ಮುಳಿಯಾರು: ಮುಳಿಯಾರಿನ ಗೋಳಿಯಡ್ಕ ಶ್ರೀ ವೆಂಕಟ್ರಮಣ ಆದಿಭೈರವ ಅಮ್ಮನವರ್ ಕ್ಷೇತ್ರ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಲೋಕಾರ್ಪಣೆಯು ಶ್ರೀ ಕ್ಷೇತ್ರ ಸನ್ನಿಧಿಯಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ನವೀನ್ ಕುಮಾರ ಭಟ್ ಅವರು ಶ್ರೀಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಸುಂದರ ಅವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿ ಉದ್ಘಾಟನೆಗೊಳಿಸಿದರು. ಈ ಸಂದರ್ಭದಲ್ಲಿ ನಿಧಿ ಸಮರ್ಪಣೆಯು ಜರಗಿತು.
ಕ್ಷೇತ್ರ ಪುನರ್ನಿರ್ಮಾಣ ಸಮಿತಿ ಅಧ್ಯಕ್ಷರಾದ ವಾಮನ ಆಚಾರ್ಯ ಬೋವಿಕ್ಕಾನ, ಉಪಾಧ್ಯಕ್ಷ ಮಧು ಕೋಡಿ, ವಿಷ್ಣುಮೋಹನ ಆಯಲ್ ಕುಂಜೆ, ಅಪ್ಪುಟ್ಟ ಅಮ್ಮಂಗೋಡ್, ಪ್ರಭಾಕರನ್, ಗೋಪಿ, ಮಣಿಕಂಠನ್, ಶಶಿ, ರಾಧಾಕೃಷ್ಣ ಪದಾಧಿಕಾರಿಗಳು, ಸದಸ್ಯರು, ಮಹಿಳಾಸಮಿತಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ