ಗ್ರಾಮಣಿ ಕರ್ತವ್ಯದರ್ಶಿ ಕಾರ್ಯಕ್ರಮ ಸಂಪನ್ನ

Upayuktha
0


ಬದಿಯಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀಸಂಸ್ಥಾನ ಗೋಕರ್ಣ ಇವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯಾ ಮಂಡಲದ ನೇತೃತ್ವದಲ್ಲಿ ಗ್ರಾಮಣಿ ಕರ್ತವ್ಯದರ್ಶಿ ಕಾರ್ಯಕ್ರಮ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಸಂಪನ್ನವಾಯಿತು.


ಈಶ್ವರಿ ಬೇರ್ಕಡವು ದೀಪ ಜ್ವಲನೆ ಮಾಡಿದರು. ಮಂಡಲ ಗುರಿಕ್ಕಾರರಾದ ಮೊಗ್ರ ಸತ್ಯನಾರಾಯಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮಂಗಳೂರು ಪ್ರಾಂತ್ಯ ಉಪಾಧ್ಯಕ್ಷರು ಬಾಲ ಸುಬ್ರಹ್ಮಣ್ಯ ಭಟ್ ಸರ್ಪಮಲೆ ಅಧ್ಯಕ್ಷತೆ ವಹಿಸಿದರು. ವಿದ್ಯಾಪೀಠದ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಮುಳ್ಳೇರಿಯ ಮಂಡಲ ಅಧ್ಯಕ್ಷರಾದ ಕೃಷ್ಣಮೂರ್ತಿ ಮಾಡಾವು, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಶಾಲಾ ಪ್ರಬಂಧಕರಾದ ಜಯಪ್ರಕಾಶ ಪಜಿಲ ಶುಭಾಶಂಸನೆಯಿತ್ತರು.


ಹವ್ಯಕ ಮಹಾ ಮಂಡಲ ಯುವ ವಿಭಾಗ ಪ್ರಧಾನ ಕೇಶವ ಪ್ರಕಾಶ್ ಎಂ. ಹಾಗೂ ಶ್ರೀ ರಾಮಚಂದ್ರಾಪುರ ಮಠ ತರಬೇತಿ ವಿಭಾಗ ಪ್ರೇರಣಾ ತಂಡದ  ಶ್ರೀಪ್ರಕಾಶ್ ಕುಕ್ಕಿಲ ಹಾಗೂ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಶ್ಯಾಮ ಪ್ರಸಾದ್ ಕುಳಮರ್ವ ಕಾರ್ಯಕ್ರಮ ನಿರೂಪಣೆ ಮಾಡಿದರು.


ಸಮಾರೋಪದಲ್ಲಿ ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯ ಶಂಕರ್ ಭಟ್ ಮಿತ್ತೂರು ಸಂಘಟನಾತ್ಮಕ ವಿಷಯಗಳನ್ನು ಪ್ರಾಸ್ತಾವಿಸಿದರು. ಡಾ ವೈ.ವಿ ಕೃಷ್ಣಮೂರ್ತಿ ಸಾಂದರ್ಭಿಕವೂ ಮಾತುಗಳನ್ನಾಡಿದರು.


ಉಂಡೆಮನೆ ವಿಶ್ವೇಶ್ವರ ಭಟ್ ವಿವಿವಿ ಬಗ್ಗೆ,  ವೇಣುಗೋಪಾಲ ಕೆದ್ಲ ಮಠದ ವಿವಿಧ ಯೋಜನೆ ಬಗ್ಗೆ, ಶ್ರೀಮಠದ ತಂತ್ರಾಂಶ ಲಕ್ಷ್ಮೀಲಕ್ಷಣ ದ ಬಗ್ಗೆ ತಂಡದ ಪರವಾಗಿ ಕೇಶವ ಪ್ರಕಾಶ ಮಾಹಿತಿ ನೀಡಿದರು.


ಒತ್ತಡ ನಿವಾರಣೆ, ಟೀಮ್ ವರ್ಕ್, ಸಮಯ ಹೊಂದಾಣಿಕೆ ಇತರ ವಿಚಾರಗಳ ಬಗ್ಗೆ ಪ್ರೇರಣಾ ತಂಡದವರಿಂದ ಕಾರ್ಯಾಗಾರ ನಡೆಯಿತು. 68 ಮಂದಿ ಗುರಿಕಾರರು ಭಾಗವಹಿಸಿದ ಈ ಕಾರ್ಯಾಗಾರದಲ್ಲಿ ಮಂಡಲ, ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಳ್ಳೆರಿಯ ಮಂಡಲ ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಸೇಡಿಗುಮ್ಮೆ ಧನ್ಯವಾದವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top