ಭಗವಂತನ ಜ್ಞಾನ ಭಕ್ತಿಯ ಸಮ್ಯಕ್ ದರ್ಶನ ಮಾಡಿಸಿದ ಶ್ರೇಷ್ಠ ಗುರುಗಳು ಮಧ್ವರು: ಪೇಜಾವರ ಶ್ರೀ

Upayuktha
0

ಅಯೋಧ್ಯೆಯಿಂದ ಮಧ್ವನವಮೀ ಸಂದೇಶ



ಅಯೋಧ್ಯೆ: ಜಗನ್ನಿಯಾಮಕನಾದ ದೇವರಿಗೆ ಹಾಗೂ ಜಡ ಪದಾರ್ಥಗಳಿಗೂ ಭವಬಂಧನಗಳಿಲ್ಲ. ಆದರೆ ಜೀವರಾಶಿಗಳಿಗೆ ಇದೆ. ಈ ಬಂಧನದಿಂದ ಮುಕ್ತಿಗೆ ಭಗವದ್ಭಕ್ತಿಯೇ ಸಾಧನ. ಆದರೆ ಭಕ್ತಿ ಹೊಂದಲು ದೇವರ ಬಗೆಗಿನ ಜ್ಞಾನವೇ ಸೇತು. ಭಗವಂತನ ಜ್ಞಾನ ಮತ್ತು ಭಕ್ತಿ ಮತ್ತು ಆ ಮೂಲಕ ಭವಬಂಧನದಿಂದ ಮುಕ್ತಿ ಪಡೆದು ಮೋಕ್ಷ ಸಾಧನೆಯ ಸಮ್ಯಕ್ ದರ್ಶನ ಮಾಡಿಸಿದ ಶ್ರೇಷ್ಢ ಗುರುಗಳು ಜಗದ್ಗುರು ಮಧ್ವಾಚಾರ್ಯರು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಧ್ವಗುರುಗಳನ್ನು ಸ್ಮರಿಸಿದರು.


ಅಯೋಧ್ಯೆಯಲ್ಲಿ ಭಾನುವಾರ ಮಧ್ವನವಮೀ ಪ್ರಯುಕ್ತ ಮಧ್ವಗುರುಗಳ ಭಾವಚಿತ್ರ ಮಧ್ವಾಚಾರ್ಯ ವಿರಚಿತ ಗ್ರಂಥಗಳ ವೈಭವದ ಪುರವಣಿಗೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು.


ಹಿರಿಯ ವಿದ್ವಾಂಸರುಗಳಾದ ವೇದವ್ಯಾಸ ತಂತ್ರಿ ಶಿಬರೂರು, ಕಮಲಾದೇವಿ ಪ್ರಸಾದ ಆಸ್ರಣ್ಣ, ಶಶಾಂಕ ಭಟ್, ನಂಬಿ ವಾಸುದೇವ  ಆಚಾರ್ಯ  ಮೊದಲಾದವರು ಗುರುಸ್ಮರಣೆಗೈದು ಮಾತನಾಡಿದರು.


ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಪ್ರಸಾದ್, ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್, ಲಕ್ಷ್ಮೀನಾರಾಯಣ ಆಚಾರ್ಯ, ಅಶ್ವತ್ಥ, ರಾಘವೇಂದ್ರ ಭಟ್ ಮೊದಲಾದವರು ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top