ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲೂಕು ಘಟಕ ರಚನೆ

Upayuktha
0


ಮಂಗಳೂರು
: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇತ್ತೀಚೆಗೆ ಶ್ರೀ ಸುಬ್ರಮಣ್ಯ ಸಭಾ ಮಂಗಳೂರು ಇಲ್ಲಿ ನಡೆಸಲಾಯಿತು. ಸಭೆಯಲ್ಲಿ  ರಾಜ್ಯ ಉಪಾಧ್ಯಕ್ಷರಾದ ನ್ಯಾಯವಾದಿ ಮಹೇಶ್ ಕಜೆ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಪೊಳಲಿ ಗಿರಿಪ್ರಕಾಶ್ ತಂತ್ರಿಯವರ ಮುಂದಾಳತ್ವದಲ್ಲಿ ಬ್ರಾಹ್ಮಣ್ಯದಡಿ ಬರುವ ಮಂಗಳೂರು ತಾಲೂಕಿನ ಎಲ್ಲಾ ಸಮಾಜ ಬಾಂಧವರನ್ನು ವಿಶ್ವಾಸಕ್ಕೆ ತಗೊಂಡು ತಾಲೂಕು ಘಟಕವನ್ನು ರಚನೆ ಮಾಡಲಾಯಿತು.



ಕೂಟ ಬ್ರಾಹ್ಮಣ ಸಮಾಜದಿಂದ ಗೋಪಾಲಕೃಷ್ಣ ಮಯ್ಯ, ವಿಶ್ವೇಶ್ವರ ಕಾರಂತ್ ಸುರತ್ಕಲ್, ರವಿ ಪ್ರಸನ್ನ ನ್ಯಾಯವಾದಿ, ಚಂದ್ರಶೇಖರ ಮಯ್ಯ, ಶಿವಳ್ಳಿ ಬ್ರಾಹ್ಮಣ ಸಮಾಜದಿಂದ ರಾಮಕೃಷ್ಣ ರಾವ್, ರವಿ ಪ್ರಸಾದ್, ವಂದನ ಸುರೇಶ್ ಕದ್ರಿ, ಉದಯ ಶಂಕರ್ ಭಟ್, ಹರಿ ಭಟ್ ಕೋಟೆಕಾರ್, ಕೋಟೇಶ್ವರ ಬ್ರಾಹ್ಮಣ ಸಮಾಜದಿಂದ ಕೃಷ್ಣ ರಾವ್ ಪ್ರಕಾಶ್ ರಾವ್ ಕೋಟೆಕಾರ್, ಕರ್ಗಿ ಶ್ರೀನಿವಾಸ ಆಚಾರ್ಯ ಚಿತ್ರಾಪುರ, ಹವ್ಯಕ ಬ್ರಾಹ್ಮಣ ಸಮಾಜದಿಂದ ಗೀತಾ ದೇವಿ, ಸೌಜನ್ಯ, ಸ್ಥಾನಿಕ ಬ್ರಾಹ್ಮಣ ಸಮಾಜದಿಂದ ಉದಯ ಕುಮಾರ್, ಸಂತೋಷ್ ಕುಮಾರ್ ಕುಸುಮ ನವೀನ್ ಕುಮಾರ್, ಪುಷ್ಪ ಶ್ರೀನಿವಾಸ್ ಚಿತ್ಪಾವನ ಬ್ರಾಹ್ಮಣ ಸಮಾಜದಿಂದ ಸುಹಾಸ್ ಮರಾಠೆ,ಕರಾಡ ಬ್ರಾಹ್ಮಣ ಸಮಾಜದಿಂದ ಅನಂತಶಯನ ಭಟ್, ಜಯರಾಮ ಭಟ್ ದೇಶಸ್ಥ ಬ್ರಾಹ್ಮಣ ಸಮಾಜದಿಂದ ಪ್ರವೀಣಾ ಅರವಿಂದ್ ಮೊದಲಾದವರು ಹಾಗೂ ಹಿರಿಯರಾದ ಎಂ ಆರ್ ವಾಸುದೇವ ರಾವ್ ಇವರನ್ನು  ಸಲಹೆಗಾರರನ್ನಾಗಿ ಆಯ್ಕೆಮಾಡಲಾಯಿತು.



ಪ್ರಾರಂಭದಲ್ಲಿ ನಮ್ಮನ್ನಗಲಿದ ಪತ್ರಕರ್ತ ಮನೋಹರ ಪ್ರಸಾದ್, ಕದ್ರಿ ದೇವಳದ ಪವಿತ್ರಪಾಣಿ ಶ್ರದ್ಧಾಂಜಲಿ ಅರ್ಪಿಸಲಾಯಿತು, ಹಾಗೂ ಬ್ರಾಹ್ಮಣ ಅಭಿವೃದ್ದಿ ನಿಗಮ ಮಂಡಳಿಗೆ ನೂತನವಾಗಿ ಆಯ್ಕೆಯಾದ ಜಯಸಿಂಹ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು. ಜಿಲ್ಲಾ ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ಸ್ವಾಗತಿಸಿ. ಮಹೇಶ್ ಕಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಬ್ರಾಹ್ಮಣ ಮಹಾಸಭಾದ ದ್ಯೇಯ ಉದ್ದೇಶಗಳನ್ನು  ಹೇಳಿದರು.



ಜಿಲ್ಲಾ ಸಂಚಾಲಕ ಕೃಷ್ಣ ಭಟ್ ವಂದಿಸಿದರು. ಸಹ ಸಂಚಾಲಕ ರಾಜೇಂದ್ರ ಕಲ್ಬಾವಿ ನಿರೂಪಿಸಿದರು. ಸಹ ಸಂಚಾಲಕರಾದ ನ್ಯಾಯವಾದಿ ಪುರುಷೋತ್ತಮ ಭಟ್, ಪದ್ಮಾ ಭಿಡೆ, ಎಂ.ಟಿ.ಭಟ್, ಹರ್ಷ ಕುಮಾರ್ ಕೇದಿಗೆ, ರಾಜ್ಯ ಸಹ ಕಾರ್ಯದರ್ಶಿಗಳಾದ ಚೇತನಾ ದತ್ತಾತ್ರೇಯ, ಕಾತ್ಯಾಯಿನಿ ಸೀತಾರಾಂ, ರಾಜ್ಯ ಮಹಿಳಾ ಸಹ ಸಂಚಾಲಕಿ ಉಮಾ ಸೋಮಯಾಜಿ ಬಂಟ್ವಾಳ, ರಾಜ್ಯ  ಕಾರ್ಯಕಾರಿಣಿ ಮಂಡಳಿ ಸದಸ್ಯರಾದ ಶ್ರೀಕರ ದಾಮ್ಲೆ, ಗುರುರಾಜ್ ಮೊಳ್ಳಕಾಪು ಮೊದಲಾದವರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top