ಮಂಗಳೂರು: 19ನೇ ಪಚ್ಚನಾಡಿ ವಾರ್ಡ್‍ನ ಬೋಂದೆಲ್ ಹಾಗೂ ಪಚ್ಚನಾಡಿಯ ಬಂಗೇರು ಸೀಮೆ, ಬೊಟ್ಟು ಪ್ರದೇಶದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.
ಬೋಂದೆಲ್ ಜಂಕ್ಷನ್‍ನಿಂದ ವೈದ್ಯನಾಥ ದೈವಸ್ಥಾನದವರೆಗೆ ಸಂಪರ್ಕ ರಸ್ತೆ ಒಳಚರಂಡಿ, ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿಗಾಗಿ 50 ಲಕ್ಷ ರೂ, ಹಾಗೂ ಬೊಟ್ಟು ಪ್ರದೇಶದಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
ರಸ್ತೆ ವಿಸ್ತರಣೆ ಹಾಗೂ ಸಮರ್ಪಕ ಮೂಲಸೌಕರ್ಯ ಯೋಜನೆ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು ವಿಸ್ತರಣೆಯಂತಹ ಕಾಮಗಾರಿಗೆ ರಸ್ತೆಯ ಇಕ್ಕೆಲಗಳಲ್ಲಿ ಭೂಮಿ ಇರುವ ಮಂದಿ ಸಹಕಾರ ನೀಡಿದರೆ ಉತ್ತಮ ವ್ಯವಸ್ಥೆ ಸಿಗುತ್ತದೆ ಎಂದರು.
ಬಹು ದಿನದ ಜನರ ಬೇಡಿಕೆ ಈಡೇರಿಸಲು ಶಾಸಕರ ಸಹಕಾರದಲ್ಲಿ ಸಾಧ್ಯವಾಗಿದೆ ಎಂದು ಸ್ಥಳೀಯ ಕಾರ್ಪೋರೇಟರ್ ಸಂಗೀತಾ ಆರ್.ನಾಯಕ್ ನುಡಿದರು.
ಭಾಜಪ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರು ವಿಲ್‍ಫ್ರೆಡ್ ಸಲ್ದಾನ, ಮಂಡಲ ಮಹಿಳಾ ಮೋರ್ಚಾದ ಕಾರ್ಯದರ್ಶಿ ಇಂದಿರಾ ಬಂದಲೆ, ಮಂಡಲ ಯುವ ಮೋರ್ಚಾದ ಕಾರ್ಯದರ್ಶಿ ಧನುಷ್ ಪಚ್ಚನಾಡಿ, ಮಂಡಲ ಸದಸ್ಯರಾದ ಲತಾ ರೈ ಹಾಗೂ ಸ್ಥಳೀಯ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ