ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಕೆನರಾ ಕಾಲೇಜು ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವಿಶ್ವವಿದ್ಯಾಲಯ ಮಟ್ಟದ ಮಂಗಳೂರು ವಲಯ ಅಂತರ್ ಕಾಲೇಜು ಪುರುಷರ ಕ್ರಿಕೆಟ್ 'ದಯಾನಂದ ಕಾಮತ್ ಮೆಮೋರಿಯಲ್ ಟ್ರೋಫಿ' ಪಂದ್ಯಾಟವನ್ನು ಕೆನರಾ ಆಡಳಿತ ಮಂಡಳಿಯ ಸದಸ್ಯೆ ಹಾಗೂ ಕೆನರಾ ಸ್ಪೋರ್ಟ್ಸ್ ಅಕಾಡೆಮಿಯ ಸಂಯೋಜಕಿ ಶ್ರೀಮತಿ ಅಶ್ವಿನಿ ಕಾಮತ್ ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾಟದ ಪರಿವೀಕ್ಷಕರಾದ ಸಂದೀಪ್ ಸಾಲ್ಯಾನ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅವಿನಾಶ್ ಹಾಗೂ ಕಾರ್ತಿಕ್ ಉಪಸ್ಥಿತರಿದ್ದರು. 12 ದಿನಗಳ ಕಾಲ ನೆಹರು ಮೈದಾನದಲ್ಲಿ ನಡೆಯುವ ಈ ಪಂದ್ಯಾಟದಲ್ಲಿ 24 ತಂಡಗಳು ಭಾಗವಹಿಸಲಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ