ಮಂಗಳೂರು: ನಗರದ ಅಮೃತಾನಂದಮಯಿ ಮಠದ ವತಿಯಿಂದ ಹಮ್ಮಿಕೊಳ್ಳಲಾದ ಯೋಗಶಿಬಿರದ ಸಮಾರೋಪ ಸಮಾರಂಭ ಮಠದ ಆವರಣದಲ್ಲಿ ಇತ್ತೀಚೆಗೆ ನಡೆಯಿತು. ಜನರ ದೈಹಿಕ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುವ ಸಲುವಾಗಿ ಮುಂಜಾನೆಯ ಚಿಕಿತ್ಸಕ ಯೋಗಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಅಧಿಕ ಸಂಖ್ಯೆಯ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಇನ್ನು ಮುಂದೆ ಸಂಜೆ ವೇಳೆ ಇಂತಹ ಶಿಬಿರ ನಡೆಸುವವರಿದ್ದೇವೆ ಎಂದು ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಅವರು ಈ ಸಂದರ್ಭದಲ್ಲಿ ಹೇಳಿದರು.
ಬ್ರಹ್ಮಸ್ಥಾನ ಸಮಿತಿಯ ಸಂಚಾಲಕ ಮುರಳೀಧರ ಶೆಟ್ಟಿ ಅವರು ಯೋಗಗುರುಗಳಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರನ್ನು ಶಾಲು ಹಾಕಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಅವರು ನಮ್ಮ ಅಮೂಲ್ಯ ವಿದ್ಯೆಯಾದ ಯೋಗಕ್ಕೆ ಈಗ ಅಂತಾರಾಷ್ಟ್ರೀಯ ಮನ್ನಣೆ ಪ್ರಾಪ್ತವಾಗಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಖರ್ಚಿಲ್ಲದ ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಯೋಗವು ಸ್ವಸ್ಥ ಸಮಾಜ ನಿರ್ಮಾಣಕ್ಕೆ ತೀರ ಅವಶ್ಯ. ಇದರ ಮೌಲ್ಯವನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಶಿಬಿರದಲ್ಲಿ ಭಾಗವಹಿಸಿದ ವಿದ್ಯಾ ಶೆಣೈ, ಭಾಗೀರಥಿ ಭಂಡಾರ್’ಕಾರ್ ಮತ್ತು ಪ್ರಹ್ಲಾದ ನಾಯಕ ಅವರು ತಮ್ಮ ಅನುಭವಗಳನ್ನು ಮಂಡಿಸಿದರು. ಯೋಗಶಿಬಿರಕ್ಕೆ ಸಹಕರಿಸಿದ ಗುರುಗಳಾದ ರೋಶನಿ ಶೆಣೈ ಮತ್ತು ಸ್ಕಂದ ಅವರನ್ನು ಸಮ್ಮಾನಿಸಲಾಯಿತು.
ಶಿಬಿರ ಸಂಯೋಜಕರಾದ ನಿರಂಜನ ಅಡ್ಯಂತಾಯ ಸ್ವಾಗತಿಸಿ ವಂದನಾರ್ಪಣೆ ಮಾಡಿದರು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ