ಮಂಗಳೂರು : ಕೆನರಾ ಕಾಲೇಜಿನಲ್ಲಿ 'ಸಿಂಪೋಸಿಯ' ಮತ್ತು 'ಸೈಂಟಿಕ' ರಾಷ್ಟ್ರಮಟ್ಟದ ಎರಡು ದಿನಗಳ ಅಂತರ ಕಾಲೇಜು ಸ್ಪರ್ಧಾವಳಿ ಉದ್ಘಾಟನೆಗೊಂಡಿತು.
ಐ ಸಿ ಎ ಐ ಇದರ ಎಸ್ ಐ ಆರ್ ಸಿ ಮಂಗಳೂರು ವಿಭಾಗದ ಅಧ್ಯಕ್ಷರಾದ ಸಿಎ ಗೌತಮ್ ಪೈ ಡಿ ಮುಖ್ಯ ಅತಿಥಿಯಾಗಿ ಆಗಮಿಸಿ, ಇಂದು ಹೊರಜಗತ್ತಿನಲ್ಲಿ ಬಹಳಷ್ಟು ಸ್ಪರ್ಧೆಗಳಿವೆ ಅದಕ್ಕಾಗಿ ಸಮವಯಸ್ಕರೊಡನೆ ಸ್ಪರ್ಧೆ ಅಲ್ಲ, ನಮ್ಮ ಒಳಗೆ ಇರಬೇಕು ಎಂದರು. ಒಳ್ಳೆಯ ಅಂಕಗಳು ಮತ್ತು ಸಹಪಠ್ಯ ಚಟುವಟಿಕೆಗಳು ಮಾತ್ರ ಇದ್ದರೆ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯ ವಾಗದು. ನಿನ್ನೆಗಿಂತ ಹೇಗೆ ಚೆನ್ನಾಗಿ ಮಾಡಬಲ್ಲೆ ಎಂಬ ಆಂತರಿಕ ಪ್ರಜ್ಞೆ ಜಾಗೃತಗೊಳ್ಳಬೇಕು ಎಂದು ನುಡಿದರು.
ಕೆನರಾ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಸುರೇಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದು ಯುವ ನಾಯಕರು ಇಂತಹ ಸ್ಪರ್ಧೆಯ ವೇದಿಕೆಯಲ್ಲಿ ಸಿದ್ಧಗೊಳ್ಳುತ್ತಾರೆ. ಅದಕ್ಕಾಗಿ ದೊರೆತ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.
ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಕಾಮತ್ ಔಪಚಾರಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲೆ ಡಾ.ಪ್ರೇಮಲತಾ ವಿ ಅವರು 'ಕ್ಯಾನ್ ಫೆಸ್ಟ್ 'ಎಂಬುದು ಕಲಿಕೆಯ ಮನೋಭಾವವನ್ನು ವೈಯಕ್ತಿಕ ಬೆಳವಣಿಗೆಯನ್ನು ಹೆಚ್ಚಿಸುವಂಥದ್ದು. ಈ ಅವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ಹಿತ ನುಡಿದರು.
ಕಾರ್ಯಕ್ರಮ ಸಂಯೋಜಕಿ ಡಾ. ಕಲ್ಪನಾ ಪ್ರಭು ಪ್ರಸ್ತಾವಿಸಿದರು. ಡಾ.ಆಶಾಕಿರಣ ಪಕ್ಕಳ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜು ಆಡಳಿತ ಅಧಿಕಾರಿ ಡಾ.ದೀಪ್ತಿ ನಾಯಕ್ , ಸಂಚಾಲಕರಾದ ಶ್ರೀ ಸಿಎ ಎಂ ಜಗನ್ನಾಥ ಕಾಮತ್, ವ್ಯವಸ್ಥಾಪಕ ಸಿ ಕೆ ಶಿವಾನಂದ ಶೆಣೈ, ಎಲ್ಲ ಸಹ ಸಂಯೋಜಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೃಪ್ತಿ ವ್ಯಾಸ್ ಸ್ವಾಗತಿಸಿ, ಸ್ವಾತಿ ನಾಯಕ್ ವಂದಿಸಿದರು. ಋಷಭ್ ಕಾಮತ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ