ಉಜಿರೆ: ಕ್ವಾಂಟಮ್ ಭೌತಶಾಸ್ತ್ರ ಎನ್ನುವುದು ಗಣಿತದ ಒಂದು ಭಾಗವಾಗಿದೆ. ಮತ್ತು ಇದು ಮಾನವನ ಆಲೋಚನ ಮಿತಿಗಳನ್ನು ಮೀರಿದೆ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮತ್ತು ಭೌತಶಾಸ್ತ್ರ ಉಪನ್ಯಾಸಕ ಪ್ರೊ. ಟಿ. ಎನ್. ಕೇಶವ್ ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಮಾ.20 ರಂದು ನಡೆದ ‘ಕ್ವಾಂಟಮ್ ಭೌತಶಾಸ್ತ್ರ’ ವಿಷಯದ ಕುರಿತಾದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಪಂಚವನ್ನು ಅರಿತುಕೊಳ್ಳಲು ಮಿತಿಯೆಂಬುದು ಮುಖ್ಯ. ಪ್ರಪಂಚದಲ್ಲಿ ಪ್ರತಿಯೊಬ್ಬ ಜೀವಿಯೂ ತನ್ನದೇ ಆದ ಮಿತಿಯನ್ನು ಹೊಂದಿರುತ್ತಾನೆ. ಆದರೆ ಆ ಮಿತಿಗಳು ಸ್ಥಗಿತವಾದಾಗ ಮಾತ್ರ ಕ್ವಾಂಟಮ್ ಜಗತ್ತನ್ನು ಸೃಷ್ಟಿಸಲು ಸಾಧ್ಯ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶಲೀಫ್ ಎ.ಪಿ., ಉಪನ್ಯಾಸಕರಾದ ನಟರಾಜ್ ಹೆಚ್ ಕೆ, ಭಾಗ್ಯಶ್ರೀ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಪ್ರತೀಕ್ಷಾ ಸ್ವಾಗತಿಸಿ, ಸಪ್ನಾ ವಂದಿಸಿದರು. ಮುಕ್ತಿಶ್ರೀ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ