ಗೋಪಾಲಗೌಡ ಬಡಾವಣೆಯಲ್ಲಿ ಕರಡಿ: ವಾಕಿಂಗ್ ಹೋದವರ ಮೇಲೆ ದಾಳಿ

Upayuktha
0


ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಕೂಡಲೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.


ಗೋಪಾಲಗೌಡ ಬಡಾವಣೆಯ ಎಫ್‌ ಬ್ಲಾಕ್‌ನಲ್ಲಿರವ ಡಿವಿಜಿ ಪಾರ್ಕ್‌ ಸಮೀಪ ಕರಡಿ ಪ್ರತ್ಯಕ್ಷವಾಗಿದೆ. ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಸ್ಥಳೀಯರಾದ ತುಕಾರಾಂ ಶೆಟ್ಟಿ ಎಂಬುವವರ ಮೇಲೆ ಕರಡಿ ದಾಳಿ ಮಾಡಿ ಅವರ ಹೊಟ್ಟೆ ಮೇಲೆ ಪರಚಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ ತುಕಾರಾಂ ಶೆಟ್ಟಿ, ‘ನಾಯಿಗಳು ಓಡಿಸಿಕೊಂಡು ಬಂದಿದ್ದರಿಂದ ಕರಡಿ ನನ್ನ ಕಡೆಗೆ ಓಡಿ ಬಂತು. ಪರಚಿ ಓಡಿ ಹೋಯಿತುʼ ಎಂದು ತಿಳಿಸಿದ್ದಾರೆ.


ಮಾಹಿತಿ ಪಡೆದು ಅರಣ್ಯಾಧಿಕಾರಿಗಳು ಧಾವಿಸಿದರೂ ಕರಡಿ ಕಣ್ಣಿಗೆ ಬೀಳಲಿಲ್ಲ. ಘಟನೆಯಿಂದ ಸುತ್ತಮುತ್ತಲ‌ ನಿವಾಸಿಗಳು ಭಯಭೀತರಾಗಿದ್ದಾರೆ. ತುಕಾರಾಂ‌‌ ಅವರ ಹೊಟ್ಟೆ ಮೇಲೆ ಕರಡಿ ಪರಚಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top