ಮಂಗಳೂರು: ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ರ‍್ಯಾಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಜನರನ್ನುದ್ದೇಶಿಸಿ ಮಾತನಾಡಿದರು. ಅಪಾರ ಸಂಖ್ಯೆಯಲ್ಲಿ ನೆರೆದಿರುವ ಈ ಜನರ ಉತ್ಸಾಹಭರಿತ ದೃಶ್ಯ ನೋಡುತ್ತಿದ್ದರೆ, ಇಡೀ ಮೈದಾನದಲ್ಲಿ ಶಕ್ತಿ ಸಿಂಚನಗೊಂಡು ಹರಿದಾಡುತ್ತಿದೆಯೇನೋ ಅನಿಸುತ್ತಿದೆ. ಈ ಜನೋತ್ಸಾಹವು ಮತ್ತೊಂದು ಕಡೆಗೆ ಒಗ್ಗೂಡಿರುವ ಭ್ರಷ್ಟಾಚಾರ ಮತ್ತು ಜಾತಿ ತುಷ್ಟೀಕರಣದಲ್ಲಿ ಮುಳುಗಿರುವ ಇಂಡಿ ಅಲಯನ್ಸ್ ನ ನೆಮ್ಮದಿ, ನಿದ್ದೆ ಹಾರಿಹೋಗಿದೆʼ ಎಂದರು.
ಮುಂದುವರೆದು ಮಾತನಾಡುತ್ತ ಶಿವಮೊಗ್ಗದ ಜನರನ್ನು ಪ್ರಶಂಸಿಸಿ, ಒಂದು ಕಾಲದಲ್ಲಿ ನಾವು ಮತ್ತು ನಮ್ಮ ಪಕ್ಷವು ಅಷ್ಟೇನೂ ಸಾಧಿಸದ ಸಮಯದಲ್ಲಿ ನಮ್ಮ-ನಿಮ್ಮೆಲ್ಲರ ನಾಯಕ ಯಡಿಯೂರಪ್ಪನವರು ತಮ್ಮ ಇಡೀ ಜೀವನವನ್ನೇ ಪಕ್ಷ ಸಂಘಟನೆಯಲ್ಲಿ ಕಳೆದಿದ್ದಾರೆ. ಇದು, ಇವರ ತಪೋಭೂಮಿ ಕೂಡ ಆಗಿದೆ ಎಂದರು.
“ಈ ಒಂದು ಕ್ಷೇತ್ರದ ಅಭ್ಯರ್ಥಿ ಸೇರಿದಂತೆ ಸಮಸ್ತ ಕರ್ನಾಟಕದ ಅಭ್ಯರ್ಥಿಗಳನ್ನು ʼಮೋದಿ ಅಭಿವೃದ್ಧಿಯ ರಾಯಭಾರಿಗಳನ್ನು ಚುನಾಯಿಸಿ ದಿಲ್ಲಿಗೆ ಕಳುಹಿಸುವ ಜವಾಬ್ದಾರಿ ನಿಮ್ಮೆಲ್ಲರದು. ಎಲ್ಲ 28 ಕ್ಷೇತ್ರಗಳನ್ನು ಬಿಜೆಪಿ ಬೆಂಬಲಿತ ಎನ್.ಡಿ.ಎ. ಒಕ್ಕೂಟಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮತನೀಡಿ ಗೆಲ್ಲಿಸುವಂತೆ ತಮ್ಮಲ್ಲಿ ಪ್ರಾರ್ಥಿಸಲು ಇಂದು ಇಲ್ಲಿಗೆ ಬಂದಿದ್ದೇನೆ ಎಂದರು.
ಏಪ್ರಿಲ್ 26 ಮತ್ತು ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಭಾಗಿದಾರಿಕೆಯಿಂದ ದೇಶದ ನವಯುವಕರಿಗೆ ಹೊಸ ದಿಕ್ಸೂಚಿ ದೊರಕಲಿದೆ. ಇದೇ ಏಪ್ರಿಲ್ 26 ರಂದು ನಡೆಯಲಿರುವ ದಕ್ಷಿಣ ಕನ್ನಡ ಕ್ಷೇತ್ರದ ನಮ್ಮ ಅಭ್ಯರ್ಥಿಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ತಮ್ಮ ಅಮೂಲ್ಯವಾದ ಮತನೀಡಿ ಭಾರೀ ಅಂತರದಿಂದ ಗೆಲ್ಲಿಸಲು ಮನವಿ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ