ಶ್ರೀರಾಮ ಕಥಾ ಲೇಖನ ಅಭಿಯಾನ-65: ರಘುವೀರ ಹೃದಯ ಸಾಮ್ರಾಜ್ಞಿ

Upayuktha
0

 



-ಛಾಯಾದೇವಿ.ವಿ.ವೈ

ಭಾರತವು ಅಧ್ಯಾತ್ಮಿಕತೆಯ ತವರಾಗಿದೆ. ನಮ್ಮ ದೇಶವು ಅನೇಕ ಮಹಾನ್ ಸಾಧು-ಸಂತರುಗಳ, ಋಷಿ-ಮುನಿಗಳ, ಸನ್ಯಾಸಿಗಳ ನೆಲೆವೀಡಾಗಿದೆ. ನಮ್ಮ ನೆಲದ ಸನಾತನ ಮೌಲ್ಯಗಳನ್ನು, ಜೀವನದ ಸಾರವನ್ನು, ಯುಗ-ಯುಗಳಿಗೆ ಸಾರಲು, ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲು, ಮನುಕುಲದ ಕಲ್ಯಾಣಾರ್ಥವಾಗಿ ರಾಮಾಯಣ ಮತ್ತು ಮಹಾಭಾರತದಂತಹ ಶ್ರೇಷ್ಠ ಮಹಾಕಾವ್ಯವನ್ನು ರಚಿಸಿದ್ದಾರೆ. ಈ ಕಾವ್ಯಗಳು ಪ್ರತಿಯೊಬ್ಬರಿಗೂ ಸ್ಫೂರ್ತಿ ಹಾಗು ಆದರ್ಶ ಜೀವನದ ವಿಧಾನಕ್ಕೆ ಮೂಲಗಳಾಗಿವೆ. ರಾಮಾಯಣ  ಮಹಾಕಾವ್ಯವು ರಾಮನ ಜೀವನ ಕೇಂದ್ರಿತಗೊಳಿಸುತ್ತಾ ಮನುಷ್ಯ ಜೀವನದ ಪ್ರೀತಿ, ಕರ್ತವ್ಯ, ಹಿರಿಯರಿಗೆ ಭಕ್ತಿ-ಗೌರವ ನೀಡುವುದು, ನಿಸ್ವಾರ್ಥತೆ, ತ್ಯಾಗ, ರಾಜನಿಷ್ಠೆ, ಪತಿ-ಪತ್ನಿ ಧರ್ಮ, ಸ್ನೇಹ, ಸ್ವಾಮಿನಿಷ್ಠೆ, ಮೋಸ, ದುಷ್ಟರ ಸಂಹಾರ ಹೀಗೆ ಅನೇಕ ಅಂಶಗಳನ್ನು ಕಲಿಸುತ್ತದೆ.


ಇಂತಹ ರಾಮಾಯಣ ಮಹಾಕಾವ್ಯದಲ್ಲಿ ಸೀತಾ ದೇವಿಯ ಪಾತ್ರ ಬಹುಮುಖ್ಯ  ಪಾತ್ರವಾಗಿದೆ. ಸೀತಾ ಮಾತೆಯನ್ನು ಬಿಟ್ಟು ರಾಮಾಯಣವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸೀತಾದೇವಿಯ ಆದರ್ಶಗಳು ಕೇವಲ ತ್ರೇತಾ  ಯುಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂದಿನ ಕಲಿಯುಗಕ್ಕೂ, ಅಲ್ಲದೆ ಮುಂದೆ ಎಷ್ಟೇ ಯುಗಗಳು ಬಂದರೂ ಅವುಗಳಿಗೆ ಆಕೆಯ ಸಹನೆ, ವಿನಯ, ಧೈರ್ಯ, ಧರ್ಮನಿಷ್ಠೆ, ವಿವೇಕ ಹೀಗೆ ಪಟ್ಟಿ ಮಾಡಿದಷ್ಟು ಮಾತೆಯ ಸದ್ಗುಣಗಳ ವರ್ಣನೆ ಮುಂದೆ ಸಾಗುತ್ತಲೇ ಹೋಗುತ್ತದೆ. ಇಂತಹ ಎಷ್ಟೋ ಗುಣಗಳನ್ನು ಧರಿಸಿದ ಆಕೆಯ ಆದರ್ಶಗಳು, ಎಂದೆAದಿಗೂ ಹೆಣ್ಣುಮಕ್ಕಳು ಇಷ್ಟಪಟ್ಟು ಅವರ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕಾದುವಂತದ್ದಾಗಿದೆ. ಸೀತಾದೇವಿಯು ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಅನುಭವಿಸಿದ್ದಾಳೆ, ಆದರೆ ಎಂದಿಗೂ ಕೊರಗುತ್ತಾ ಕೂತವಳಲ್ಲ, ಹಾಗೆಯೇ ಧರ್ಮದ ಹಾದಿಯನ್ನು ತೊರೆದವಳಲ್ಲ. ಮಾತೆಯ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.


ಸೀತಾದೇವಿಯ ಜನನ:

ಅಪದೇಶೇನ ಜನಕಾತ್ ನೋತ್ಪತ್ತಿಃ ವಸುಧಾ ತಲಾತ್| (ಯುದ್ಧ, 119-15)

ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಿರುವಂತೆ ಸೀತಾದೇವಿಯು ಭೂಮಿಜೆ ಸೀರಧ್ವಜನೆಂಬ ಜನಕರಾಜನು ಯಾಗ ಭೂಮಿಯನ್ನು ಉಳುವಾಗ, ಒಂದು ಪೆಟ್ಟಿಗೆಗೆ ನೇಗಿಲಿನ ತುದಿಯ ಕಬ್ಬಿಣವು(ಕುಳ) ತಾಕಿದಾಗ ಅಯೋನಿಜೆಯಾಗಿ ದೊರೆತವಳೇ ಸೀತಾದೇವಿ. ಆಕೆ ಲಕ್ಷ್ಮೀ ಸ್ವರೂಪವೆಂಬ ಸತ್ಯವನ್ನು ಜನಕ ರಾಜನು ತಿಳಿದಿದ್ದ. ಸೀತೆಯ ಆಗಮನವು ಮಿಥಿಲೆಗೆ ಶುಭದಾಯಕವಾಗಿತ್ತು ಮತ್ತು ಜನಕ ರಾಜನ ಅರಮನೆಗೆ ಸಂತಸ ಹಾಗು ಸಂತಾನದ ಸೊಬಗನ್ನು ನೀಡಿದಳು ಎಂಬುವುದರಲ್ಲಿ ಸಂಶಯವೇ ಇಲ್ಲ.


ಸೀತಾದೇವಿಯ ಬಾಲ್ಯ:

ಜನಕ ರಾಜನ ಜೇಷ್ಠಪುತ್ರಿಯಾಗಿ ಬೆಳೆದ ಈಕೆಗೆ, ಜನಕ ರಾಜನ ಮಗಳಾದರಿಂದ ಜಾನಕಿ ಎಂದು, ಮಿಥಿಲೆಯಲ್ಲಿ ಹುಟ್ಟಿ ಬೆಳೆದಿದ್ದರಿಂದ ಮೈಥಿಲಿ ಎಂದು, ನೇಗಿಲಿನ ಕಬ್ಬಿಣದ ತುದಿಗೆ ಸಿಕ್ಕ ಪೆಟ್ಟಿಗೆಯಿಂದ ದೊರೆತಿದ್ದರಿಂದ ಸೀತೆ ಎಂದು, ವಿದೇಹದ ರಾಜಕುಮಾರಿಯಾಗಿ ವೈದೇಹಿ, ಭೂಮಿಯಿಂದ ಜನಿಸಿದ್ದರಿಂದ ಭೂಮಿಜೆ ಎಂಬ ಹೆಸರುಗಳು ಬಂದವು. ಈಕೆ ಬಾಲ್ಯದಲ್ಲಿ ಚಿತ್ರಕಲೆಯಲ್ಲಿ, ಯುದ್ಧನೀತಿಯಲ್ಲಿ ಅತೀವ ಆಸಕ್ತಿ ಹಾಗು ಶಸ್ತಾçಸ್ತç ಪರಿಣತಿ ಹೊಂದಿದ್ದಳು. ಸೀತಾಮಾತೆಯು ತನ್ನ ತವರು ಮನೆಯಾದ ಜನಕರಾಜನ ಅರಮನೆಯಲ್ಲಿ ಸಕಲ ಧರ್ಮ, ನೀತಿ, ನಿಯಮಾಚಾರಣೆಗಳನ್ನೂ ಗುರುಗಳು, ತಂದೆ, ತಾಯಿಯರ ಮುಖೇನ ಕಲಿತಿದ್ದಳು ಎಂಬುದಾಗಿ ತಾನು ಅನಸೂಯಾದೇವಿಯೊಡನೆ ಹೇಳುತ್ತಾಳೆ. ಇದನ್ನು ರಾಮಾಯಣದ ಈ ಸಾಲಿನಿಂದ ಪರಾಂಬರಿಸಬಹುದಾಗಿದೆ


“ಅನುಶಿಷ್ಟಾsಸ್ಮೀಮಾತ್ರಾ ಚ ಪಿತ್ರಾ ಚ ವಿವಿಧಾಶ್ರಯಂ|”

ಬಾಲ್ಯದಲ್ಲಿ ಸೀತಾ ದೇವಿ ತನ್ನ ಸಾಕು ತಂದೆ-ತಾಯಿಯರೊAದಿಗೆ, ಪುತ್ರಿ ಧರ್ಮಗಳನ್ನ ಶ್ರದ್ಧೆಯಿಂದ ಪಾಲಿಸಿಕೊಂಡು ಆದರ್ಶ ಮಗಳಾಗಿ, ಹಿರಿಯಕ್ಕನಾಗಿ ಉಳಿದ ಸಹೋದರಿಯರಿಗೆ ಮಾದರಿಯಾಗಿದ್ದಳು. ತನ್ನ ಬಾಲ್ಯದಿಂದಲೇ ಗುರು ಹಿರಿಯರನ್ನು  ಗೌರವಿಸುವ ವಿನಯಾದಿ ಸದ್ಗುಣಗಳು, ಕಿರಿಯರೊಡನೆ ಪ್ರೀತಿಯಿಂದ ಮತ್ತು ವಿವೇಕದಿಂದಿರುವ ಆಕೆಯ ನಡುವಳಿಕೆ ಅನುಕರಣೀಯ. ಸೀತಾದೇವಿ ತನ್ನ ಬಾಲ್ಯಾವಸ್ಥೆಯಲ್ಲೇ ಅದ್ಭುತ ಗುಣಗಳ ಸಾಗರವಾಗಿದ್ದಳು.


ಸೀತಾದೇವಿಯ ವಿವಾಹ: ಒಂದು ಕತೆಯ  ಪ್ರಕಾರ ರಾಜರ್ಷಿ ಜನಕನು, ಯಾಜ್ಞವಲ್ಕö್ಯರ ಶಿಷ್ಯನಾಗಿ ಸಮಸ್ತ  ವೇದಾಂತ ಮರ್ಮಗಳನ್ನೂ ವೈದಿಕ ಜ್ಞಾನವನ್ನು ಅರಿತು ಕರ್ಮಯೋಗಿ ಆಗಿದ್ದವನು. ಸೀತೆಯೇ ಲಕ್ಷ್ಮೀದೇವಿ ಎಂಬುದನ್ನು ಅವನು ಅರಿತಿದ್ದನು. ಹಾಗೆಯೇ ಶ್ರೀ ವಿಷ್ಣುವೇ ತನ್ನ ಅಳಿಯನಾಗಿ ಬಂದು ಸೀತೆಯ ಕೈ ಹಿಡಿಯುವುದಾಗಿ ತಿಳಿದವನೀತ. ಅದನ್ನು ಪರೀಕ್ಷಿಸಲೂ, ಇತರರನ್ನು ವ್ಯಾವರ್ತಿಸಲೂ ಒಂದು ಉಪಾಯವನ್ನು ಮಾಡಿ ಶಿವಧನಸ್ಸಿನ ಷರತ್ತನ್ನು ಹಾಕಿದ ಎಂದು ಹೇಳಲಾಗುತ್ತೆ. ಅದೇ ರೀತಿ ಭಗವಾನ್ ಶ್ರೀರಾಮನು ತನ್ನ ಗುರುಗಳಾದ ವಿಶ್ವಾಮಿತ್ರರೊಡನೆ ಸೀತಾ ಸ್ವಯಂವರಕ್ಕೆ ಬಂದು ಸಭೆಯಲ್ಲಿ ಶಿವಧನಸ್ಸನ್ನು ಎತ್ತಿದ್ದಲ್ಲದೇ, ಆ ಧನಸ್ಸನ್ನು ಮುರಿಯುವ ಲೀಲೆಯ ಮೂಲಕ ಇಡೀ ಲೋಕಕ್ಕೆ ರಘುರಾಮನ ಶೌರ್ಯ, ಪರಾಕ್ರಮದ ಪರಿಚಯವಾಯಿತು. ಸೀತಾದೇವಿ ಆ ಚಿಕ್ಕವಯಸ್ಸಿನಲ್ಲೇ ತನ್ನ ತವರಿಂದ ಗಂಡನ ಮನೆಗೆ ಹೋಗಿ ಬಾಳುವೆ ಮಾಡುವ ಜವಾಬ್ದಾರಿಗಳನ್ನು ಕಲಿತುಕೊಂಡಿದ್ದಳು. ಇದು ಸೀತಾದೇವಿಯ ಬುದ್ಧಿವಂತಿಕೆ, ಶ್ರದ್ಧೆ-ಗೌರವದ ಭಾವಗಳನ್ನು ತೋರುತ್ತದೆ.


ರಾಮ-ಸೀತೆಯರ ಸಖ್ಯದ ಸ್ವಾರಸ್ಯ:

ಅಸ್ಯಾ ದೇವ್ಯಾ ಮನಸ್ತರ್ಸ್ಮಿ ತಸ್ಯ ಚಾಸ್ಯಾಂ ಪ್ರತಿಷ್ಠಿತಂ|

ತೇನೇಯ ಸ ಚ ಧರ್ಮಾತ್ಮಾ ಮುಹೂರ್ತಮಪಿ ಜೀವತಿ|| (15-52)


ರಾಮ-ಸೀತೆಯರು ಪತಿ-ಪತ್ನಿಯರಾಗಿ, ಪ್ರಕೃತಿ ಪುರುಷರಾಗಿ ಲೋಕ ಕಲ್ಯಾಣಕ್ಕಾಗಿ ಅವತಾರವೆತ್ತಿದರು.  ಸೀತಾದೇವಿಯ ಪ್ರೀತಿಯು ಅತ್ಯಂತ ಅಚಲವಾದುದು. ಹೇಗೆಂದರೆ ಆಕೆ ರಾಮನನ್ನು ಎಂದೂ ನೋಡಿರಲಿಲ್ಲ, ಆದರೂ ಅಕೆಯಲ್ಲಿ ಅಷ್ಟೋಂದು ಪ್ರೀತಿ-ಭಕ್ತಿ ಎಲ್ಲಿಂದ ಬಂತು? ಎಂಬ ಪ್ರಶ್ನೆ ಉದ್ಭವಿಸುವುದು ಸಾಮಾನ್ಯ. ಆದರೆ ಸೂಕ್ಷö್ಮವಾಗಿ ನೋಡಿದರೆ ಸೀತೆಯ ಪ್ರೀತಿ, ರಾಮನ ರೂಪ, ಗುಣ, ರಾಜ್ಯ, ಅಂತಸ್ತುಗಳನ್ನು ನೋಡಿ ಬಂದದ್ದಲ್ಲ. ಸುಮಾರು 12 ವರ್ಷಗಳ ಕಾಲ ಮದುವೆಯಾಗಿ ಅಯೋಧ್ಯೆಯಲ್ಲಿ ಸುಖವಾಗಿ-ಸಮೃದ್ಧಿಯಾಗಿ ಜೀವಿಸಿದ ದಂಪತಿಗಳು ಇವರು. ಅನಿರೀಕ್ಷಿತವಾಗಿ ರಾಜನಾಗಬೇಕಾದ ಶ್ರೀ ರಾಮನಿಗೆ ವನವಾಸದ ಯೋಗ ಬಂದಾಗ, ಸೀತೆ ಆತನೊಡನೆ ಅಡವಿಗೆ ಬರುವುದು ಬೇಡ ಎಂದರೂ ಆಕೆ ಕೇಳುವುದಿಲ್ಲ. ತಾನೂ ಬರುವುದಾಗಿ ಒತ್ತಾಯಿಸುವ ಸೀತೆಯ ಆದರ್ಶವನ್ನು ಗಮನಿಸುವುದಾದರೆ ಒಂದು ಪ್ರೇಮವಾಗಿತ್ತು. ಮತ್ತೊಂದು ಪತ್ನಿ ಜವಾಬ್ದಾರಿಯಾಗಿತ್ತು. ಶ್ರೀಹರಿ ಮತ್ತು ಲಕ್ಷ್ಮೀಗೆ ವಿರಹವೆಲ್ಲಿಯದು. ಪತಿ ಹೇಗೆ ಪತ್ನಿಯ ಕಷ್ಟ-ಸುಖಗಳಿಗೆ ಭಾಗಿಯಾಗಿ, ಜವಬ್ದಾರನಾಗಿ ನಿಭಾಯಿಸಬೇಕೋ ಹಾಗೆಯೇ ಪತ್ನಿಯಾದವಳೂ, ಪತಿಯ ಕಷ್ಟ-ಸುಖಗಳಿಗೆ ಭಾಗಿಯಾಗಿ, ಜವಾಬ್ದಾರಳಾಗಿ ನಿಭಾಯಿಸಬೇಕಾದುದು ಧರ್ಮವಾಗಿತ್ತು. ಇಂತಹ ಅಂದಿನ ಸಮಾಜದಲ್ಲಿ ಉನ್ನತ ಸ್ತ್ರೀ ಧರ್ಮವನ್ನು ಪಾಲಿಸುವ ಸೀತಾದೇವಿಯ ಆದರ್ಶಗಳನ್ನು ಗಮನಿಸಬಹುದಾಗಿದೆ.


ಪಾಣಿಗ್ರಹಣ ಕಾಲೇ ಚ ಯತ್ ಪುರಾ ತ್ವಗ್ನಿಸಂನ್ನಿಧೌ|

ಅನುಶಿಷ್ಟಾ ಜನನ್ಯಾsಸ್ಮಿ ವಾಕ್ಯಂ ತದಪಿ ಮೇ ಧೃತಂ||


ಸೀತೆಯ ಈ ಮಾತುಗಳನ್ನ ಗಮನಿಸಿ, ಇಲ್ಲಿ ಆಕೆ ಹೇಳುವುದೇನಂದರೆ ಮದುವೆಯ ಸಮಯದಲ್ಲಿ ಅಗ್ನಿದೇವನ ಮುಂದೆ ತನ್ನ ತಾಯಿ (ಜನಕ ರಾಜನ ಪತ್ನಿ) ಉಪದೇಶಿಸಿದ ವಾಕ್ಯಗಳನ್ನು ಸದಾ   ಸ್ಮರಿಸುತ್ತೇನೆ ಎಂದರ್ಥ. ಇಲ್ಲಿ ಸೀತೆಯ ತಿಳುವಳಿಕೆ ಸಾಮರ್ಥ್ಯವನ್ನು ಗಮನಿಸಬಹುದು. ಹಾಗೆಯೇ ಸೀತಾ ಮಾತೆ ಜೀವನದ ಆದರ್ಶಗಳನ್ನು ಹಂತ-ಹಂತವಾಗಿ ತನ್ನ ಜೀವನದಲ್ಲಿ ಕಲಿಯುತ್ತಾ, ಅಳವಡಿಸಿಕೊಳ್ಳುತ್ತಾ, ಪೋಷಿಸುತ್ತಾ ಬಂದಿದ್ದಳು ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆಯಾಗಿದೆ.


ಭಾರತೀಯ ಸನಾತನದ ಮೌಲ್ಯಗಳನ್ನು ನೋಡಿದರೆ ‘ಪ್ರಕೃತಿ’ ಮತ್ತು ‘ಪುರುಷ’ ಒಬ್ಬರಿಗೊಬ್ಬರು ‘ಸಮರೂ ಅಲ್ಲ’, ‘ವಿಷಮರೂ ಅಲ್ಲ’. ಇಬ್ಬರೂ  ತಮ್ಮದೇ ಆದ ರೀತಿಯಲ್ಲಿ ಸಮರ್ಥರು ಮತ್ತು ಇವರಿಬ್ಬರು ಕೂಡಿಯೇ ಒಂದು ವ್ಯಕ್ತಿತ್ವ. 


“ಅರ್ಧೋವಾ ಆತ್ಮನಃ, ಯತ್ಪತ್ನೀ”(ಕೃಷ್ಣ ಯಜುರ್ವೇದದ ಸಾಲು) 

ಜಾನಕಿಯ ರಾಮನ ಆದರ್ಶವನ್ನು ಹೋಲುವ ಸಾಲು ಇದಾಗಿದೆ ಎನ್ನಬಹುದು. ಈ ಸಾಲಿನ ಅರ್ಥ: ಆತ್ಮದ ಅರ್ಧ ಭಾಗವೇ ಪತ್ನಿ ಎಂದು. ಮಹಾಭಾರತದಲ್ಲಿ ಧರ್ಮರಾಜನು ಯಕ್ಷಪ್ರಶ್ನೆಯಲ್ಲಿ ಹೇಳುವಂತೆ, “ಪತ್ನಿಗಿಂತ ಉತ್ತಮ ಸ್ನೇಹಿತೆ, ಬಂಧು ಯಾರು ಇಲ್ಲ” ಎಂಬ ಹಾಗೆ ಶ್ರೀರಾಮನು ಸೀತೆಯನ್ನು ಕಾಣುತಿದ್ದನು.


ಇಷ್ಟೇ ಅಲ್ಲ ಸೀತಾಮಾತಾ ಬಂಗಾರದ ಜಿಂಕೆಯನ್ನು ಕೇಳಿದಾಗ ಒಂದು ನಿಮಿಷವೂ ಯೋಚಿಸದೆ ಆಕೆಯ ಬಯಕೆಯನ್ನು ನೆರವೇರಿಸಲು ಜಿಂಕೆಯನ್ನು ಬೆನ್ನಟ್ಟಿದ ರಘುನಾಥ ಅದೇ ಸೀತಾಮಾತೆಯ ಅಪಹರಣವಾದಾಗ ಇಡೀ ಭೂಮಂಡಲವನ್ನೇ ತನ್ನ ಒಂದು ಬಾಣದಿಂದ ನಾಶ ಮಾಡಲೂ ಮುಂದಾದವನು, ಕೋದಂಡರಾವi. ಆಕೆ ಎಲ್ಲಿ ಕಳೆದು ಹೋಗಿದ್ದಾಳೆಂದು ತಿಳಿಯದೆ ಕಾಡು-ಮೇಡುಗಳನ್ನು, ಗೊತ್ತು ಗುರಿಯಿಲ್ಲದೆ ಸೀತಾ... ಸೀತಾ... ಎಂದು ಜಪಿಸುತ್ತಾ, ದುಃಖಿಸುತ್ತಾ, ಆಕೆಗಾಗಿ ಪರಿತಪಿಸುತ್ತಾ, ನಿದ್ದೆ-ಆಯಾಸಗಳನ್ನ ಲೆಕ್ಕಿಸದೆ ರಘುರಾವi ತಾನು ಸೀತೆಯನ್ನು ಹೇಗಾದರೂ ಕಾಪಾಡಲೇ ಬೇಕು ಎಂದು ಹುಡುಕುತ್ತಾ ವಾನರ ಗುಂಪಿನ ಸಹಾಯವನ್ನು ಪಡೆದು, ತನ್ನರಸಿಗಾಗಿ ನೊಂದು-ಬೆAದ ಜೀವ, ಜಾನಕಿಯ ರಾವiನದು. ಆಕೆ ಬದುಕಿದ್ದಾಳೊ ಇಲ್ಲವೋ ಎಂದು ಯೋಚಿಸುವ ಧೈರ್ಯ ಮಾಡಲಾಗದಷ್ಟು ಆಕೆಯ ಪ್ರೇಮ ಸಾಗರದಲ್ಲಿ ಮುಳುಗಿ ಹೋಗಿದ್ದ, ಈ ಮೈಥಿಲೀ ವಲ್ಲಭ. ಆಕೆಗಾಗಿ ಲಂಕೆಗೆ ಸೇತುವೆ ಕಟ್ಟಿ, ರಾವಣನನ್ನು ಸಂಹರಿಸಿದ ಅಸಾಮಾನ್ಯ ಶೂರ. ಧೀರೋದಾತ್ತ ಗುಣಧಾಮ.  ಹಾಗೆಯೇ ಆಕೆಯ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು, ಕೇವಲವಾಗಿ ನೋಡಬಾರದು ಎಂದು ಲಂಕೆಯಲ್ಲಿ ಇದ್ದ ಸೀತೆಗೆ ಮರಳಿ ಅಯೋಧ್ಯಗೆ ಹೋಗುವ ಮೊದಲು ದಶಮುಖ ಮರ್ದನನಿಗೆ ಕಷ್ಟವಾದರೂ..., ಸೀತಾಮಾತೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿ. ಆಕೆಯ ಸೂಕ್ಷö್ಮ ಭಾವನೆಯನ್ನು, ಮನಸ್ಸನ್ನು ಅರಿತ ಮರ್ಯಾದ ಪುರುಷೋತ್ತಮ, ಶ್ರೀ ರಾವiಚಂದ್ರ ಪ್ರಭುವು ತನ್ನ ಕಿವಿಗೆ ಬಿದ್ದ ಕಠೋರವಾದ ಪ್ರಜೆಗಳ ಮಾತುಗಳು ಎಲ್ಲಿ ಸೀತಾಮಾತಾ ಕಿವಿಗೆ ಬಿದ್ದುಬಿಡುವುದೋ, ಎಲ್ಲಿ ಪ್ರಜೆಗಳು ದಂಗೆ ಎದ್ದು ಪತಿವ್ರತೆಯಾದ ರಾಮಪ್ರಿಯೆಗೆ ಕಳಂಕಿಣಿ ಎಂಬ ಪಟ್ಟಕಟ್ಟುವರೋ, ಆಕೆ ಅಂತಹ ನಿಷ್ಠೂರದ ಮಾತುಗಳನ್ನು ಕೇಳಿ ಬದುಕಲಾರಳು, ಖಂಡಿತ ಆತನನ್ನು ಶಾಶ್ವತವಾಗಿ ಅಗಲಿ ಹೋಗುತ್ತಾಳೆ ಎಂಬ ಭಯಕ್ಕೆ, ಆಕೆ ತನ್ನಿಂದ ದೂರವಾದರೂ ಪರವಾಗಿಲ್ಲ, ತಾನು ಕಳಂಕಿತಳಾದೆ ಎನಿಸದಿರಲಿ ಎಂದು ಆಕೆಯನ್ನು ಅಯೋಧ್ಯೆಯಿಂದ ದೂರ ಕಳುಹಿಸಲು ಲಕ್ಷö್ಮಣನಿಗೆ ಆಜ್ಞಾಪಿಸಿದ, ಶ್ರೀರಾಮ. ಲಕ್ಷö್ಮಣನಿಗೆ ಏಕೆ? ಸೀತಾ ದೇವಿಯೇನಾದರು ಪ್ರಶ್ನಿಸಿದ್ದರೆ ಖಂಡಿತ ಸುಳ್ಳನ್ನು ಆಡಲು ರಘುಕುಲನಂದನನಿಗೆ ಆಗುತ್ತಿರಲಿಲ್ಲ, ಹಾಗೆಂದು ಆ ತುಂಬು ಗರ್ಭಿಣಿಗೆ ಇಂತಹ ಕಳಂಕಿಣಿ ಎಂದು ಅಮಾನವೀಯವಾಗಿ ಆರೋಪಿಸುತಿರುವ ಕಠೋರವಾದ ಸುದ್ದಿಯನ್ನು ಹೇಳಲೂ ಆತನಿಗೆ ಸಾಧ್ಯವಾಗುತ್ತಿರಲಿಲ್ಲ, ಎಂತಹ ಹೃದಯ ವಿದ್ರಾವಕ ಸ್ಥಿತಿ ದಶರಥನಂದನÀನದ್ದು ಎಂದು ಊಹಿಸಲೂ ಸಾಧ್ಯವಿಲ್ಲ. ಸೀತೆಯನ್ನು ಅಗಲಿ ಬದುಕಲೂ ಆಗದ ಪರಿಸ್ಥಿತಿ ಕೌಸಲ್ಯನಂದನನÀದ್ದು. ಆದರೆ ರಾಜನಾದವನು ಪ್ರಜೆಗಳನ್ನು ಶಾಂತಯುತವಾಗಿ ನೋಡಿಕೊಳ್ಳುವ ಹೊಣೆ, ತನ್ನ ಮನಸ್ಸು ಛಿದ್ರವಾದರು ಸರಿ, ತನ್ನ ಮೇಲೆ ಕಟುಕ ಎಂಬ ಆರೋಪ ಬಂದರೂ ಸರಿ. ತಾನು, ಸೀತೆ ಬೇರೆಯಾಗಿ ಬದುಕುವ ವಿರಹದಂತಹ ವಿಷವನ್ನು ಸೇವಿಸಲು ಕೈ ಹಾಕಿದ ತ್ಯಾಗಮಯಿ ಈ ನಾರಾಯಣ.


ಹೀಗಿರುವಾಗ ಅದೆಂತಹ ಕಷ್ಟ ಬಂದಾಗಲೂ ಹೆದರದೆ, ಆಂತಹ ರಾವಣನ ಕಿಂಕರಿಯರು ಸದಾ ರಾವಣನ್ನು ವರಿಸು ಎಂದು ಹಿಂಸಿಸುತ್ತಿದ್ದರೂ. ಹಾಗೆಯೇ ಕಣ್ಣ ಮುಂದೆ ಬೆಲೆಬಾಳುವ ವೈಭೋಗದ ಸಿರಿ-ಸಂಪತ್ತೇ ಇದ್ದರೂ, ಅದೆಂತಹದ್ದೇ ಮನಮೋಹಕ-ರಮಣೀಯ ಅಶೋಕ ವನದಲ್ಲೂ, ರಾವiನಾಮವನ್ನು ಬಿಟ್ಟೂ ಬಿಡದೇ ಕಣ್ಣುಮುಚ್ಚಿ ಜಪಿಸುವ ಆಕೆಯ ಧೈರ್ಯ, ನಂಬಿಕೆ, ಸಹನೆ, ವಿವೇಕ, ರಾಮನಿಗಾಗಿ ಇರುವ ಆಕೆಯ ಅಕಳಂಕಿತ, ಧೃಡ ಪ್ರೀತಿ, ಪತಿವ್ರತ ಸಂಕಲ್ಪ ಎಷ್ಟು ಅನುಕರಣೀಯ!


ಹನುಮಂತನನ್ನು, ತನ್ನ ಮೈದುನರನ್ನು ತಾಯಿಯ ಮಮಕಾರ, ಪ್ರೀತಿಯಿಂದ ನೋಡುವ ಆಕೆಯ ವಿವೇಕ, ಮಮತೆಯ ನಡತೆ ಅತ್ಯೋನ್ನತವಾದದ್ದು.


ಒಟ್ಟಿನಲ್ಲಿ ಮನುಷ್ಯರು ಉತ್ತಮವಾದ ಸದ್ಗುಣಗಳನ್ನು ಹೊಂದಲಿ ಎಂದು, ಮನುಷ್ಯರ ತೀರಾ ಕ್ಷÄಲ್ಲಕ ನಡವಳಿಕೆ-ನಿರ್ಧಾರಗಳು ಎಂತಹ ದುಷ್ಪರಿಣಾಮವನ್ನು ಬೀರುತ್ತದೆ ಹಾಗು ಎಂತಹ ಪರಿಸ್ಥಿತಿಯಲ್ಲೂ ತಾಳ್ಮೆ, ಸ್ವಾಭಿಮಾನ, ಒಳ್ಳೆಯ ಆದರ್ಶಗಳನ್ನು ಎಂದಿಗೂ ಕೈಬಿಡಬಾರದು ಎಂದು ತಿಳಿಸಲು. ದುಷ್ಟರ ಸಂಹಾರಕ್ಕೆ ಕಾಲ-ಕಾಲಕ್ಕೆ ಮಹಾಪುರುಷನ ರೂಪದಲ್ಲಿ ದೇವರು ಅವತಾರ ತಾಳಿ ಕಾಪಾಡಲು ಬಂದೆ ಬರುತ್ತಾನೆ ಎಂದು ಮನುಕುಲಕ್ಕೆ ತೋರಿಸಲು ಜಗನ್ಮಾತೆ-ಜಗದೊಡೆಯರಾದ ಲಕ್ಷ್ಮೀ-ನಾರಾಯಣರು ಮನುಷ್ಯ ಜನ್ಮವನೆತ್ತಿ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿ ಮಾದರಿಯಾಗುವ ಅವರ ತ್ಯಾಗದ ಆದರ್ಶವು, ಅದನ್ನು ಮನುಕುಲಕ್ಕಾಗಿ ಮಹಾಕಾವ್ಯ ರಾಮಾಯಣದ ರೂಪದಲ್ಲಿ ಚಿತ್ರಿಸಿದ ಮಹರ್ಷಿ ವಾಲ್ಮೀಕಿಯವರ ಶ್ರಮವೂ ಸ್ಮರಣೀಯವಾಗಿದೆ.


****************************


-ಛಾಯಾದೇವಿ.ವಿ.ವೈ

2ನೇ, ಬಿ.ಎಸ್ಸಿ,

ಎಂ.ಇ.ಎಸ್ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು,

ಮಲ್ಲೇಶ್ವರಂ, ಬೆಂಗಳೂರು-560003.



ಲೇಖಕಿಯ ಕಿರು ಪರಿಚಯ:

ಶಿಕ್ಷಣ: ಪ್ರಸ್ತುತ ಎಂ.ಇ.ಎಸ್ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಮಲ್ಲೇಶ್ವರಂನಲ್ಲಿ ಎರಡನೇ ಬಿ.ಎಸ್ಸಿ, ರಸಾಯನಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯದಲ್ಲಿ ವ್ಯಾಸಂಗ.

ಹವ್ಯಾಸ: ಓದುವುದು, ಕಥೆ ಬರೆಯುವುದು, ಯೋಗ-ಧ್ಯಾನದಲ್ಲಿ 

ಪಠ್ಯೇತರ ಚಟುವಟಿಕೆಗಳು: ಪಿ. ಎಫ್ ಹಾಗು ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆಗಳಿಂದ ಏರ್ಪಡಿಸಿದ ಪ್ರಬಂಧ ರಚನೆ, ಭಾಷಣ ಮತ್ತು ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನು ಗಳಿಸಿದ್ದಾರೆ. ಪ್ರೌಢಶಾಲೆಯಿಂದಲೂ ಪ್ರತಿಭಾ ಕಾರಂಜಿ ಹಾಗೂ ಅನೇಕ ಅಂತರ ಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಭಾಷಣ, ಚರ್ಚಾ ಸ್ಪರ್ಧೆ ಹಾಗು ಪ್ರಬಂಧ ಸ್ಪರ್ಧೆಗಳಿಗಾಗಿ ಪಡೆದಿದ್ದಾರೆ.

ಭಾರತ, ಭಾರತೀಯತೆ ಇವುಗಳಲ್ಲಿ ಅಪಾರ ಗೌರವ, ಆಸಕ್ತಿ ಹೊಂದಿರುವ ಇವರು ದೇಶದ ಹಿರಿಮೆ ಎತ್ತಿ ಹಿಡಿಯವ ಕಾರ್ಯಗಳಲ್ಲಿ ಆಸಕ್ತರಾಗಿದ್ದಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top