2030ರ ವೇಳೆಗೆ ಕೈಗಾರಿಕಾ ಸೂಪರ್ ಪವರ್ ಆಗಿ ಭಾರತ: ಪ್ರೊ. ಎನ್. ರಮೇಶ್ ಬಾಬು

Upayuktha
0



ಬೆಂಗಳೂರು: ಜನವರಿ 31 2030ರ ವೇಳೆಗೆ ಭಾರತ ಕ್ಷೇತ್ರದಲ್ಲಿ ಸೂಪರ್ ಪವರ್ ಆಗಿ ಹೊಮ್ಮಬೇಕಾದರೆ, ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಅಗತ್ಯ ಎಂದು, ಪ್ರೊ. ಎನ್. ರಮೇಶ್ ಬಾಬು, ಪ್ರಾದ್ಯಾಪಕರು, ಮೆಕ್ಯಾನಿಕಲ್ ಎಂಜಿನಿಯರಿಂಗ್  ವಿಭಾಗ ಐಐಟಿ ಮದ್ರಾಸ್ ಮತ್ತು ಕಾರ್ಯದರ್ಶಿ, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಡೆವಲಪ್ಮೆಂಟ್ ಸೆಂಟರ್, (ಎಎಂಟಿಡಿಸಿ) ಐಐಟಿ ಮದ್ರಾಸ್ ತಿಳಿಸಿದ್ದಾರೆ.



ನಗರದಲ್ಲಿ ಜಪಾನ್ ದೇಶದ ತಂತ್ರಜ್ಞಾನ ಸಂಸ್ಥೆ ಆಲ್ಫಾ ಟಿಕೆಜಿ ಸಂಸ್ಥೆಯ 10ನೇ ವಾರ್ಷಿಕೋತ್ಸವದ ಅಂಗವಾಗಿ ಶೀಟ್ ಮೆಟಲ್ ಕೈಗಾರಿಕಾ ಕ್ಷೇತ್ರದ ಡಿಜಿಟಲೀಕರಣಕ್ಕಾಗಿ ಅಭಿವೃದ್ಧಿ ಪಡಿಸಿರುವ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಡಿಜಿಟಲ್ ತಂತ್ರಜ್ಞಾನ ಕುರಿತು ನಗರದಲ್ಲಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.



ಎಎಂಡಿಟಿಸಿ, ಐಐಟಿ ಮದ್ರಾಸ್ ರಿಸರ್ಚ್ ಪಾರ್ಕ್ ಸಹಯೋಗದಲ್ಲಿ ಈ ವಿಚಾರ ಸಂಕಿರಣ ನಡೆಯಿತು. "ಈ ತಂತ್ರಜ್ಞಾನ ಅಭಿವೃದ್ಧಿಗೆ ಶೈಕ್ಷಣಿಕ ಸಂಸ್ಥೆಗಳು ಹಾಗು ತಂತ್ರಜ್ಞಾನ ಸಂಸ್ಥೆಗಳು ಕೈ ಜೋಡಿಸಿ ಕೆಲಸ ಮಾಡಬೇಕಿದೆ," ಎಂದು ಅವರು ತಿಳಿಸಿದರು.



ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಲ್ಫಾಟಿಕೆಜಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತೋಶಿಯೋ ತಕಾಗಿ ಅವರು ಸಂಸ್ಥೆಯು ಭಾರತದ ಅಭಿವೃದ್ಧಿ ಶಕೆಯ ಭಾಗಿಯಾಗಲು ಸಂಸ್ಥೆ ಹೆಮ್ಮೆ ಪಡುತ್ತದೆ ಎಂದು ತಿಳಿಸಿದರು. ಸಂಸ್ಥೆಯ ಇತ್ತೀಚಿನ ಮೂರು ಪ್ರಮುಖ ಸಾಫ್ಟ್ವೇರ್ ಗಳಾದ ಆಲ್ಫಾ ಜೂಲಿಯಾ, ಆಲ್ಫಾ ಪ್ರಿಮೋ, ಆಲ್ಫಾ 100 ಅನ್ನು ವಿವರಿಸಿದರು.



ಆಲ್ಫಾ ಟಿಟಿಕೆಜಿ ಇಂಟಿಗ್ರೇಟೆಡ್ ಸೊಲ್ಯೂಷನ್ಸ್ (ಭಾರತ) ಸಿಇಒ ಡಾ. ತಾನಪಾಂಡಿ, ಆಲ್ಫಾ ಟಿಟಿಕೆಜಿಯ ಸೇವೆಗಳ ನಿರ್ದೇಶಕರಾದ ಯಮಮೊಟ್ಟೊ ಶಿಯೋ, ರಾಜೀವ್ ಲೋಚನಾ, ಸಹಾಯಕ ಪ್ರಾಧ್ಯಾಪಕರು, ಅಮೃತ ಸ್ಕೂಲ್ ಆಫ್ ಎಂಜಿನಿಯರಿಂಗ್ , ಬೆಂಗಳೂರು, ಹೇಮೇರ್ ಸಂಸ್ಥೆಯಯ ಉದಯ್, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top