ವಿವೇಕಾನಂದ ಕಾಲೇಜಿನ ನವೀಕೃತ ಜಾಲತಾಣ ಲೋಕಾರ್ಪಣೆ

Upayuktha
0

 


ಪುತ್ತೂರು: ಆಧುನಿಕ ಯುಗದಲ್ಲಿ ಸಂಸ್ಥೆಯ ಬೆಳವಣಿಗೆಗೆ ವೆಬ್‌ಸೈಟ್ ತುಂಬಾ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಬಹಳ ವೇಗವಾಗಿ ಬದಲಾಗುವ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಪರೀಕ್ಷೆಯ ವೇಳಾಪಟ್ಟಿಗಳು, ಶೈಕ್ಷಣಿಕ ನೆರವು, ಕೋರ್ಸ್ ವಿವರಣೆಗಳು ಮತ್ತು ಇತರ ಪ್ರಮುಖ ಪ್ರಕಟಣೆಗಳ ವಿವರಗಳನ್ನು ನೀಡಬಹುದು. ಈ ಮೂಲಕ ಕಾಲೇಜಿನ ಎಲ್ಲಾ ಮಾಹಿತಿ ಅಂಗೈ ಅಂಗಳದಲ್ಲೆ ದೊರಕುವುದು ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ  ಡಾ ಶ್ರೀಪತಿ ಕಲ್ಲೂರಾಯ ಹೇಳಿದರು. 


ಇವರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ನವೀಕೃತ ಜಾಲತಾಣದ ಲೋಕಾರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 


ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ ಎನ್ ಮಾತನಾಡಿ, ನವ ಮಾಧ್ಯಮದ ಯುಗದಲ್ಲಿ ನಾವಿದ್ದೇವೆ, ಪ್ರತಿಯೊಬ್ಬರೂ ಒಂದು ಸಂಸ್ಥೆಯ ಬಗ್ಗೆ ತಿಳಿಯಬೇಕಾದರೆ ವೆಬ್‌ಸೈಟ್ ಅಥವಾ ಸಮಾಜಿಕ ಜಾಲತಾಣವನ್ನು ಪರೀಕ್ಷಿಸಿಯೇ ಮುದುವರೆಯುವುದು. ಈ ನಿಟ್ಟಿನಲ್ಲಿ ಕಾಲೇಜು, ಪಠ್ಯ ಕ್ರಮ ಹಾಗು ಕಾಲೇಜಿನ ಸೌಲಭ್ಯಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಪಸರಿಸುವುದಕ್ಕೆ ಕಾಲೇಜು ವೆಬ್‌ಸೈಟ್ ತುಂಬಾ ಅವಶ್ಯಕ ಎಂದರು. 


ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣು ಗಣಪತಿ ಭಟ್ ಸ್ವಾಗತಿಸಿ, ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಶ್ರೀಧರ್ ನಾಯ್ಕ್ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ್ ಎಂ ಕಾರ್ಯಕ್ರಮ ನಿರೂಪಿಸಿದರು.


ಕಾಲೇಜಿನ ತೃತೀಯ ಬಿ.ಸಿ.ಎ. ವಿಭಾಗದ ವಿದ್ಯಾರ್ಥಿನಿ ಹಾಗೂ ಸರ್ವಜ್ಞ ಇಂಫೋಟೆಕ್‌ನ ಸಾಫ್ಟ್ವೆರ್ ಡೆವಲಪರ್ ಭಕ್ತಿಶ್ರೀ ಶರ್ಮ ನವೀಕೃತ ಜಾಲತಾಣವನ್ನು ಲೋಕಾರ್ಪಣೆಗೊಳಿಸಿದರು. 

ಕಾಲೇಜಿನ ಜಾಲತಾಣ ವಿನ್ಯಾಸಕಾರ ಅಶೋಕ್ ಕಲ್ಚರ್ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top