ಪ್ರಶಸ್ತಿ ಶಿಕ್ಷಕ ಸಮೂಹಕ್ಕೆ ಸಂದಿದ್ದು; ಬಿಇಒ ಪಿ.ನಾಗರಾಜ್‌

Upayuktha
0


ಶಿವಮೊಗ್ಗ: ರಾಷ್ಟ್ರಮಟ್ಟದ ಪ್ರಶಸ್ತಿ ಸಂದಿದ್ದು, ನನಗಲ್ಲ. ಇದು ಇಡೀ ಶಿವಮೊಗ್ಗದ ಶಿಕ್ಷಣ ವ್ಯವಸ್ಥೆಗೆ ಲಭಿಸಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್‌ ಅಭಿಪ್ರಾಯಪಟ್ಟರು.


ಸೋಗಾನೆ ಹೊಸೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಇತ್ತೀಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿಗೌರವ ಸ್ವೀಕರಿಸಿ ಮಾತನಾಡಿದರು.


ಯೋಗ್ಯತೆ ಮತ್ತು ಯೋಗದ ಫಲವಾಗಿ ಶಿವಮೊಗ್ಗದಲ್ಲಿಪುರಸ್ಕಾರ ಮನ್ನಣೆಗಳು ಸಿಕ್ಕಿವೆ. ಇದಕ್ಕೆ ಶಿಕ್ಷಕರ ಪ್ರೀತಿಯೇ ಮೂಲ ಕಾರಣವಾಗಿದ್ದು, ಪ್ರಶಸ್ತಿ ಮೌಲ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಇದರೊಂದಿಗೆ ಕೆಲಸದೆಡೆಗೆ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಕೆಲಸವನ್ನು ಶ್ರದ್ಧೆ, ಪ್ರೀತಿ ಮತ್ತು ಬದ್ಧತೆಯಿಂದ ಮಾಡಿದರೆ ಖಂಡಿತ ಪ್ರತಿಫಲ ದೊರಕುತ್ತದೆ ಎನ್ನುವುದಕ್ಕೆ ನಾನು ಸಾಕ್ಷಿ ಎಂದರು.


ಲೀಲಾವತಿ, ಸೌಮ್ಯಾ ನಿರೂಪಿಸಿದರು. ವೈ.ಶಾಂತಮ್ಮ ಪ್ರಾರ‍್ಥಿಸಿದರು. ಶಾಲೆಯ ಮುಖ್ಯ ಶಿಕ್ಷ ಕಿ ಎಚ್‌.ಎಲ್‌. ಶೋಭಾ ಸ್ವಾಗತಿಸಿದರು. ಸಹಶಿಕ್ಷ ಕ ರಾಜು ಹೊನ್ನವಿಲೆ ವಂದಿಸಿದರು.


ಪ್ರಮುಖರಾದ ಧರ‍್ಮಪ್ಪ, ದಿನೇಶ್‌, ಶ್ರೀನಿವಾಸ್‌, ವಿಶ್ವನಾಥ್‌, ಮೋಹನ್‌ ,ವಾಸು, ಶಂಕ್ರಪ್ಪ, ದಾಮೋದರ್‌ ಇತರರಿದ್ದರು.



    ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top