ಸಮೃದ್ಧಿಯ ನಾಡು, ನೆಮ್ಮದಿಯ ಬೀಡು, ನವ ಕಾಶ್ಮೀರವ ನೇೂಡ ಬನ್ನಿ

Upayuktha
0



ಭಾರತದ ಮಣಿ ಮುಕುಟವೆಂದೇ ಖ್ಯಾತಿ ಪಡೆದ ನಿಸಗ೯ದ ಸ್ವಗ೯ವೆಂದೇ ವಿಶ್ವ ವಿಖ್ಯಾತಿಯಾದ ಭಾರತದ ಭೂ ಶಿಖರವೆಂದೇ ಕರೆಯಿಸಿಕೊಳ್ಳುವ ಹೆಮ್ಮೆಯ  ಸಮೃದ್ಧಿಯನಾಡು ಕಾಶ್ಮೀರ. ಇಂತಹ ಕಾಶ್ಮೀರದ ಕುರಿತಾಗಿ ಪಾಠ ಮಾಡಿದ್ದೇವೆ ಪಾಠ ಓದಿದ್ದೇವೆ. ಆದರೆ ಈ ಸೌಂದರ್ಯತೆಯನ್ನು ಪ್ರತ್ಯಕ್ಷ ವಾಗಿ ನೇೂಡಿ ಕಣ್ಣು ತುಂಬಿಸಿ ಕೊಳ್ಳ ಬೇಕಾದರೆ ಇಷ್ಟು ವರುಷಗಳ ಕಾಲ ಕಾಯ ಬೇಕಾಯಿತು.ಎಲ್ಲದಕ್ಕೂ ಕಾಲಕೂಡಿ ಬರ ಬೇಕೆನ್ನುವ ಮಾತು ನೆನಪಾಯಿತು..ಅದಕ್ಕೂ ಒಂದು ಕಾಲ ಕೂಡಿ ಬಂತು ನೇೂಡಿ.



ಕಾಶ್ಮೀರಕ್ಕೆ ಹೇೂಗುವುದೆಂದರೆ ಹತ್ತು ಹಲವು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುವುದು ಸಹಜವೇ? ಮನದಲ್ಲಿ  ಮೂಡುವ ಮೆಾದಲ ಪ್ರಶ್ನೆ ಅಂದರೆ ಜೀವ ರಕ್ಷಣೆಯ ಭಯದ ಸ್ಥಿತಿ.ಭಯೇೂತ್ಪಾಕರು   ಬಂದು ಬಿಟ್ಟರೆ?  ಬಾಂಬು ಸಿಡಿಸಿ ಬಿಟ್ಟರೆ?  ಪ್ರಾಣ ಹೇೂಗಿ ಬಿಟ್ಟರೆ? ಹಾಗಾಗಿ ಹೆಚ್ಚಿನವರಿಗೆ ಕಾಶ್ಮೀರವೆಂದರೆ ಇಂತಹ ಹತ್ತು ಹಲವು ಭಯದ ಪ್ರಶ್ನೆಗಳು ಮನಸ್ಸಿನಲ್ಲಿ  ಹುಟ್ಟುವುದು ಸಹಜ.



ಆದರೆ ಈಗ  ಕಾಶ್ಮೀರದಲ್ಲಿ ಪರಿಸ್ಥಿತಿ  ಸಂಪೂರ್ಣವಾಗಿ ಬದಲಾಗಿದೆ,  ಜನರು ಸ್ವಚ್ಛಂದವಾಗಿ ಯಾವುದೇ ಭಯ ಬೀತಿ ಇಲ್ಲದೆ ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ತಮ್ಮ ಬದುಕನ್ನು ಕಟ್ಟಿ ಕೊಳ್ಳುವ ಭರವಸೆಯಲ್ಲಿ ನಿಂತಿದ್ದಾರೆ. ತಮ್ಮ  ನಾಡಿಗೆ ಬಂದ ಪ್ರವಾಸಿಗರನ್ನು ಪ್ರೀತಿ ವಿಶ್ವಾಸದಿಂದ ಬರ ಮಾಡಿಕೊಳ್ಳುವ ಮನ ಸ್ಥಿತಿಯ ಬದಲಾವಣೆಯನ್ನು ಕಾಶ್ಮೀರದ ಜನರಲ್ಲಿ  ನಾವು ಪ್ರತ್ಯಕ್ಷವಾಗಿ ಕಂಡಿದ್ದೇವೆ.ಪ್ರಕೃತಿಯ ಪ್ರಶಾಂತವಾದ ಹಿಮದ ನೆಲದಲ್ಲಿ ಆರಾಮವಾಗಿ ಹೊಸ ಬದುಕನ್ನು ಕಟ್ಟಿ ಕೊಳ್ಳುವ ಸಂಕಲ್ಪ ಅಲ್ಲಿನ  ಜನರಲ್ಲಿ ಕಾಣುವ ಪರಿಸ್ಥಿತಿ ಸೃಷ್ಟಿಯಾಗಿದೆ.



ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ ರದ್ದತಿಯ ಅನಂತರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೇೂದಿ ನೀಡಿದ ಭರವಸೆ "ಕಾಶ್ಮೀರವನ್ನು ಸ್ವಿಟ್ಜರ್ಲ್ಯಾಂಡ್ ಸೌಂದರ್ಯತೆಗೂ ಮೀರಿ ಅಭಿವೃದ್ಧಿ ಪಡಿಸ ಬಹುದು ಅನ್ನುವುದಕ್ಕೆಇನ್ನಷ್ಟು ಪೂರಕವಾಗಿ ಸ್ಪಂದಿಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತು ಕೆಲಸವನ್ನು ನಿವ೯ಹಿಸುತ್ತಿರುವವರಲ್ಲಿ ನಮ್ಮವರೇ ಆದ ಹಿರಿಯಡಕದ ಪುಟ್ಟ ಹಳ್ಳಿ ಬೊಮ್ಮಾರ ಬೆಟ್ಟಿನಲ್ಲಿ ಹುಟ್ಟಿ  ಬೆಳೆದು ಇಂದು ಜಮ್ಮು ಕಾಶ್ಮೀರ ಸರಕಾರದ ಅಭಿವೃದ್ಧಿ ಇಲಾಖೆಯ  ಪ್ರಧಾನ ಕಾರ್ಯದಶಿ೯ಗಳಾದ   ಹಿರಿಯಡಕ ರಾಜೇಶ್ ಪ್ರಸಾದ್ ಹಿರಿಯ ಐ.ಎ.ಎಸ್..ಅಧಿಕಾರಿಅನ್ನುವುದನ್ನು ಕಣ್ಣಾರೆ ನೇೂಡಿ ಆನಂದಿಸುವ ಸದಾವಕಾಶ ನಮ್ಮ ಪಾಲಿಗೆ ಬಂದಿರುವುದು ಅವಿಸ್ಮರಣೀಯ ಸಂದರ್ಭ ಅನ್ನುವುದನ್ನು ನಾವು ನೆನಪಿಸಿಕೊಳ್ಳಲೇ ಬೇಕು.



ಪ್ರವಾಸೋದ್ಯಮವೇ ಕಾಶ್ಮೀರಿ ಜನರ ಜೀವನಾಡಿ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೇರೆ ಬೇರೆ ರಾಜ್ಯ ರಾಷ್ಟ್ರಗಳಿಂದ ಪ್ರವಾಸಿಗರು ಬರುತ್ತಿದ್ದಾರೆ ಅನ್ನುವುದು ಅಲ್ಲಿನ ಜನರ ಬಿಚ್ಚು ಮನಸ್ಸಿನ ಸ್ಪೂರ್ತಿ ಯ ಮಾತು.ನಮ್ಮ ಏಳು ದಿನಗಳ ಅಧ್ಯಯನದ ಪ್ರವಾಸದಲ್ಲಿ ಕಾಶ್ಮೀರದ ಒಟ್ಟು ಹತ್ತು ಜಿಲ್ಲೆಗಳಲ್ಲಿ ಏಳು ಪ್ರಮುಖ ಜಿಲ್ಲಾ ಕೇಂದ್ರ ಮತ್ತುಪ್ರಮುಖ ಪ್ರಕೃತಿ ತಾಣದಸೌಂದರ್ಯತೆಯನ್ನು ಕಣ್ಣ ಮನ ತುಂಬಿಸಿಕೊಳ್ಳುವ ಸೌಭಾಗ್ಯ ನಮ್ಮದಾಗಿತ್ತು..ಜೀವ ಮಾನದಲ್ಲಿ ಒಮ್ಮೆಯಾದರೂ ಕಾಶ್ಮೀರ ನೇೂಡಿ ಬಾ ಅನ್ನುವ ಮಾತು ನಿಜವಾಗಿದೆ.




- ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top