ಮುಳಿಯ ಜ್ಯುವೆಲ್ಸ್‌ನಲ್ಲಿ ನನ್ನ ಪ್ರಥಮ ವಜ್ರಾಭರಣ- ಡೈಮಂಡ್‌ ಫೆಸ್ಟ್‌ಗೆ ಚಾಲನೆ

Upayuktha
0

ಎಲ್ಲರ ಮನೆಯಲ್ಲೂ ವಜ್ರಾಭರಣದ ಪರಿಕಲ್ಪನೆ


  • ವಿಶೇಷ ಕಾರ್ಡ್ ಯೋಜನೆಯ ಮೂಲಕ ಮನೆ ಮನೆಯಲ್ಲೂ ವಜ್ರ
  • ಎರಡು ತಿಂಗಳೊಳಗೆ ವಜ್ರವನ್ನು ಚಿನ್ನಕ್ಕೆ ಬದಲಾವಣೆ ಮಾಡಲು ಅವಕಾಶ
  • ಶೇ 90ರ ಕ್ಯಾಶ್‌ಬ್ಯಾಕ್‌, ಶೇ 95ರ ಎಕ್ಸ್‌ಚೇಂಜ್‌ ಆಫರ್‍‌



ಪುತ್ತೂರು: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನ್ನು ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ ಈ ವರ್ಷದ ಡೈಮಂಡ್‌ ಫೆಸ್ಟ್‌ಗೆ ಇಂದು (ಮಾ.20) ಚಾಲನೆ ನೀಡಲಾಯಿತು. ಎಲ್ಲರ ಮನೆಯಲ್ಲೂ ವಜ್ರಾಭರಣದ ಪರಿಕಲ್ಪನೆಯೊಂದಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ನನ್ನ ಪ್ರಥಮ ವಜ್ರಾಭರಣ- ಎಂಬ ವಿಶೇಷ ಅಭಿಯಾನ ಆಯೋಜಿಸಿದೆ.


ದ್ವಾರಕ ಕನ್‌ಸ್ಟ್ರಕ್ಷನ್‌ ಮಾಲೀಕ ಗೋಪಾಲಕೃಷ್ಣ ಭಟ್‌ ಅವರು ಡೈಮಂಡ್ ಫೆಸ್ಟ್‌ಗೆ ಚಾಲನೆ ನೀಡಿ ಮಾತನಾಡಿದರು. ಹಲವು ದಶಕಗಳಿಂದ ಪುತ್ತೂರಿನಲ್ಲಿ ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿರುವ ಮುಳಿಯ ಜ್ಯುವೆಲ್ಸ್‌ ಇಂದು ಎಲ್ಲರ ಮನೆಮಾತಾಗಿದೆ. ಸಂಸ್ಥೆಯ ಉದ್ಯಮ ಯಶಸ್ಸು ಮುಂದೆಯೂ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸಿದರು.


ವಜ್ರದಲ್ಲಿ ಹೂಡಿಕೆ ಲಾಭದಾಯಕ:

ಮುಳಿಯ ಜ್ಯುವೆಲ್ಸ್‌ನ ಮುಖ್ಯ ಆಡಳಿತಾಧಿಕಾರಿ ಕೇಶವ ಪ್ರಸಾದ್ ಮುಳಿಯ ಅವರು ಪ್ರಾಸ್ತಾವಿಕ ಮಾತನಾಡಿ, ವಜ್ರ ಕೈಗೆಟುಕದು ಎಂಬ ಭಾವನೆ ಗ್ರಾಹಕರಲ್ಲಿದೆ. ಆದರೆ ಪ್ರಸ್ತುತ ಕಾಲದಲ್ಲಿ ಬೆಲೆಬಾಳುವ ಆಂಡ್ರಾಯ್ಡ್‌ ಮೊಬೈಲ್ ಖರೀದಿಸುವ ಸಂದರ್ಭದಲ್ಲಿ ದರ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ವಜ್ರವನ್ನು ಇವತ್ತು ಕೊಂಡರೆ ನಾಳೆ ಅದರ ಮೌಲ್ಯ ಮತ್ತಷ್ಟು ಜಾಸ್ತಿಯಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ವಜ್ರದಲ್ಲಿ ಹೂಡಿಕೆ ಮಾಡುವುದು ಈಗ ಲಾಭದಾಯಕ ಎಂದು ತಿಳಿಸಿದರು.


ಈ ನಿಟ್ಟಿನಲ್ಲಿ ನನ್ನ ಪ್ರಥಮ ವಜ್ರಾಭರಣ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದೇವೆ. ಗ್ರಾಃಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಶಾಖಾ ಮ್ಯಾನೇಜರ್ ರಾಘವೇಂದ್ರ ಪಾಟೀಲ್‌, ಮಾರುಕಟ್ಟೆ ಮ್ಯಾನೇಜರ್ ಸಂಜೀವ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top