ಸುರತ್ಕಲ್: ಸುರತ್ಕಲ್ ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ಹಾಗೂ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಲಲಿತಕಲಾ ಸಂಘಗಳ ಸಹಭಾಗಿತ್ವದಲ್ಲಿ ಮಂಗಳೂರಿನ ಯುವ ಬಾನ್ಸುರಿ ಕಲಾವಿದ ಕಾರ್ತಿಕ್ ಭಟ್, ಮಂಗಳೂರು ಇವರಿಂದ ಬಾನ್ಸುರಿ ವಾದನ ನಡೆಯಿತು.
ಧಾರವಾಡದ ಹೇಮಂತ್ ಜೋಷಿ ತಬಲಾದಲ್ಲಿ ಸಾಥ್ ನೀಡಿದರು.
ಆರಂಭದಲ್ಲಿ ಸಾಯಂಕಾಲದ ರಾಗ ಯಮನ್‌ನಲ್ಲಿ ಆಲಾಪ್, ಮಧ್ಯಲಯ್ ಝಪ್ ತಾಲ್ ಹಾಗೂ ದೃತ್ ತೀನ್ ತಾಳದ ಗತ್‌ಗಳನ್ನು ನುಡಿಸಿದರು. ನಂತರ ರಾಗ್‌ದೇಸ್‌ನ್ನು ದೃತ್ ಏಕ್‌ತಾಳ್ ಹಾಗೂ ಅತಿ ದೃತ್ ತೀನ್ ತಾಳದಲ್ಲಿ ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಭಜನ್‌ನೊಂದಿಗೆ ಕಛೇರಿಯನ್ನು ಸಂಪನ್ನಗೊಳಿಸಿದರು. ಚಿರಂತನ ಚಾರಿಟೇಬಲ್ ಟ್ರಸ್ಟ್ನ ಭಾರವಿ ದೇರಾಜೆ ಕಲಾವಿದರನ್ನು ಪರಿಚಯಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯದರ್ಶಿ ಹಿತಾ ಉಮೇಶ್ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಕಲಾವಿದರನ್ನು ಗೌರವಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ