ಶರದ್ ಪವಾರ್ ಪಕ್ಷಕ್ಕೆ ಹೊಸ ಹೆಸರು

Upayuktha
0

 



ನವದೆಹಲಿ: ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಶರದ್‌ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷಕ್ಕೆ ಚುನಾವಣಾ ಆಯೋಗ ಹೊಸ ಹೆಸರು ನೀಡಿದೆ.



ಶರದ್‌ ಪವಾರ್ ನೇತೃತ್ವದ ಪಕ್ಷದ ಹೆಸರು ಈ ಹಿಂದೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಎಂದು ಇತ್ತು. ಅದು ಈಗ ಅಜಿತ್ ಪವಾರ್ ಬಣದ ಪಾಲಾಗಿದೆ. ಹಾಗಾಗಿ ಶರದ್ ಪವಾರ್ ಬಣಕ್ಕೆ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಶರದ್ಚಂದ್ರ ಪವಾರ್’ (ಎನ್‌ಸಿಪಿ-ಎಸ್‌ಪಿ) ಎಂದು ಚುನಾವಣಾ ಆಯೋಗ ಹೊಸ ಹೆಸರು ಕೊಟ್ಟಿದೆ.



ವರದಿಗಳ ಪ್ರಕಾರ, ಚುನಾವಣಾ ಆಯೋಗ ಶರದ್ ಪವಾರ್ ಬಣಕ್ಕೆ ಹೊಸ ಹೆಸರು ನೀಡಿದೆ. ಆದರೆ, ಪಕ್ಷದ ಚಿಹ್ನೆಯ ಕುರಿತು ಇನ್ನೂ ಮಾಹಿತಿ ದೊರೆತಿಲ್ಲ. ಎನ್‌ಸಿಪಿ ಪಕ್ಷದ ಚಿಹ್ನೆಯಾಗಿದ್ದ ‘ಗಡಿಯಾರ’ ಅಜಿತ್ ಪವಾರ್ ಬಣದ ಪಾಲಾಗಿದೆ. ಶರದ್ ಪವಾರ್ ಅವರು 1999ರಲ್ಲಿ ಎನ್‌ಸಿಪಿ ಪಕ್ಷವನ್ನು ಸ್ಥಾಪಿಸಿದ್ದರು. ಫೆ.06 2024 ರಂದು ಅವರು ತಮ್ಮ ಪಕ್ಷದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಎನ್‌ಸಿಪಿ ಪಕ್ಷವನ್ನು ವಿಭಜಿಸಿದ ಬಂಡಾಯದ ನೇತೃತ್ವ ವಹಿಸಿದ್ದ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ನೇತೃತ್ವದ ಬಣವು ‘ನಿಜವಾದ’ ಎನ್‌ಸಿಪಿ ಎಂದು ಚುನಾವಣಾ ಆಯೋಗ ತಿಳಿಸಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top