಚ್ಚಿನ ಅದ್ಯತೆ ನೀಡಲಾಗಿದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರಕುಮಾರ್ ತಿಳಿಸಿದರು.


ಅವರು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಆವರಣದಲ್ಲಿ ಎಸ್.ಡಿ.ಎಂ ಅಧ್ಯಾಪಕರ ಸಂಘವು ಆಯೋಜಿಸಿದ್ದ ಬೋಧಕ, ಬೋಧಕೇತರ ಸಿಬ್ಬಂದಿಯ ವಾರ್ಷಿಕ ಸ್ನೇಹಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು, ಸ್ನಾತಕೋತ್ತರ ಕೇಂದ್ರ ಸೇರಿದಂತೆ ವಿವಿಧ ಕಲಿಕಾ ಕೇಂದ್ರಗಳಲ್ಲಿ ಸೆನ್ಸ್ ಬೋರ್ಡ್ಗಳನ್ನು ಅಳವಡಿಸಲಾಗಿದೆ. ತರಗತಿಯನ್ನು ತಾಂತ್ರಿಕವಾಗಿ ಪ್ರಭಾವೀಯಾಗಿಸುವ ಪ್ರಯೋಗಶೀಲ ಹೆಜ್ಜೆಗಳನ್ನು ನಿರಂತರವಾಗಿ ಅನುಸರಿಸುತ್ತಾ ಬಂದಿರುವ ಸಂಸ್ಥೆಯು ಇದೀಗ ಇಂರ‍್ಯಾಕ್ಟಿವ್ ಪೆನಲ್ ಡಿಸ್‌ಪ್ಲೇ ಬೋರ್ಡ್ ಅಳವಡಿಕೆಯ ಮೂಲಕ ಅಧ್ಯಾಪನ ಮತ್ತು ವಿದ್ಯಾರ್ಥಿಗಳ ಗ್ರಹಿಕೆಯ ಸಾಮರ್ಥ್ಯ ಹೆಚ್ಚಿಸುವ ಹೊಸದೊಂದು ಪ್ರಯೋಗಕ್ಕೆ ಅಣಿಯಾಗಿದೆ ಎಂದು ತಿಳಿಸಿದರು.


ಪ್ರತಿವರ್ಷವೂ ಶೈಕ್ಷಣಿಕ ಸಾಧನೆಯೊಂದಿಗೆ ತಮ್ಮ ವೃತ್ತಿಪರತೆಯನ್ನು ನಿರೂಪಿಸುವ ಬೋಧಕರು, ತರಗತಿಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಈ ಬಗೆಯ ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳು ಪ್ರೇರಣಾದಾಯಕವಾಗುತ್ತವೆ. ಅಷ್ಟೇ ಅಲ್ಲ, ವಿವಿಧ ಬಗೆಯ ಪ್ರತಿಭಾ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳ ಕಲೆಯ ಅನಾವರಣಕ್ಕೂ ಬೇಕಾದ ವಿಶಾಲ ವೇದಿಕೆ ಒದಗಿಸಿಕೊಡುವ ಬೃಹತ್ ಸಭಾಂಗಣವನ್ನು ನವೀಕರಿಸಿ ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.


ತೊಂಭತ್ತರ ದಶಕದಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯಾರಂಭಿಸಿದ್ದ ಡಾ.ಬಿ.ಯಶೋವರ್ಮ ಅವರಿಂದ ಇಲ್ಲಿಯ ಬೋಧನೆಗೆ ಆಧುನಿಕ ಸ್ಪರ್ಶ ಸಿಕ್ಕಿತ್ತು. ತದನಂತರದ ದಿನಗಳಲ್ಲಿ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಪ್ರತಿವರ್ಷವೂ ತಾಂತ್ರಿಕವಾಗಿ ಬೋಧನೆ ಮತ್ತು ಕಲಿಕೆಯ ಗುಣಮಟ್ಟವನ್ನು ಎತ್ತರಿಸುವ ಪ್ರಯೋಗಗಳು ನಡೆಯುತ್ತಲೇ ಬಂದವು. ಇದೀಗ ಇಂರ‍್ಯಾಕ್ಟಿವ್ ಪೆನಲ್ ಡಿಸ್‌ಪ್ಲೇ ಬೋರ್ಡ್ ಅಳವಡಿಕೆಯು ಹೊಸ ಸೇರ್ಪಡೆ ಎಂದು ತಿಳಿಸಿದರು. 


ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿ ವಿವಿಧ ವಿಭಾಗಗಳು ಕಳೆದ ಎರಡು ತಿಂಗಳ ಅವಧಿಯಲ್ಲಿ ಸಮಕಾಲೀನ ಮಹತ್ವದ ವಿಷಯಗಳ ಕುರಿತು ರಾಷ್ಟಿçÃಯ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.



ಸುಪ್ರಿಯಾ ಹರ್ಷೇಂದ್ರಕುಮಾರ್, ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್‌ಕುಮಾರ್, ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ.ಗಣೇಶ್ ನಾಯಕ್ ಉಪಸ್ಥಿತರಿದ್ದರು. ಶೈಕ್ಷಣಿಕ ಸಾಧನೆಗೈದ ಅಧ್ಯಾಪಕರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಿAದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top