ಮಂಗಳೂರು: ಪುತ್ತೂರಿನ ಶಾಸಕರ 1400 ಕೋಟಿಯ ಅನುದಾನದ ಬಗ್ಗೆ ಮಾಹಿತಿ ಕೇಳಿದ ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರರ ಮನೆಗೆ ನುಗ್ಗಿ ದಾಂದಲೆ ನಡೆಸಿರುವ ಘಟನೆಯನ್ನು ರಾಜ್ಯ ಬಿಜೆಪಿ ಕಾರ್ಯದರ್ಶಿಯೂ ಆಗಿರುವ ಕ್ಯಾಪ್ಟನ್ ಚೌಟ ತೀವ್ರವಾಗಿ ಖಂಡಿಸಿದರು.
ತಾನು 1400 ಕೋಟಿಯ ಅನುದಾನ ತಂದಿದ್ದೇನೆ ಎಂದು ಹೇಳುವ ಶಾಸಕರಿಗೆ ಆ ಬಗ್ಗೆ ಮಾಹಿತಿ ನೀಡಲು ಹಿಂಜರಿಕೆ ಏಕೆ...? ಎಂದು ಕ್ಯಾಪ್ಟನ್ ಚೌಟ ಪ್ರಶ್ನಿಸಿದರು. ಅನುದಾನದ ಬಗೆಗೆ ಮಾಹಿತಿ ನೀಡಲು ಪುತ್ತೂರು ಶಾಸಕರು ವಿಫಲರಾಗಿದ್ದು, ಹತಾಶರಾಗಿರುವ ಶಾಸಕರು ತನ್ನ ಗೂಂಡಾ ಕಾರ್ಯಕರ್ತರ ಮೂಲಕ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಬಿಜೆಪಿ ಕಾರ್ಯಕರ್ತರು ಹೆದರುವುದಿಲ್ಲ ಎಂದು ಚೌಟ ಹೇಳಿದರು.
ಕಾಂಗ್ರೆಸ್ ಸರಕಾರ ಬಂದ ನಂತರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಈ ರೀತಿಯ ಘಟನೆಗಳಿಗೆ ಅವಕಾಶಗಳನ್ನು ನೀಡಬಾರದು, ಸದರಿ ಪ್ರಕರಣವನ್ನು ಪೋಲಿಸರು ಪ್ರಭಾವಗಳಿಗೆ ಮಣಿಯದೇ ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್ ಗೂಂಡಾಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ