ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ವತಿಯಿಂದ ಪೊರಕೆ ಹಿಡಿದು ರಸ್ತೆ ಸ್ವಚ್ಛ ಮಾಡುವುದರ ಜೊತೆಜೊತೆಗೆ, ಜಾಗೃತಿ ಕರಪತ್ರಗಳ ಮೂಲಕ ಶುಚಿತ್ವದ ಅರಿವು, ಸ್ವಚ್ಛತೆಯ ಕುರಿತು ಸಾರ್ವಜನಿಕರ ಜವಾಬ್ದಾರಿ ಹಾಗೂ ಕರ್ತವ್ಯ, ಮನೆಯ ಹಂತದಲ್ಲಿ ತ್ಯಾಜ್ಯ ವಿಂಗಡಣೆ, 'ನಮ್ಮ ತ್ಯಾಜ್ಯ ನಮ್ಮ ಹೊಣೆ' ಎಂಬ ಪರಿಕಲ್ಪನೆಯಲ್ಲಿ 'ಸ್ವಚ್ಚತಾ ಜನಸಂಪರ್ಕ ಅಭಿಯಾನ' ಕಾರ್ಯಕ್ರಮವನ್ನು ಮಾರ್ಚ್ 21 ರಿಂದ 27 ರ ವರೆಗೆ ಹಮ್ಮಿಕೊಳ್ಳಲಾಗಿದೆ.
5000ಕ್ಕೂ ಹೆಚ್ಚಿನ ನಾಗರಿಕರನ್ನು ಭೇಟಿಮಾಡಿ, ಜಾಗೃತಿ ಮೂಡಿಸುವ ಮಹತ್ವದ ಗುರಿಯನ್ನು ಹೊಂದಲಾಗಿದೆ.
ಈ ಅಭಿಯಾನದ ಉದ್ಘಾಟನೆ ಗುರುವಾರ (ಮಾ.21) ಬೆಳಗ್ಗೆ 9.00 ಗಂಟೆಗೆ, ಮಂಗಳೂರಿನ ಎಸ್‌ಡಿಎಂ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರ ದಿವ್ಯ ಉಪಸ್ಥಿತಿ ಇರಲಿದ್ದು, ಮುಖ್ಯ ಅತಿಥಿಯಾಗಿ ಓಶಿಯನ್ ಪರ್ಲ್ ಗ್ರೂಪ್‌ನ ಹಿರಿಯ ಉಪಾಧ್ಯಕ್ಷ ಬಿ.ಎನ್ ಗಿರೀಶ್ ಮುಖ್ಯ ಅತಿಥಿಯಾಗಿರುತ್ತಾರೆ. ಮಾಜಿ ಸೇನಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದು, ಎಂಆರ್ ಪಿಎಲ್ ಓಎನ್‌ಜಿಸಿ ಮಂಗಳೂರು ಇದರ ಸಿಎಸ್‌ಆರ್ ಸದಸ್ಯ ಸ್ಟೀವನ್ ಪಿಂಟೋ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನ ನಿರ್ದೇಶಕಿ ಡಾ. ಸೀಮಾ ಎಸ್. ಶೆಣೈ ಗೌರವ ಅತಿಥಿಗಳಾಗಿ ಭಾಗವಹಿಸುತ್ತಾರೆ.
ಸ್ವಯಂಸೇವಕರೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಪ್ರಕಟಣೆ ಕೋರಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ