ಮಂಗಳೂರು: ಮಂಗಳೂರಿನ ಡಾ.ಸಿರಿ ಪಾರ್ವತಿ ಬೀಡುಬೈಲು ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ 2023ರಲ್ಲಿ ನಡೆಸಿದ ಎಂಡಿಎಸ್ (ಕನ್ಸರ್ವೇಟಿವ್ ಡೆಂಟಿಸ್ಟ್ರಿ ಆಂಡ್ ಎಂಡೋಡಾಂಟಿಕ್ಸ್) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕಿನೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಇತ್ತಚೆಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯ 26ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಅವರು ಪದಕ ಸ್ವೀಕರಿಸಿದರು.
ಹಾಸನದ ಶ್ರೀ ಹಾಸನಾಂಬ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಇವರು ಶೇ. 81.29 ಶೇಕಡ ಅಂಕಗಳೊಂದಿಗೆ ರ್ಯಾಂಕ್ ಗಳಿಸಿದ್ದಾರೆ. ಅವರು ಈ ಹಿಂದೆ ಪದವಿಯಲ್ಲಿ ಬಿಡಿಎಸ್ ವ್ಯಾಸಂಗದಲ್ಲಿ ಮಂಗಳೂರಿನ ಎ.ಜೆ.ಡೆಂಟಲ್ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಉತ್ತಮ ವಿದ್ಯಾರ್ಥಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಇವರು ನಿವೃತ್ತ ಉಪನ್ಯಾಸಕ ಪ್ರೊ.ಬೀಡುಬೈಲು ಗಣಪತಿ ಭಟ್ ಮತ್ತು ತ್ರಿವೇಣಿ ದಂಪತಿಯ ಪುತ್ರಿ. ಡಾ. ಅಶ್ವಿನ್ ಪರಕ್ಕಜೆ ಅವರ ಪತ್ನಿ. ಪ್ರಸ್ತುತ ಬೆಂಗಳೂರಿನ ದಯಾನಂದ ಸಾಗರ ದಂತ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ಉಪನ್ಯಾಸಕಿಯಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ